ರಾಯಚೂರು: ಕೌಟುಂಬಿಕ ಕಲಹದಿಂದಾಗಿ ಪತ್ನಿ ಹಾಗೂ ಆಕೆಯ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿಯೊಬ್ಬ ಪರಾರಿಯಾಗಿರುವಂತ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ಏಗನೂರಿನಲ್ಲಿ ಮೊದಲ ಪತ್ನಿಯಿಂದ ದೂರಾಗಿ, ಎರಡನೇ ಮದುವೆಯನ್ನು ತಿಮ್ಮಪ್ಪ ಎಂಬಾತ ಆಗಿದ್ದನು. ಮೊದಲ ಪತ್ನಿ ಪದ್ಮಾವತಿ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು.
ಇದೇ ಸಿಟ್ಟಿನಲ್ಲಿ ಯುಗಾದಿ ಹಬ್ಬದ ದಿನದಂದು ಇಂದು ಮನೆಗೆ ನುಗ್ಗಿದಂತ ತಿಮ್ಮಪ್ಪ, ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆಕೆಯನ್ನು ರಕ್ಷಿಸೋದಕ್ಕೆ ಬಂದಂತ ತಂಗಿ ಭೂದೇವಿಯ ಮೇಲೂ ಹಲ್ಲೆ ಮಾಡಿದ್ದಾನೆ.
ಮಚ್ಚಿನಿಂದ ಪತ್ನಿ ಪದ್ಮಾವತಿ ಹಾಗೂ ಆಕೆಯ ಸಹೋದರಿ ಭೂದೇವಿಯ ಮೇಲೆ ಹಲ್ಲೆ ಮಾಡಿದಂತ ತಿಮ್ಮಪ್ಪ, ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದಂತ ಪದ್ಮಾವತಿ ಹಾಗೂ ಭೂದೇವಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.