Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಪ್ಪು ನಾಲಿಗೆಯನ್ನು ಹೊಂದಿರುವ ಯಾರಾದರೂ ನಿಮ್ಮನ್ನು ನಿಂದಿಸಿದರೆ, ಮೊದಲು ಇದನ್ನು ಮಾಡಿ. ಯಾವುದೇ ಸಮಸ್ಯೆ ಇರುವುದಿಲ್ಲ.!

02/04/2026 9:02 AM

ಬೆಂಗಳೂರು ನಗರ ಸಂಚಾರ ದಟ್ಟಣೆ ಸುಧಾರಿಸಲು ಅಧ್ಯಯನ: ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ, ಐಆರ್‌ಟಿಇ ಹಾಗೂ ಡಿಯಾಜಿಯೋ ಸಹಭಾಗಿತ್ವ

02/04/2026 9:00 AM

​ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಂಬ್ ಭೀತಿ: ಇಂಡಿಗೋ ವಿಮಾನದಲ್ಲಿ ಪತ್ತೆಯಾಯ್ತು ‘ಡೇಂಜರ್’ ಚೀಟಿ; 8 ಗಂಟೆ ವಿಳಂಬವಾದ ಅಹಮದಾಬಾದ್ ಪಯಣ!

02/04/2026 8:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಲ್ಲಿಕಾರ್ಜುನ ಖರ್ಗೆ ಕಲಬುರಗಿಗೆ ಬರಲು ಚಿಂಚೋಳಿ ಎಂಪಿ ಅನುಮತಿ ಬೇಕಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು
KARNATAKA

ಮಲ್ಲಿಕಾರ್ಜುನ ಖರ್ಗೆ ಕಲಬುರಗಿಗೆ ಬರಲು ಚಿಂಚೋಳಿ ಎಂಪಿ ಅನುಮತಿ ಬೇಕಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು

By kannadanewsnow0930/04/2024 1:59 PM

ಕಲಬುರಗಿ: ಸೋಲಿನ ಭೀತಿಯಿಂದಾಗಿ ಖರ್ಗೆ ಕಲಬುರಗಿಗೆ ಪದೇ ಪದೇ ಬರುತ್ತಿದ್ದಾರೆ ಎನ್ನುವ ಸಂಸದ ಉಮೇಶ್ ಜಾಧವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಎರಡು ಸಲ ಕಲಬುರಗಿ ಯಿಂದ ಲೋಕಸಭೆ ಸದಸ್ಯರಾಗಿದ್ದವರು. ಈಗ ರಾಜ್ಯಸಭೆ ವಿರೋಧ ಪಕ್ಷದ ನಾಯಕರು. ಅವರು ಕಲಬುರಗಿಗೆ ಬರಲು ಚಿಂಚೋಳಿ ಎಂಪಿ ಅವರ ಅನುಮತಿ ಬೇಕಿಲ್ಲ ಎಂದು ತಿರುಗೇಟು ನೀಡಿದರು.

ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಚಿಂಚೋಳಿ ಎಂಪಿ ಯವರೇ ನೀವು ಕೂಡಾ ಮೋದಿ, ಅಮಿತ್ ಶಾ, ಯಡಿಯೂರಪ್ಪ, ವಿಜಯೇಂದ್ರ, ಸಿ.ಟಿ.ರವಿ ಸೇರಿದಂತೆ ಹಲವಾರು ನಾಯಕರನ್ನು ಕರೆಸಿದ್ದೀರಲ್ಲ ಯಾಕೆ? ನಿಮಗೂ ಸೋಲಿನ ಭೀತಿ ಆವರಿಸಿದೆಯಾ? ಎಂದು ಪ್ರಶ್ನಿಸಿದರು.

“ಬಿಜೆಪಿಯವರು ಹತಾಶೆರಾಗಿದ್ದಾರೆ, ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕಲಬುರಗಿಗೆ ಬರುತ್ತಿದ್ದಾರೆ. ಪ್ರಿಯಾಂಕ್ ಹಾಗೂ ಶರಣಪ್ರಕಾಶ ಪಾಟೀಲ್ ಗ್ರಾಮಪಂಚಾಯತಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಜಾಧವ ಹೇಳುತ್ತಾರೆ. ಹೌದು, ಪ್ರತಿಯೊಬ್ಬರು ಗೆಲ್ಲಬೇಕೆಂದೆ ಪ್ರಚಾರ ಮಾಡುತ್ತಾರೆ. ಚುನಾವಣೆಯನ್ನು ಚುನಾವಣೆಯನ್ನಾಗಿ ಎದುರಿಸಿ, ವೈಯಕ್ತಿಕ ಟೀಕೆ ಮಾಡಿದರೆ ನಾವೂ ಕೂಡಾ ಹಾಗೆ ಉತ್ತರ ಕೊಡಬೇಕಾಗುತ್ತದೆ. ಬೇವಿನ ಬೀಜ ಬಿತ್ತಿ ಮಾವು ಬೆಳೆಯಲು ಆಗುವುದಿಲ್ಲ” ಎಂದರು.

ಜಾಧವ್ ತಮ್ಮ ಮಗನನ್ನು ಚಿಂಚೋಳಿ ಶಾಸಕನನ್ನಾಗಿ ಮಾಡಿಲ್ಲವೇ?

ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುವ ಬಿಜೆಪಿ ನಾಯಕರ ಮಾತಿಗೆ ಸಿಡಿಮಿಡಿಗೊಂಡ ಖರ್ಗೆ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಜಾಧವ್ ತಮ್ಮ ಮಗನನ್ನು ಚಿಂಚೋಳಿ ಶಾಸಕನನ್ನಾಗಿ ಮಾಡಿಲ್ಲವೇ? ಇದೇ ಪ್ರಶ್ನೆಯನ್ನು ಯಡಿಯೂರಪ್ಪ, ಅಮಿತ್ ಶಾ ಮುಂದೆ ಮಾತನಾಡಲಿ ಎಂದರು. “ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿ ನಾಯಕರು ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಇವರ ಡಿಎನ್ ಎ ಟೆಸ್ಟ್ ಮಾಡಿಸಬೇಕಿದೆ. ನಾನೇ ನನ್ನ ಸ್ವಂತ ಖರ್ಚಿನಲ್ಲಿಯೇ ವ್ಯವಸ್ಥೆ ಮಾಡಿಸುತ್ತೇನೆ ಬಿಜೆಪಿ ನಾಯಕರು ಟೆಸ್ಟ್ ಮಾಡಿಸಿಕೊಳ್ಳಲಿ” ಎಂದು ತಿರುಗೇಟು ನೀಡಿದರು.

ಪ್ರಧಾನಿ ಎಜುಕೇಷನ್ ಕ್ವಾಲಿಫಿಕೇಷನ್ ಏನು?

“ನನ್ನ ಎಜುಕೇಷನ್ ಕ್ವಾಲಿಫಿಕೇಷನ್ ಬಗ್ಗೆ ಪ್ರಶ್ನೆ ಮಾಡುವ ಜಾಧವ ಅವರೇ ಮೊದಲು ನಿಮ್ಮ ಪ್ರಧಾನಿಯ ಕ್ವಾಲಿಫಿಕೇಷನ್ ಏನು ಎಂದು ಜನರಿಗೆ ತಿಳಿಸಿ. ಈ ಹಿಂದೆ ಕೇಜ್ರಿವಾಲ್ ಪ್ರಧಾನಿ ಕ್ವಾಲಿಫಿಕೆಷನ್ ಬಗ್ಗೆ ಮಾಹಿತಿ ಕೇಳಿದಾಗ ಕೊಟ್ಟಿಲ್ಲ. ನಾನು ಅನಿಮೇಷನ್ ನಲ್ಲಿ ಡಿಪ್ಲೊಮ ಮಾಡಿದ್ದೇನೆ. ಶಾಸಕನಾಗಲು ಸಂವಿಧಾನಬದ್ದ ಅರ್ಹತೆ ಪಡೆದಿದ್ದೇನೆ. ಈ ಬಗ್ಗೆ ಅಫಿಡವಿಟ್ ಹಾಕುತ್ತೇನೆ.ನಿಮ್ಮ ಮೋದಿ ಅವರಿಗಿಂತ ಹೆಚ್ಚಿಗೆ ನಾನು ಕ್ವಾಲಿಫೈಯ್ಡ್ ಆಗಿದ್ದೇನೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ವಿದೇಶದ ಯೂನಿವರ್ಸಿಟಿಯಲ್ಲಿ ಎಕಾನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೋದಿ ಅವರು ಕೂಡಾ ಸಂವಿಧಾನ ಬದ್ದವಾಗಿ ಅರ್ಹರಾಗಿರಬಹುದು. ಆದರೆ, ಯಾವುದಾದರೂ ಕ್ವಾಲಿಫಿಕೇಷನ್ ಪಡೆದಿದ್ದರೆ ಅಫಡವಿಟ್ ಹಾಕಿ ” ಎಂದರು.

ಉದ್ದೇಶ ಪೂರ್ವಕವಾಗಿ ದಿಶಾ ಸಭೆ ಕರೆಯಲಿಲ್ಲ ಎಂದು ಜಾಧವ್ ಆರೋಪಿಸಿರುವ ಕುರಿತು ಪತ್ರಕರ್ತರು ಕೇಳಿದಾಗ, ಖರ್ಗೆ ಸಾಹೇಬರು ಸಭೆಯ ಅಧ್ಯಕ್ಷರಾಗಿದ್ದಾರೆ. ಕಾರಣಾಂತರಗಳಿಂದ ಸಭೆ ನಡೆಸಲಾಗಿಲ್ಲ ಇದರಲ್ಲೇನೂ ಉದ್ದೇಶಪೂರ್ವಕವಿಲ್ಲ. ನಾನು ಸಚಿವನಾಗಿ ಇದೂವರೆಗೆ ಮೂರು ಬಾರಿ ಜನಸ್ಪಂದನೆ ಕಾರ್ಯಕ್ರಮ ಮಾಡಿದ್ದೇನೆ. ಸಂಸದರಾಗಿ ನೀವೆಷ್ಟು ಸಲ ಮಾಡಿದ್ದೀರಿ ಹೇಳಿ ಎಂದು ಒತ್ತಾಯಿಸಿದರು.

ಚಿಕ್ಕಮಗಳೂರು ಜನರಿಂದ ತಿರಸ್ಜೃತರಾಗಿರುವ ಸಿ.ಟಿ.ರವಿ

“ಪ್ರಿಯಾಂಕ್ ಖರ್ಗೆ ಸೆಟಲ್ ಆಗಿದ್ದಾರೆ. ಈಗ ಅಳಿಯನನ್ನು ಸೆಟಲ್ ಮಾಡಲು ಖರ್ಗೆ ಅವರು ಕಣ್ಣೀರು ಹಾಕಿದ್ದಾರೆ ಎಂದು ಸಿ.ಟಿ ರವಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್, ನಿಜ ನಾನು ಸೆಟಲ್ ಆಗಿದ್ದೇನೆ. ರಾಧಾಕೃಷ್ಣ ಅವರನ್ನು ಸೆಟಲ್ ಮಾಡುವ ಬಗ್ಗೆ ಕಲಬುರಗಿ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ, ಚಿಕ್ಕಮಗಳೂರಿನ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಪಕ್ಷದಲ್ಲಿಯೂ ಯಾವುದೇ ಹುದ್ದೆ ಹೊಂದಿಲ್ಲ. ರವಿ ಅವರೇ ನಮ್ಮನ್ನು ಸೆಟಲ್ ಮಾಡುವ ಬಗ್ಗೆ ಯೋಚಿಸದೆ ನೀವು ಸೆಟಲ್ ಆಗುವ ಬಗ್ಗೆ ಯೋಚಿಸಿ. ಯಡಿಯೂರಪ್ಪ ಹಾಗೂ ಅವರ ಮಗನಿಂದ ಬಿಜೆಪಿಯನ್ನು ಸ್ವಚ್ಚ ಗೊಳಿಸಲು ಹೋರಾಡುವುದಾಗಿ ಯತ್ನಾಳ ಹಾಗೂ ಈಶ್ವರಪ್ಪ ಹೇಳುತ್ತಿದ್ದಾರೆ. ಅವರನ್ನು ನೋಡಿ, ಅವರಂತೆ ಮಾತನಾಡುವುದನ್ನು ಕಲಿಯಿರಿ. ಮೊದಲೇ ಜನರು ನಿಮ್ಮನ್ನು ಪುಕ್ಕಲ ಎನ್ನುತ್ತಿದ್ದಾರೆ” ಎಂದು ಟಾಂಗ್ ನೀಡಿದರು.

ಸಾಮಾನ್ಯ ದಲಿತನಿಗೆ ಟಿಕೇಟ್ ನೀಡಬೇಕಿತ್ತು ಎಂದು ಸಿ.ಟಿ ರವಿ ಹೇಳಿರುವ ಕುರಿತು ಹೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ತೇಜಸ್ವಿ ಸೂರ್ಯ ಹಾಗೂ ಜಗದೀಶ್ ಶೆಟ್ಟರ್ ಬದಲು ಸಾಮಾನ್ಯ ಲಿಂಗಾಯತರಿಗೆ ಟಿಕೇಟು ಕೊಡಬೇಕಿತ್ತಲ್ಲ. ಇನ್ನೂ ಚುನಾವಣೆಗೆ ಪ್ರಚಾರ ಕೊನೆಗೊಳ್ಳಲು ಐದು ಆರುದಿನವಿದೆ ಬಿಜೆಪಿ ನಾಯಕರು ನಮ್ಮ ಹಾಗೂ ನಮ್ಮ ಕುಟುಂಬದ ಮೇಲೆ ಹೀಗೆ ವೈಯಕ್ತಿಕ ದಾಳಿ ಮಾಡುತ್ತಾರೆ. ನಾವೂ ಕೂಡಾ ಅಂತಹ ಮಾತುಗಳಿಗೆ ಸೂಕ್ತ ಉತ್ತರ ಕೊಡಬೇಕಾಗುತ್ತದೆ ಎಂದು ಮಾರುತ್ತರ ನೀಡಿದರು.

ಮಾತನಾಡಲೆಂದೇ ನೇಮಕಗೊಂಡಿದ್ದೇನೆ

ಪ್ರಿಯಾಂಕ್ ಖರ್ಗೆ ಸರಕಾರದಿಂದ ಪವರ್ ಆಫ್ ಅಟಾರ್ನಿ ಪಡೆದುಕೊಂಡಿದ್ದಾರೆ. ಹಾಗಾಗಿ ಎಲ್ಲ ಖಾತೆಗಳಿಗೆ ಸಂಬಂಧಿಸಿದ ವಿಚಾರ ಮಾತನಾಡುತ್ತಾರೆ ಎನ್ನುವ ಸಿ.ಟಿ. ರವಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್, ಹೌದು ನಾನು, ದಿನೇಶ್ ಗುಂಡುರಾವ್, ಸಂತೋಷ ಲಾಡ್ ಹಾಗೂ ಕೃಷ್ಣ ಭೈರೇಗೌಡ ಅಧಿಕೃತ ವಕ್ತಾರರು. ಸರ್ಕಾರದ ಪರವಾಗಿ ಮಾತನಾಡಲಿ ಅಂತ ಸಿಎಂ ನಮಗೆ ನೇಮಿಸಿದ್ದಾರೆ. ಸರ್ಕಾರಕ್ಕಾಗಲೀ ಅಥವಾ ಜನರಿಗಾಗಲೀ ಇದರಿಂದ ಏನು ತೊಂದರೆಯಾಗಿಲ್ಲ. ಬಿಜೆಪಿಗೆ ಅಥವಾ ರವಿಗೆ ತೊಂದರೆಯಾದರೆ ನನಗೆ ಅದು ಸಂಬಂಧಿಸಿಲ್ಲ ಎಂದರು.

ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಜ್ ಎಲ್ಲಿಹೋದವು?

ಬಹಿರಂಗ ಚರ್ಚೆಗೆ ಜಾಧವ್ ಆಹ್ವಾನ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ವಿಷಯಾಧಾರಿತ ಚರ್ಚೆ ಮಾಡೋಣ ಬನ್ನಿ. ನಾನೇ ವೇದಿಕೆ ಸಿದ್ದಪಡಿಸುತ್ತೇನೆ. ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಜ್ ನಂತಹ ಯೋಜನೆಗಳು ಯಾಕೆ ವಾಪಸ್ ಹೋದವು ಎನ್ನುವುದಕ್ಕೆ ಅಲ್ಲಿ ನೀವು ಉತ್ತರ ಕೊಡಿ. ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂದಿದ್ದೀರಿ, ಕಲಬುರಗಿಯಲ್ಲಿ ನಿಮ್ಮನ್ನು ಹೊರತುಪಡಿಸಿದರೆ ಎಲ್ಲರೂ ಆರಾಮಾಗಿ ಓಡಾಡುತ್ತಿದ್ದಾರೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರನ್ನ ತರಲು ಯೋಗ್ಯತೆ ಇರಲಿಲ್ಲ. ಮೂರು ವರ್ಷದಲ್ಲಿ ಮೂವರು ಸಚಿವರು ಬದಲಾದರು. ನೀವು ನಮಗೆ ಪಾಠ ಮಾಡಲು ಬರುತ್ತೀರಾ?” ಎಂದರು.

ಹಾಸನದ ನೊಂದ ಮಹಿಳೆಯರ ಮನೆಗೆ ಅಮಿತ್ ಶಾ ಹಾಗೂ ನಡ್ಡಾ ಯಾವಾಗ ಹೋಗುತ್ತಾರೆ?

ಹುಬ್ಬಳ್ಳಿ ಘಟನೆ ಬಗ್ಗೆ ಹೋರಾಟ ನಡೆಸಿ ಈಗ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಗರಣದಲ್ಲಿ ಸುಮ್ಮನಿರುವ ಬಿಜೆಪಿ ನಾಯಕರ ಧೋರಣೆಯನ್ನು ಕಟುವಾಗಿ ಟೀಕಿಸಿದ ಪ್ರಿಯಾಂಕ್ ಖರ್ಗೆ, ” ಹಾಸನದ ಮೂರು ಸಾವಿರ ನೊಂದ ಮಹಿಳೆಯರ ಮನೆಗೆ ಅಮಿತ್ ಶಾ ಹಾಗೂ ನಡ್ಡಾ ಯಾವಾಗ ಹೋಗುತ್ತಾರೆ? ಪ್ರಜ್ವಲ್ ಗೆ ಹಾಕುವ ಒಂದೊಂದು ಓಟು ನನ್ನ ಕೈಬಲ ಪಡಿಸಿದಂತೆ ಎಂದ ಮೋದಿ ಅವರಿಗೆ ಪ್ರಜ್ವಲ್ ಮಹಿಳೆರಿಗೆ ಕಿರುಕುಳ ನೀಡಿದ್ದಾರೆ ಅವರಿಗೆ ಟಿಕೇಟ್ ನೀಡಬೇಡಿ ಎಂದು ಅವರ ವಿರುದ್ದ ಪತ್ರ ಬರೆದಿದ್ದು ಗೊತ್ತಿರಲಿಲ್ಲವಾ? ಬಿಜೆಪಿಯವರೇ, ನಿಮ್ಮ ನಾಯಕರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಹಾಗೂ ಶೋಭಕ್ಕ ಅವರಿಂದ ಬಿಸಿಲಲ್ಲಿ ಪ್ರತಿಭಟನೆ ಮಾಡಿಸಿ ಆಮೇಲೆ ನಮ್ಮೊಂದಿಗೆ ಚರ್ಚೆಗೆ ಬನ್ನಿ” ಎಂದು ಅಹ್ವಾನಿಸಿದರು.

2030ರ ವೇಳೆಗೆ ಭಾರತದ ಸೇವೆಗಳ ರಫ್ತು 800 ಬಿಲಿಯನ್ ಡಾಲರ್ ಗೆ ಏರಿಕೆ : ಗೋಲ್ಡ್ಮನ್ ಸ್ಯಾಚ್ಸ್ ವರದಿ

ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ, ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ

Share. Facebook Twitter LinkedIn WhatsApp Email

Related Posts

ಕಪ್ಪು ನಾಲಿಗೆಯನ್ನು ಹೊಂದಿರುವ ಯಾರಾದರೂ ನಿಮ್ಮನ್ನು ನಿಂದಿಸಿದರೆ, ಮೊದಲು ಇದನ್ನು ಮಾಡಿ. ಯಾವುದೇ ಸಮಸ್ಯೆ ಇರುವುದಿಲ್ಲ.!

02/04/2026 9:02 AM3 Mins Read

ಬೆಂಗಳೂರು ನಗರ ಸಂಚಾರ ದಟ್ಟಣೆ ಸುಧಾರಿಸಲು ಅಧ್ಯಯನ: ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ, ಐಆರ್‌ಟಿಇ ಹಾಗೂ ಡಿಯಾಜಿಯೋ ಸಹಭಾಗಿತ್ವ

02/04/2026 9:00 AM2 Mins Read

SHOCKING : ಪ್ರಾಧ್ಯಾಪಕನ ಜೊತೆಗೆ ಸಂಬಂಧ ಕಲ್ಪಿಸಿ ಅಪಪ್ರಚಾರ : ಮನನೊಂದು `BAMS’ ವಿದ್ಯಾರ್ಥಿನಿ ಆತ್ಮಹತ್ಯೆ.!

02/04/2026 8:48 AM1 Min Read
Recent News

ಕಪ್ಪು ನಾಲಿಗೆಯನ್ನು ಹೊಂದಿರುವ ಯಾರಾದರೂ ನಿಮ್ಮನ್ನು ನಿಂದಿಸಿದರೆ, ಮೊದಲು ಇದನ್ನು ಮಾಡಿ. ಯಾವುದೇ ಸಮಸ್ಯೆ ಇರುವುದಿಲ್ಲ.!

02/04/2026 9:02 AM

ಬೆಂಗಳೂರು ನಗರ ಸಂಚಾರ ದಟ್ಟಣೆ ಸುಧಾರಿಸಲು ಅಧ್ಯಯನ: ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ, ಐಆರ್‌ಟಿಇ ಹಾಗೂ ಡಿಯಾಜಿಯೋ ಸಹಭಾಗಿತ್ವ

02/04/2026 9:00 AM

​ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಂಬ್ ಭೀತಿ: ಇಂಡಿಗೋ ವಿಮಾನದಲ್ಲಿ ಪತ್ತೆಯಾಯ್ತು ‘ಡೇಂಜರ್’ ಚೀಟಿ; 8 ಗಂಟೆ ವಿಳಂಬವಾದ ಅಹಮದಾಬಾದ್ ಪಯಣ!

02/04/2026 8:59 AM

SHOCKING : ಪ್ರಾಧ್ಯಾಪಕನ ಜೊತೆಗೆ ಸಂಬಂಧ ಕಲ್ಪಿಸಿ ಅಪಪ್ರಚಾರ : ಮನನೊಂದು `BAMS’ ವಿದ್ಯಾರ್ಥಿನಿ ಆತ್ಮಹತ್ಯೆ.!

02/04/2026 8:48 AM
State News
KARNATAKA

ಕಪ್ಪು ನಾಲಿಗೆಯನ್ನು ಹೊಂದಿರುವ ಯಾರಾದರೂ ನಿಮ್ಮನ್ನು ನಿಂದಿಸಿದರೆ, ಮೊದಲು ಇದನ್ನು ಮಾಡಿ. ಯಾವುದೇ ಸಮಸ್ಯೆ ಇರುವುದಿಲ್ಲ.!

By kannadanewsnow5702/04/2026 9:02 AM KARNATAKA 3 Mins Read

ಕಪ್ಪು ನಾಲಿಗೆ ಇರುವವರು ಕೆಲಸ ಮಾಡಿದರೆ ಶಾಪ ಹಾಕುತ್ತಾರೆಯೇ? ಸಾಯುವುದಿಲ್ಲವೇ? ಕಪ್ಪು ನಾಲಿಗೆಯನ್ನು ಹೊಂದಿರುವ ಯಾರಾದರೂ ನಿಮ್ಮನ್ನು ನಿಂದಿಸಿದರೆ, ಮೊದಲು…

ಬೆಂಗಳೂರು ನಗರ ಸಂಚಾರ ದಟ್ಟಣೆ ಸುಧಾರಿಸಲು ಅಧ್ಯಯನ: ಬೆಂಗಳೂರು ಸಂಚಾರ ಪೊಲೀಸ್‌ ಇಲಾಖೆ, ಐಆರ್‌ಟಿಇ ಹಾಗೂ ಡಿಯಾಜಿಯೋ ಸಹಭಾಗಿತ್ವ

02/04/2026 9:00 AM

SHOCKING : ಪ್ರಾಧ್ಯಾಪಕನ ಜೊತೆಗೆ ಸಂಬಂಧ ಕಲ್ಪಿಸಿ ಅಪಪ್ರಚಾರ : ಮನನೊಂದು `BAMS’ ವಿದ್ಯಾರ್ಥಿನಿ ಆತ್ಮಹತ್ಯೆ.!

02/04/2026 8:48 AM

ಆಪತ್ಕಾಲಕ್ಕೆ ಆಸರೆಯಾಗಬಲ್ಲ ‘ಜೀವ ರಕ್ಷಕ’ ಕೌಶಲ್ಯಗಳು ಇವು : ಪ್ರತಿಯೊಬ್ಬರೂ ತಿಳಿಯಲೇಬೇಕಾದ ಪ್ರಮುಖ ಮಾಹಿತಿ

02/04/2026 8:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.