ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರ ಬಗ್ಗೆ ಮಾಲ್ಡೀವ್ಸ್ ನ ಅನೇಕ ನಾಯಕರು ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಇದರ ಬಗ್ಗೆ ಮಾಲ್ಡೀವ್ಸ್ ಸರ್ಕಾರದಿಂದ ಸ್ಪಷ್ಟನೆ ಬಿಡುಗಡೆ ಮಾಡಲಾಗಿದೆ. ಅದು ಏನು ಅಂತ ಮುಂದೆ ಓದಿ.
ಈ ಕುರಿತಂತೆ ಮಾಲ್ಡೀವ್ಸ್ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ವಿದೇಶಿ ನಾಯಕರು ಮತ್ತು ಉನ್ನತ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಮಾಲ್ಡೀವ್ಸ್ ಸರ್ಕಾರಕ್ಕೆ ತಿಳಿದಿದೆ. ಈ ಅಭಿಪ್ರಾಯಗಳು ವೈಯಕ್ತಿಕವಾಗಿವೆ. ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ.
ಇನ್ನೂ ಇದಲ್ಲದೆ, ಸರ್ಕಾರದ ಸಂಬಂಧಿತ ಅಧಿಕಾರಿಗಳು ಅಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಮೋದಿ, ಭಾರತೀಯರ ಬಗ್ಗೆ ಅವಹೇಳನ ಹೇಳಿಕೆ ನೀಡೋರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ.
Government of Maldives issues statement – "The Government of Maldives is aware of derogatory remarks on social media platforms against foreign leaders and high-ranking individuals. These opinions are personal and do not represent the views of the Government of… pic.twitter.com/RQfKDb2wYF
— ANI (@ANI) January 7, 2024
ಮಾಲ್ಡೀವ್ಸ್ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಟ್ವೀಟ್ ಮಾಡಿ, “ಮಾಲ್ಡೀವ್ಸ್ ಸರ್ಕಾರದ ಅಧಿಕಾರಿ ಮರಿಯಮ್ ಶಿಯುನಾ ಅವರು ಪ್ರಮುಖ ಮಿತ್ರರಾಷ್ಟ್ರದ ನಾಯಕನ ಬಗ್ಗೆ ಎಂತಹ ಭಯಾನಕ ಭಾಷೆಯನ್ನು ಬಳಸಿದ್ದಾರೆ. ಇದು ಮಾಲ್ಡೀವ್ಸ್ನ ಭದ್ರತೆ ಮತ್ತು ಸಮೃದ್ಧಿಗೆ ಕಾರಣವಾಗಿದೆ. ಡಾ.ಮುಹಮ್ಮದ್ ಮುಯಿಝು ಸರ್ಕಾರವು ಈ ಹೇಳಿಕೆಗಳಿಂದ ದೂರವಿರಬೇಕು ಮತ್ತು ಅವು ಸರ್ಕಾರದ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಭಾರತಕ್ಕೆ ಸ್ಪಷ್ಟ ಭರವಸೆ ನೀಡಬೇಕು ಎಂದಿದ್ದಾರೆ.
Former President of Maldives, Mohamed Nasheed tweets, "What appalling language by Maldives Government official Mariyam Shiuna towards the leader of a key ally, that is instrumental for Maldives’ security and prosperity. Dr Mohamed Muizzu government must distance itself from these… pic.twitter.com/0KiKpjicX5
— ANI (@ANI) January 7, 2024
BREAKING: ‘2024ರ ಆಷ್ಟ್ರೇಲಿಯನ್ ಓಪನ್ ಟೂರ್ನಿ’ಯಿಂದ ಹೊರಗುಳಿಯುವುದಾಗಿ ‘ರಾಫೆಲ್ ನಡಾಲ್’ ಘೋಷಣೆ
ಬೆಂಗಳೂರಲ್ಲಿ ‘ರೇಷ್ಮೆ ಭವನ’ ನಿರ್ಮಾಣಕ್ಕೆ ಹೂಡಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ