Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2026 ರ ಕ್ಯಾಲೆಂಡರ್ ಬಿಡುಗಡೆ

20/01/2026 2:00 PM

ಜ.24 ರಿಂದ ಮಲೆನಾಡು ಕರಕುಶಲ ಉತ್ಸವ-ಸಿರಿಧಾನ್ಯ ಮೇಳ-ಫಲ ಪುಷ್ಪ ಪ್ರದರ್ಶನ

20/01/2026 1:58 PM

ಯಾರು ಈ ನಿತಿನ್ ನಬಿನ್? ಬಿಹಾರದ ಶಾಸಕನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟದವರೆಗೆ ಬೆಳೆದು ಬಂದ ಹಾದಿ!

20/01/2026 1:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜ.24 ರಿಂದ ಮಲೆನಾಡು ಕರಕುಶಲ ಉತ್ಸವ-ಸಿರಿಧಾನ್ಯ ಮೇಳ-ಫಲ ಪುಷ್ಪ ಪ್ರದರ್ಶನ
KARNATAKA

ಜ.24 ರಿಂದ ಮಲೆನಾಡು ಕರಕುಶಲ ಉತ್ಸವ-ಸಿರಿಧಾನ್ಯ ಮೇಳ-ಫಲ ಪುಷ್ಪ ಪ್ರದರ್ಶನ

By kannadanewsnow5720/01/2026 1:58 PM

ಶಿವಮೊಗ್ಗ : ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ಮಲೆನಾಡು ಕರಕುಶಲ ಉತ್ಸವ ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63 ನೇ ಫಲ ಪುಷ್ಪ ಪ್ರದರ್ಶನವನ್ನು ಜ.24 ರಿಂದ 27 ರವರೆಗೆ ನಾಲ್ಕು ದಿನಗಳ ಕಾಲ ನಗರದ ಅಲ್ಲಮ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ತಿಳಿಸಿದರು.

 ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಲೆನಾಡು ಕರಕುಶಲ ಉತ್ಸವ ಹಾಗೂ ಫಲಪುಷ್ಪ ಪ್ರದರ್ಶನದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

 ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

 ಜ.24 ರ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪನವರು ನೆರವೇರಿಸುವರು. ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.

ವಿಶೇಷತೆಗಳು : ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣ್ಣದ ಹೂವುಗಳಾದ ಗುಲಾಬಿ, ಸೇವಂತಿಗೆ, ಆಂಥೋರಿಯA, ಕಾಮಿನಿ ಲೆ ಮತ್ತು ಫೋಲಿಯೇಜ್ ಗಿಡಗಳನ್ನು ಬಳಸಿ ವಿಶೇಷವಾದ ಹೂವಿನ ಕಲಾಕೃತಿಗಳನ್ನು ರಚನೆ ಇರುತ್ತದೆ.

ವಿವಿಧ ಜಾತಿಯ ಹೂವುಗಳಿಂದ 16 ಅಡಿ ಎತ್ತರದ ಕೋಟೆ ಹಾಗೂ ಕೆಳದಿ ಶಿವಪ್ಪ ನಾಯಕನ ಪ್ರತಿಮೆ ರಚನೆ, 15 ಅಡಿ ಎತ್ತರದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ ರಚನೆ. ಹೂವುಗಳು ಹಾಗೂ ಫೋಲಿಯೇಜ್‌ನಿಂದ 60 ಅಡಿ ಅಗಲ * 22 ಅಡಿ ಎತ್ತರದ ಜೋಗ ಜಲಪಾತದ ಕಲಾಕೃತಿಗಳು ಈ ಬಾರಿಯ ಆಕರ್ಷಣೆಗಳಾಗಿದ್ದು, ಹೂವಿನ ಐ ಲವ್ ಶಿವಮೊಗ್ಗ ಸೆಲ್ಫಿ ಪಾಯಿಂಟ್ ಕುಜ್ಬ ಗಿಡಗಳು(ಬೋನ್ಸಾಯ್) ಗಿಡಗಳ ಪ್ರದರ್ಶನ ಸಹ ಇರುತ್ತದೆ.

ಮಾರಾಟ ಮೇಳ – ಕ್ರಾಫ್ಟ್÷್ಸ ಆಫ್ ಮಲ್ನಾಡ್ : ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಸ್ವ ಸಹಾಯ ಗುಂಪಿನ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದ್ದು 12163 ಮಹಿಳಾ ಸ್ವಸಹಾಯ ಸಂಘಗಳಡಿ 126456 ಕುಟುಂಬಗಳನ್ನು ಗ್ರಾಮೀಣ ಅಭಿಯಾನದಡಿ ಸಂಘಟಿಸಲಾಗಿದೆ.

 ಕ್ರಾಫ್ಟ್÷್ಸ ಆಫ್ ಮಲ್ನಾಡ್ ಎಂಬ ಹೆಸರಿನಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಬ್ರಾಂಡಿಗ್ ಮಾಡಿದ್ದು, ಈಗಾಗಲೇ ಈ ಬ್ರಾಂಡ್ ಅಡಿಯಲ್ಲಿ ಮಹಿಳೆಯರು ತಯಾರಿಸಿದ ದೀಪಗಳು ಮತ್ತಿತರೆ ಉತ್ಪನ್ನಗಳ ಉತ್ತಮ ಮಾರಾಟವಾಗಿದೆ. ಇದೀಗ ವಿಶೇಷವಾಗಿ ಇ-ಕಾಮರ್ಸ್ ವೆಬ್‌ಸೈಟ್ ರಚನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ವಿವಿಧ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ತಯಾರಿ ಮಾಡಿಕೊಳ್ಳಲಾಗಿದ್ದು ಮೇಳದ ಉದ್ಘಾಟನೆಯಂದು ಜಿಲ್ಲಾ ಉಸ್ತುವಾರಿ ಸಚಿವರು ವೆಬ್‌ಸೈಟ್‌ಗೆ ಚಾಲನೆ ನೀಡುವರು.

 ಇದರೊಂದಿಗೆ ಪ್ರತಿಯೊಬ್ಬ ಸ್ವ ಸಹಾಯ ಗುಂಪಿನ ಮಹಿಳೆಯರು ಜೀವನೋಪಾಯದೊಂದಿಗೆ ಸ್ವಾವಲಂಬನೆಯ ಜೀವನ ನಿರ್ವಹಿಸುವಲ್ಲಿ ಅವಶ್ಯಕ ಸಾಮರ್ಥ್ಯಾಭಿವೃದ್ದಿ ಕೌಶಲ್ಯ ತರಬೇತಿಗಳು, ಉತ್ಪನ್ನಗಳ ಬ್ರಾö್ಯಂಡಿAಗ್, ಪ್ಯಾಕಿಂಗ್ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ನಿರಂತರ ಬೆಂಬಲಿಸಲಾಗುತ್ತಿದೆ.

ಮೇಳದ ವೈಶಿಷ್ಟö್ಯಗಳು : ಮೇಳದ ಮಳಿಗೆಗಳಲ್ಲಿ ರಾಜ್ಯ, ಹೊರ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮಣ್ಣಿನ ಅಲಂಕಾರಿಕ ಉತ್ಪನ್ನಗಳು, ಮ್ಯಾಕ್ರನ್ ಉತ್ಪನ್ನಗಳು, ಹಸೆ ಚಿತ್ತಾರ ಮತ್ತು ಭತ್ತದ ತೋರಣ, ಈಚಲು ಚಾಪೆ, ಮಣ್ಣಿನ ಆಭರಣಗಳು, ಮರದ ಕೆತ್ತನೆಗಳು, ಖೌದಿ ಉತ್ಪನ್ನಗಳು, ಕೊಪ್ಪಳದ ಕಿನ್ನಾಳ ಉತ್ಪನ್ನಗಳು, ಕೊಪ್ಪಳದ ಬನಾನ ಫೈಬರ್ ಉತ್ಪನ್ನಗಳು, ಚಿಕ್ಕಬಳ್ಳಾಪುರ ಲೆದರ್ ಉತ್ಪನ್ನಗಳು, ನವಲಗುಂದ ದುರಿ, ಮೈಸೂರು ಮರದ ಕೆತ್ತನೆಯ ಉತ್ಪನ್ನಗಳು, ಬೀದರ್ ಜಿಲ್ಲೆಯ ಬಿದರಿ ಉತ್ಪನ್ನಗಳು ಹಾಗೂ ಅಕ್ಕ ಕೆಫೆಯ ಸದಸ್ಯರು, ಇತರೆ ಸ್ವ ಸಹಾಯ ಗುಂಪಿನ ಸದಸ್ಯರಿಂದ ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತವೆ.

ಸಿರಿಧಾನ್ಯ ಮೇಳ: ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಸಿರಿಧಾನ್ಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಅಂತರಾಷ್ಟಿçÃಯ ವಾಣಿಜ್ಯ ಮೇಳ-2026 ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳವನ್ನು ಈ ಮೇಳದಲ್ಲಿಯೇ ಹಮ್ಮಿಕೊಳ್ಳಲಾಗಿದ್ದು, ಸಿರಿಧಾನ್ಯ ಕುರಿತಾದ ಪ್ರತ್ಯೇಕ ಮಳಿಗೆಯನ್ನು ಸ್ಥಾಪಿಸಲಾಗುವುದು.

ಕೈ ಮಗ್ಗ ಜವಳಿ ಮೇಳ : ಜವಳಿ ಮತ್ತು ಕೈಮಗ್ಗ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ 11 ರಾಜ್ಯಗಳು 19ಜಿಐ ಟ್ಯಾಗ್ ಹೊಂದಿರುವ ವಿವಿಧ ರೀತಿಯ ಸೀರೆಗಳು, ಹ್ಯಾಂಡ್‌ಲೂA ಸೀರೆಗಳು, ಶಾಲುಗಳು, ಬೆಡ್ ಶೀಟ್‌ಗಳು ಮತ್ತ ಕೆಎಸ್‌ಐಸಿ ಸೀರೆಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ.

ವಿವಿಧ ಸ್ಪರ್ಧೆಗಳು : ರೈತರಿಗಾಗಿ – ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರು ಬೆಳೆದ ವಿಶಿಷ್ಟ, ವಿಶೇಷ ರೀತಿಯ ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಜ.26 ರ ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿಗೆ ದೂ.ಸಂ 8495876466 ನ್ನು ಸಂಪರ್ಕಿಸಬಹುದು.

ಹೂ ರಂಗೋಲಿ ಸ್ಪರ್ಧೆ: ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಹೂ, ಹಣ್ಣು, ತರಕಾರಿ, ಬೇಳೆಕಾಳುಗಳ ಹಾಗೂ ದವಸ ಧಾನ್ಯಗಳನ್ನು ಬಳಸಿ ರಂಗೋಲಿ ರಚನೆ ಮಾಡಬೇಕು.

 ಸಮಾರೋಪ ಸಮಾರಂಭದಲ್ಲಿ ಫಲ ಪುಷ್ಪ ಪ್ರದರ್ಶನದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಅಭಿನಂದಿಸಲಾಗುವುದು. ಕಳೆದ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಸಾವಿರಾರು ಜನ ಭೇಟಿ ನೀಡಿ ಸುಮಾರು ರೂ.20 ಲಕ್ಷ ವಹಿವಾಟು ಆಗಿತ್ತು. ಈ ಬಾರಿಯೂ ಜಿಲ್ಲೆಯ ಜನತೆ ಉತ್ತಮವಾಗಿ ಸ್ಪಂದಿಸುವರೆAದು ಆಶಿಸಿದ ಅವರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ವೈ ಆರ್ ಮಲ್ಲಿಕಾರ್ಜುನ, ದುಮ್ಮಳ್ಳಿ ರಘು, ಚಂದ್ರಕಾAತ ಹಸಗೋಡು ಹಾಜರಿದ್ದರು.

Malenadu Handicraft Festival-Siridhanya Mela-Fruit and Flower Exhibition from January 24
Share. Facebook Twitter LinkedIn WhatsApp Email

Related Posts

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2026 ರ ಕ್ಯಾಲೆಂಡರ್ ಬಿಡುಗಡೆ

20/01/2026 2:00 PM1 Min Read

ಉಜಿರೆಯ ರುಡ್ ಸೆಟ್ ಶಿಬಿರಾರ್ಥಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ

20/01/2026 1:48 PM1 Min Read

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಕಚೇರಿ ಕರ್ತವ್ಯ ವೇಳೆ’ ಈ ನಿಯಮಗಳ ಪಾಲನೆ ಕಡ್ಡಾಯ

20/01/2026 1:13 PM1 Min Read
Recent News

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2026 ರ ಕ್ಯಾಲೆಂಡರ್ ಬಿಡುಗಡೆ

20/01/2026 2:00 PM

ಜ.24 ರಿಂದ ಮಲೆನಾಡು ಕರಕುಶಲ ಉತ್ಸವ-ಸಿರಿಧಾನ್ಯ ಮೇಳ-ಫಲ ಪುಷ್ಪ ಪ್ರದರ್ಶನ

20/01/2026 1:58 PM

ಯಾರು ಈ ನಿತಿನ್ ನಬಿನ್? ಬಿಹಾರದ ಶಾಸಕನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟದವರೆಗೆ ಬೆಳೆದು ಬಂದ ಹಾದಿ!

20/01/2026 1:48 PM

ಉಜಿರೆಯ ರುಡ್ ಸೆಟ್ ಶಿಬಿರಾರ್ಥಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ

20/01/2026 1:48 PM
State News
KARNATAKA

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2026 ರ ಕ್ಯಾಲೆಂಡರ್ ಬಿಡುಗಡೆ

By kannadanewsnow0920/01/2026 2:00 PM KARNATAKA 1 Min Read

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2026 ರ ನೂತನ ಕ್ಯಾಲೆಂಡರನ್ನು ಇಂದು ಕ್ವೀನ್ಸ್ ರಸ್ತೆಯ ಸಂಘದ ಕಚೇರಿಯಲ್ಲಿ ಬಿಡುಗಡೆ…

ಜ.24 ರಿಂದ ಮಲೆನಾಡು ಕರಕುಶಲ ಉತ್ಸವ-ಸಿರಿಧಾನ್ಯ ಮೇಳ-ಫಲ ಪುಷ್ಪ ಪ್ರದರ್ಶನ

20/01/2026 1:58 PM

ಉಜಿರೆಯ ರುಡ್ ಸೆಟ್ ಶಿಬಿರಾರ್ಥಿಗಳಿಂದ ಡಾ.ಡಿ.ವೀರೇಂದ್ರ ಹೆಗ್ಗಡೆ ಭೇಟಿ

20/01/2026 1:48 PM

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : `ಕಚೇರಿ ಕರ್ತವ್ಯ ವೇಳೆ’ ಈ ನಿಯಮಗಳ ಪಾಲನೆ ಕಡ್ಡಾಯ

20/01/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.