ಕಲಬುರ್ಗಿ: ಲೋಕಸಭಾ ಚುನಾವಣೆ ಬೆನ್ನಲ್ಲೇ ಕಲಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ರಾಜಕೀಯ ವೈಷಮ್ಯಕ್ಕಾಗಿ ಜಾವೀದ್ ಚಿನ್ನಮಳ್ಳಿ(27) ಎಂಬಾತನನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು, ಬಾವಿಗೆ ಎಸೆದಿರುವಂತ ಘಟನೆ ನಡೆದಿದೆ.
ಕಳೆದ ಅಮವಾಸ್ಯೆ ದಿನದಂದು ದುಷ್ಕರ್ಮಿಗಳು ಪಾರ್ಟಿ ಮಾಡೋದಕ್ಕೆ ಕರೆದೊಯ್ದು, ಜಮೀನಿನಲ್ಲಿ ಪಾರ್ಟಿ ಮಾಡಿಸಿ, ನಂತ್ರ ಬರ್ಬರವಾಗಿ ಹತ್ಯೆ ಮಾಡಿ ಬಾವಿಗೆ ಎಸೆದಿದ್ದಾರೆ ಎನ್ನಲಾಗಿದೆ. ಈ ಹತ್ಯೆಯ ಹಿಂದಿನ ಕಾರಣ ಕಾಂಗ್ರೆಸ್ ಪರ ಮತ ಹಾಕಿದ್ದಕ್ಕೆ, ಪ್ರಚಾರ ಮಾಡಿದ್ದಕ್ಕೆ ಎಂಬುದಾಗಿ ಹೇಳಲಾಗುತ್ತಿದೆ.