ಕೆಎನ್ಎನ್ ಸಿನಿಮಾ ಡೆಸ್ಕ್: ಕೆರೆಬೇಟೆ ಎಂಬುದೇ ಮಲೆನಾಡಿನ ವಿಶಿಷ್ಟ ಸಾಂಪ್ರದಾಯಿಕ ಆಚರಣೆಯ ಹಬ್ಬದ ಸ್ವರೂಪದಲ್ಲಿ ನಡೆಯುವ ಸಂಭ್ರಮ. ಅಂದು ಕೆರೆಯಲ್ಲಿನ ಮೀನುಗಳನ್ನ ಹಿಡಿಯೋದೇ ಒಂದು ಸಂಭ್ರಮ. ಇದೇ ಟೈಟಲ್ ನಲ್ಲಿ ತೆರೆ ಕಾಣುತ್ತಿರುವಂತ ಕೆರೆಬೇಟೆ ಸಿನಿಮಾದ ಟ್ರೈಲರ್ ಯೂಟೂಬ್ ನಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ.
ಗೌರಿಶಂಕರ್ ನಟನಾಗಿ, ಬಿಂದು ಶಿವರಾಂ ಅವರ ಜೋಡಿಯೊಂದಿಗೆ ತೆರೆ ಕಾಣುತ್ತಿರೋ ಸಿನಿಮಾ ಕೆರೆಬೇಟೆ. ಮಲೆನಾಡಿನ ಸೊಗಡು, ಸಂಪ್ರದಾಯ, ಕಲೆಯನ್ನು ಬಿಂಬಿಸಿ, ಪ್ರೇಕ್ಷಕರಿಗೆ ತೋರಿಸೋ ಪ್ರಯತ್ನವನ್ನು ನಿರ್ದೇಶಕ ರಾಜಗುರು ಮಾಡಿದ್ದಾರೆ.
ಮಲೆನಾಡಿನಲ್ಲಿ ಆಚರಿಸೋ ಕೆರೆಬೇಟೆಯಿಂದ ಹಿಡಿದು, ದೀಪಾವಳಿ ಹಬ್ಬ, ವಿವಿಧ ಸಂಪ್ರದಾಯಗಳು ಸೇರಿದಂತೆ ವಿಭಿನ್ನ ಸಂಸ್ಕೃತಿಯ ಅನಾವರಣವನ್ನು ಚಿತ್ರತಂಡ ತೋರಿಸೋ ಪ್ರಯತ್ನ ಮಾಡುತ್ತಿದೆ ಎನ್ನಲಾಗುತ್ತಿದೆ.
ಕೆರೆಬೇಟೆ ಸಿನಿಮಾನದಲ್ಲಿ ಲಾರಿ ಡ್ರೈವರ್ ಆಗಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿರೋ ಕಪ್ಪಗಳಲೆಯ ಹೇಮಂತ್ ಅಭಿನಯ, ಚಿಕ್ಕದಾದ್ರೂ ಅದಕ್ಕೊಂದು ಜೀವವನ್ನು ತಂದುಕೊಂಡು ಪ್ರೇಕ್ಷಕರನ್ನು ಹೊಸ ಮುಖದೊಂದಿಗೆ ಸೆಳೆಯೋ ಪ್ರಯತ್ನ ಮಾಡಿದ್ದಾರೆ.
ಅಂದಹಾಗೇ ಕೆರೆಬೇಟೆ ಸಿನಿಮಾಕ್ಕೆ ಹಣ ಹೂಡಿರೋದು ಜಯಶಂಕರ್ ಪಾಟೀಲ್. ಈ ಚಿತ್ರದ ಟ್ರೈಲರ್ ಯೂಟೂಬ್ ನಲ್ಲಿ ಬಿಡುಗಡೆಯಾಗಿದ್ದು, ಮಾರ್ಚ್ ವೇಳೆಗೆ ಚಿತ್ರ ತೆರೆಕಂಡು ಪ್ರೇಕ್ಷಕರನ್ನು ಈ ಹಿಂದಿನ ಸ್ಥಳೀಯ ಸಂಪ್ರದಾಯ, ಆಚರಣೆಗಳ ಚಿತ್ರದಂತೆ ಸೆರೆಹಿಡಿಯೋದರಲ್ಲಿ ಎರಡು ಮಾತಿಲ್ಲ. ಸೋ ಆಲ್ ದಿ ಬೆಸ್ಟ್ ಕೆರೆಬೇಟೆ ಚಿತ್ರಕ್ಕೆ.
ರಾಮ ಮಂದಿರ ಸಮಾರಂಭದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲ್ಲುವ ಬೆದರಿಕೆ ಹಾಕಿದ ಖಲಿಸ್ತಾನ್ ಉಗ್ರ
ಅತೀ ಶೀಘ್ರದಲ್ಲಿ 1,500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಕ್ಕೆ ಕ್ರಮ : ಸಚಿವ ಕೃಷ್ಣ ಬೈರೇಗೌಡ