ಆಂಧ್ರಪ್ರದೇಶ: ರಾಜ್ಯದಲ್ಲಿ ಪ್ರೇಮಿಗಳ ದಿನದಂದೇ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ಯುವಕನೊಬ್ಬ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿರುವಂತ ಘಟನೆ ಆಂಧ್ರಪ್ರದೇಶದ ಅನ್ನಯ್ಯ ಜಿಲ್ಲೆಯಲ್ಲಿ ನಡೆದಿದೆ.
ಯುವತಿಯೊಬ್ಬಳನ್ನು ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದಿದ್ದಂತ ಪಾಗಲ್ ಪ್ರೇಮಿ ಗಣೇಶ್ ಎಂಬಾತನೇ ಇಂತಹ ದುಶ್ ಕೃತ್ಯ ವೆಸಗಿದಂತವನಾಗಿದ್ದಾನೆ. ಯುವತಿಯನ್ನು ಪ್ರೀತಿಸುವಂತೆ ಗಣೇಶ್ ಹಿಂದೆ ಬಿದ್ದಿದ್ದನು. ಆದರೇ ಅದಕ್ಕೆ ಯುವತಿ ಒಪ್ಪಿಕೊಂಡಿರಲಿಲ್ಲ.
ಇದೇ ಸಿಟ್ಟಿನಲ್ಲಿ ಇಂದು ಯುವತಿಯ ಬಾಯಿಗೆ ಪಾಗಲ್ ಪ್ರೇಮಿ ಗಣೇಶ್ ಆ್ಯಸಿಡ್ ಸುರಿದು, ಚಾಕುವಿನಿಂದ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾನೆ. ಆ್ಯಸಿಡ್ ದಾಳಿಗೆ ಒಳಗಾದಂತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದಂತ ಯುವಕ ಗಣೇಶ್ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಂದಹಾಗೇ ಏಪ್ರಿಲ್ 29ರಂದು ಯುವತಿಗೆ ಮತ್ತೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಅಂದುಕೊಂಡಂತೆ ಆಗಿದ್ದರೇ ಮುದುವೆಯಾಗಬೇಕಿತ್ತು. ಈಗ ಆ್ಯಸಿಡ್ ದಾಳಿಯಿಂದ ಯುವತಿ ಗಾಯಗೊಂಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
KNN Special Story: ಭಾರತದ ಮೊದಲ ‘ವರ್ಟಿಕಲ್ ಲಿಫ್ಟಿಂಗ್ ಸೇತುವೆ’ ಉದ್ಘಾಟನೆಗೆ ಸಿದ್ಧ: ಹೀಗಿದೆ ವಿಶೇಷತೆ