ಬೆಂಗಳೂರು: ನಗರದಲ್ಲಿನ ವ್ಯಕ್ತಿಯೊಬ್ಬ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಟಿಕೆಟ್ ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದಂತ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಯಲಹಂಕ ಮೂಲಕ ಮಾರುತಿ ಎಂಬಾತನೇ ಬಂಧನಕ್ಕೆ ಒಳಗಾದಂತ ಆಸಾಮಿ. ವೃತ್ತಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದಂತ ಮಾರುತಿ, ಹಲವು ಸಚಿವರು, ರಾಜಕೀಯ ಮುಖಂಡರ ನಕಲಿ ಲೆಟರ್ ಹೆಡ್ ಬಳಸಿ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಟಿಕೆಟ್ ಕೊಡಿಸುವುದಾಗಿ ಭಕ್ತಾಧಿಗಳಿಂದ ಹಣ ಪಡೆದು ವಂಚಿಸುತ್ತಿದ್ದರಂತೆ.
ಇದಷ್ಟೇ ಅಲ್ಲದೇ ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶ ಮುಖ್ಯಮಂತ್ರಿ ಕಚೇರಿಗೂ ಕರೆ ಮಾಡಿದ್ದಂತ ವಂಚಕ ಮಾರುತಿ, ತಾನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾತನಾಡುತ್ತಿದ್ದೇನೆ. ನನಗೆ ಪರಿಚಯಸ್ಥ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಿದ್ದಾರೆ. ಅವರಿಗೆ ವಿಐಪಿ ಟಿಕೆಟ್ ಕೊಡಿಸುವಂತೆ ಸೂಚಿಸಿದ್ದಾನೆ. ಅಲ್ಲದೇ ಕೊಡಿಸದೇ ಇದ್ದರೇ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತುಗೊಳಿಸುವುದಾಗಿಯೂ ಬೆದರಿಕೆ ಹಾಕಿದ್ದನಂತೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವಿಐಪಿ ಟಿಕೆಟ್ ಸಿಗಲಿದೆ ಎಂಬುದಾಗಿ ನಕಲಿ ಗೃಹ ಸಚಿವರ ಲೆಟರ್ ಹೆಡ್ ಕೊಟ್ಟು ಕಳುಹಿಸಿದ್ದನಂತೆ. ಭಕ್ತರಿಂದ 6 ರಿಂದ 10 ಸಾವಿರ ವಿಐಪಿ ಟಿಕೆಟ್ ಕೊಡಿಸುವುದಾಗಿ ಪಡೆದು ಮಾರುತಿ ವಂಚಿಸುತ್ತಿದ್ದಾಗಿ ದೂರು ದಾಖಲಾಗಿತ್ತು. ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ವಂಚಕ ಮಾರುತಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
BREAKING : ವೃಕ್ಷಮಾತೆ ‘ತುಳಸಿಗೌಡ’ ನಿಧನಕ್ಕೆ ಕನ್ನಡದಲ್ಲೇ ಸಂತಾಪ ಸೂಚಿಸಿದ ಪ್ರಧಾನಿ ಮೋದಿ | PM Modi
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಪೂರ್ಣಗೊಳಿಸಲು ಸರ್ಕಾರ ಬದ್ಧ: ಸಿಎಂ ಸಿದ್ಧರಾಮಯ್ಯ