ಬೆಂಗಳೂರು: ಬೆಂಗಳೂರಿನಲ್ಲಿ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂಬುದಾಗಿ ಮನನೊಂದು ವ್ಯಕ್ತಿಯೊಬ್ಬ ರಾಜಭವನದ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ನಡೆದಿದೆ.
ಬೆಂಗಳೂರಿನ ರಾಜಭವನದ ಎದುರೇ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂಬುದಾಗಿಯೂ ಆತ್ಮಹತ್ಯೆಗೆ ಮುನ್ನಾ ಆರೋಪಿಸಿದ್ದಾನೆ.
ಇನ್ನೂ ಹೆಂಡತಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ. ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ನನಗೆ ಬದುಕಲು ದಾರಿ ಇಲ್ಲ. ಸಾಯುವುದೊಂದೇ ದಾರಿ ಎಂದು ವ್ಯಕ್ತಿ ಹೇಳಿದ್ದಾನೆ. ಕೂಡಲೇ ಆತ್ಮಹತ್ಯೆಗೆ ಯತ್ನಿಸಿದಂತ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ತಕ್ಷಣ ಕರೆದೊಯ್ಯದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಾತಿ ಗಣತಿ ವರದಿ ಬಗ್ಗೆ ಸರ್ಕಾರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಭಾರತದ H-1B, ಗ್ರೀನ್ ಕಾರ್ಡ್ ಹೊಂದಿರುವವರು ದಿನದ 24 ಗಂಟೆಯೂ ಗುರುತಿನ ಚೀಟಿ ಹೊಂದಿರಬೇಕು: ಅಮೇರಿಕಾದ ಹೊಸ ನಿಯಮ