ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ಸಿನ ನಾಮಕಾವಾಸ್ತೆ ಅಧ್ಯಕ್ಷರು ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಟೀಕಿಸಿದರು.
ನಿಪ್ಪಾಣಿಗೆ ತೆರಳುವ ಭೀಮ ಹೆಜ್ಜೆ 100ರ ಸಂಭ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವು ಆರು ವರ್ಷ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರಿಗೆ ನ್ಯಾಯ ಕೊಟ್ಟಿಲ್ಲ; ಕಾಂಗ್ರೆಸ್ಸಿಗೆ ದಲಿತರ, ಅಸ್ಪರ್ಶ್ಯರ ಮತ ಬೇಕು. ಆದರೆ, ಅವರನ್ನು ಲೆಕ್ಕಕ್ಕೆ ಪರಿಗಣಿಸುವುದಿಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸಿನಲ್ಲಿ ಲೆಕ್ಕಕ್ಕೆ ಇರುವವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾಧ್ರಾ ಎಂದ ಅವರು, ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ಸಿನ ನಾಮಕಾವಾಸ್ತೆ ಅಧ್ಯಕ್ಷರು; ಆದರೆ, ರಾಹುಲ್ ಗಾಂಧಿಗೆ ಸೂಪರ್ ಪವರ್ ಇದೆ ಎಂದು ಆರೋಪಿಸಿದರು.