ಬೆಂಗಳೂರು: ನಗರದ ವೈಟ್ ಫೀಲ್ಡ್ ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಂತ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು 57 ಲ್ಯಾಪ್ ಟಾಪ್ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಲ್ಯಾಪ್ ಟಾಪ್ ಕದ್ದಿದ್ದು ಏಕೆ ಎನ್ನುವ ಪೊಲೀಸರ ತನಿಖೆಯ ಪ್ರಶ್ನೆಗೆ ಆರೋಪಿ ಹೇಳಿದಂತ ಉತ್ತರ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಆ ಬಗ್ಗೆ ಮುಂದೆ ಓದಿ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೂಸೂರು ತಾಲ್ಲೂಕಿನ ತೋರಪಲ್ಲಿ ಗ್ರಾಮದ ಮುರುಗೇಶ್ ವೈಟ್ ಫೀಲ್ಡ್ ನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಈ ಕಂಪನಿಯಲ್ಲಿ ಬರೋಬ್ಬರಿ 22 ಲಕ್ಷ ಮೌಲ್ಯದ 57 ಲ್ಯಾಪ್ ಟಾಪ್ ಕಳ್ಳತನವಾಗಿತ್ತು. ಈ ಸಂಬಂಧ ಕಂಪನಿ ವ್ಯವಸ್ಥಾಪಕರು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ತನಿಖೆ ನಡೆಸಿದಂತ ಪೊಲೀಸರು ಕಂಪನಿಯ ಸಿಸ್ಟಂ ಅಡ್ಮಿನ್ ಕೆಲಸ ಮಾಡುತ್ತಿದ್ದಂತ ಆರೋಪಿ ಮುರುಗೇಶ್ ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ಅವರ ಮೇಲೆ ಅನುಮಾನಬಂದು ವಶಕ್ಕೆ ಪಡೆದು ವಿಚಾರಿಸಿದಾಗ ಕಂಪನಿಗೆ ಸೇರಿದಂತ ಲ್ಯಾಪ್ ಟಾವ್ ಎಲ್ಲಿ ಇಡುತ್ತಿದ್ದರು ಎಂಬ ಮಾಹಿತಿ ತಿಳಿದು ದಿನಕ್ಕೊಂದು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಅಂದಹಾಗೇ ಕೋವಿಡ್ ಸಂದರ್ಭದಲ್ಲಿ ಆರೋಪಿ ಆರು ಎಕರೆಲ್ಲಿ ಟೊಮೆಟೋ ಬೆಳೆದಿದ್ದನು. ಟೊಮೆಟೋ ಬೆಳೆಯಿಂದ 25 ಲಕ್ಷ ನಷ್ಟವಾಗಿತ್ತು. ಸಾಲ ತೀರಿಸಲು ಲ್ಯಾಪ್ ಟಾಪ್ ಕಳಪು ಮಾಡಿದ್ದಾಗೆ ಪೊಲೀಸರ ಮುಂದೆ ಹೇಳಿದ್ದಾನೆ. ಹೀಗೆ ಕದ್ದಿದ್ದಂತ 57 ಲ್ಯಾಪ್ ಟಾಪ್ ಗಳಲ್ಲಿ 50 ಲ್ಯಾಪ್ ಟಾಪ್ ಅನ್ನು ಪೊಲೀಸರು ರಿಕವರಿ ಮಾಡಿದ್ದಾರೆ.
BREAKING: ಹಾವೇರಿ ಬಳಿ ಖಾಸಗಿ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ