ನವದೆಹಲಿ : ಸಂಸತ್ತಿನಲ್ಲಿ ಬಹುಮತ ಹೊಂದಿರುವ ಮಾಲ್ಡೀವ್ಸ್ ಡೆಮಾಕ್ರಟಿಕ್ ಪಾರ್ಟಿ (MDP) ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರನ್ನ ವಾಗ್ದಂಡನೆ ಮಾಡುವ ನಿರ್ಣಯವನ್ನ ಸಲ್ಲಿಸಲು ಸಾಕಷ್ಟು ಸಹಿಗಳನ್ನ ಸಂಗ್ರಹಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಎಂಡಿಪಿ, ಇತರ ವಿರೋಧ ಪಕ್ಷ ದಿ ಡೆಮಾಕ್ರಟ್ಸ್ ಸಹಭಾಗಿತ್ವದಲ್ಲಿ ವಾಗ್ದಂಡನೆ ನಿರ್ಣಯಕ್ಕೆ ಸಾಕಷ್ಟು ಸಹಿಗಳನ್ನ ಸಂಗ್ರಹಿಸಿದೆ ಎಂದು ಎಂಡಿಪಿಯ ಶಾಸಕರೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ವಿರೋಧ ಪಕ್ಷಗಳು ಇನ್ನೂ ನಿರ್ಣಯವನ್ನ ಸಲ್ಲಿಸಿಲ್ಲ. ಚೀನಾ ಪರ ಮುಯಿಝು ಅವರ ಕ್ಯಾಬಿನೆಟ್ನ ನಾಲ್ವರು ಸದಸ್ಯರ ಅನುಮೋದನೆಯ ಬಗ್ಗೆ ಭಿನ್ನಾಭಿಪ್ರಾಯಗಳ ಬಗ್ಗೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ಸರ್ಕಾರಿ ಪರ ಸಂಸದರು ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಘರ್ಷಣೆಗಳು ಸಂಭವಿಸಿದ ಒಂದು ದಿನದ ನಂತ್ರ ಈ ಬೆಳವಣಿಗೆ ನಡೆದಿದೆ. ಜಗಳದ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
Maldives Parliament witnesses ruckus. Govt MP Shaheem gets a beating, as fellow MPs intervene to stop it. https://t.co/yzV2AHLVo1 pic.twitter.com/Bt4HNvyq6E
— Sidhant Sibal (@sidhant) January 28, 2024
ಪ್ರತಿಯೊಂದು ಮನೆಯ ಮೇಲೂ ‘ಹನುಮಧ್ವಜ’ ಹಾರಿಸುತ್ತೇವೆ, ತಾಕತ್ತಿದ್ರೇ ತಡೆಯಿರಿ; ಸರ್ಕಾರಕ್ಕೆ ‘ಸಿಟಿ ರವಿ ಸವಾಲ್’
“ಅಪ್ಪ, ಅಮ್ಮ ಈ ಜೆಇಇ ನನ್ನಿಂದ ಆಗೋಲ್ಲ” : ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ