ಮೈಸೂರು: ನಗರದಲ್ಲಿ ಅನೈತಿಕ ಸಂಬಂಧಕ್ಕೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಆರೋಪ ಕೇಳಿ ಬಂದಿದೆ. ಮದುವೆಯಾಗಿದ್ದರೂ ಬೇರೊಬ್ಬ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಂತ ವ್ಯಕ್ತಿಯನ್ನು ಬೆಳಗಾಗುವುದರೊಳಗೆ ಬರ್ಬರವಾಗಿ ಹತ್ಯೆ ಮಾಡಿರೋದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೈಸೂರಿನ ಅನುಗನಹಳ್ಳಿಯಲ್ಲಿ ಇನ್ಟಾ ಗ್ರಾಂನಲ್ಲಿ ಪರಿಚಯವಾಗಿದ್ದಂತ ಶ್ವೇತಾ ಎಂಬಾಕೆಯೊಂದಿಗೆ ಸೂರ್ಯ ಎಂಬಾತ ಅನೈತಿಕ ಸಂಬಂಧವನ್ನು ಹೊಂದಿದ್ದನು. ಈತನನ್ನು ತೋಟದ ಮನೆಗೆ ನಿನ್ನೆ ರಾತ್ರಿ ಶ್ವೇತಾ ಕರೆದುಕೊಂಡು ಹೋಗಿದ್ದಳು. ಇಂದು ಬೆಳಗಾಗುವುದರೊಳಗೆ ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರೋ ಆರೋಪಿವನ್ನು ಸೂರ್ಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಶ್ವೇತಾ ಇನ್ಟಾ ಗ್ರಾಂನಲ್ಲಿ ಪರಿಚಯವಾಗಿದ್ದರು. ಸೂರ್ಯನ ಅನೈತಿಕ ಸಂಬಂಧದ ಬಗ್ಗೆ ಕುಟುಂಬಸ್ಥರು ಎಚ್ಚರಿಸಿದ್ದರೂ ಆತ ಆಕೆಯ ಸಂಗವನ್ನು ಬಿಟ್ಟಿರಲಿಲ್ಲ. ನಿನ್ನೆ ಶ್ವೇತಾ ಕಡೆಯವರೇ ರಾತ್ರಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿರೋದಾಗಿ ಸೂರ್ಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಲ್ಲಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳ ಅರೆಸ್ಟ್: 2.40 ಲಕ್ಷ ಮೌಲ್ಯದ ಚಿನ್ನಾಭರಣ, ವಸ್ತು ಜಪ್ತಿ
178 ಪ್ರಯಾಣಿಕರಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: 12 ಜನರಿಗೆ ಗಾಯ