ಕೋಲಾರ: ಕುಡಿಯೋದಕ್ಕೆ ಹಣ ನೀಡದಿಲ್ಲ ಅಂತ ಚಿಕ್ಕಮ್ಮನನ್ನೇ ಬಿಯರ್ ಬಾಟಲಿಯಿಂದ ತಿವಿದು ಹತ್ಯೆ ಮಾಡೋದಕ್ಕೆ ಯತ್ನಿಸಿದಂತ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದಾಸೇಗೌಡನೂರು ಬಳಿಯಲ್ಲಿ ಗರುಡ ಕೆಂಪನಹಳ್ಳಿ ಗ್ರಾಮ ಅನಸೂಯ(35) ಎಂಬ ಮಹಿಳೆಯನ್ನು ಅದೇ ಗ್ರಾಮದ ಆನಂದ್ (26) ಕೊಲೆ ಯತ್ನ ನಡೆಸಿದ್ದನು.
ಕುಡಿಯೋದಕ್ಕೆ ಹಣ ನೀಡುವಂತೆ ತನ್ನ ಚಿಕ್ಕಮ್ಮ ಅನಸೂಯ ಅವರನ್ನು ಆನಂದ್ ಪೀಡಿಸುತ್ತಿದ್ದನು. ಆದರೇ ಹಣ ಇಲ್ಲವೆಂದು ಅನಸೂಯ ನಿರಾಕರಿಸಿದ್ದರು. ಈ ಕಾರಣಕ್ಕಾಗಿ ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾನೆ.
ಬಿಯರ್ ಬಾಟಲಿಯಿಂದ ಚುಚ್ಚಿದ ಕಾರಣ ಅನಸೂಯ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಆರೋಪಿ ಆನಂದ್ ನನ್ನು ಕಾಮಸಮುದ್ರ ಪೊಲೀಸರು ಬಂಧಿಸಿದದಾರೆ.
BIG NEWS: 2028ರಲ್ಲಿ ನಮ್ಮ ಸರ್ಕಾರ ಬಂದ್ರೆ ‘ಗೃಹಲಕ್ಷ್ಮಿ ಹಣ’ವನ್ನು 4,000 ರೂ.ಗೆ ಏರಿಕೆ: ಕಾಂಗ್ರೆಸ್ ಶಾಸಕ
BREAKING NEWS: ಬಿಡದಿಯ ಖಾಸಗಿ ಕಾರ್ಖಾನೆಯೊಂದರಲ್ಲಿ ಪಾಕ್ ಪರ ಗೋಡೆ ಬರಹ ಬರೆದಿದ್ದ ಇಬ್ಬರು ಅರೆಸ್ಟ್
BREAKING NEWS: ವಿಧಾನಸಭೆಯಲ್ಲಿ ‘ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ’ ಅಂಗೀಕಾರ