ಕೊಡಗು: ಧನ ಮೇಯಿಸೋದಕ್ಕೆ ತೆರಳಿದ್ದಂತ ವ್ಯಕ್ತಿಯೊಬ್ಬರ ಮೇಲೆ ಹುಲಿಯೊಂದು ದಾಳಿ ನಡೆಸಿದ ಘಟನೆ ಕೊಡಗಿನಲ್ಲಿ ನಡೆದಿದೆ. ಹುಲಿ ದಾಳಿಗೆ ಒಳಗಾದಂತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಿಟ್ಟೂರಿನ ಕೆರೆ ಬಳಿಯಲ್ಲಿ ಅಸ್ಸಾಂ ಮೂಲದ ರೆಹಮಾನ್ ಎಂಬಾತ ಧನ ಮೇಯಿಸೋದಕ್ಕೆ ತೆರಳಿದ್ದನು. ಈ ವೇಳೆ ಆತನ ಮೇಲೆ ಹುಲಿ ದಾಳಿ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ.
ದನಗಳ ಮೇಲೆ ದಾಳಿ ನಡೆಸಿರೋದಲ್ಲದೇ, ಅದನ್ನು ತಡೆಯೋದಕ್ಕೆ ಹೋದಂತ ರೆಹಮಾನ್ ಮೇಲೆಯೂ ಹುಲಿ ದಾಳಿ ನಡೆಸಿದೆ. ಈ ದಾಳಿಗೆ ಒಳಗಾದಂತ ರೆಹಮಾನ್ ತೀವ್ರ ರಕ್ತಸ್ತ್ರಾವದೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಲಾಗಿದೆ.
`ಕಾಂಗ್ರೆಸ್ ಗೆ ಮತ ಹಾಕಿ’ : ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಅಬ್ಬರದ ಪ್ರಚಾರ!