ಬೆಂಗಳೂರು: ಹುಟ್ಟಿದಾಗಿನಿಂದ-16 ವರ್ಷದವರೆಗೂ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಹಾಕಿಸುವುದರ ಮೂಲಕ ಮಾರಣಾಂತಿಕ ಖಾಯಿಲೆಗಳಿಂದ ನಿಮ್ಮ ಮಗುವನ್ನು ರಕ್ಷಿಸಿಕೊಳ್ಳಿ ಎಂಬುದಾಗಿ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಗರ್ಭಿಣಿ ಸ್ತ್ರೀಯರು ಟಿ.ಡಿ-1 ಲಸಿಕೆಯನ್ನು ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಹಾಗೂ ಟಿ.ಡಿ-2 ಲಸಿಕೆಯನ್ನು ಟಿ.ಡಿ-1 ಲಸಿಕೆ ಪಡೆದ 4 ವಾರಗಳ ನಂತರ ಪಡೆದುಕೊಳ್ಳಬೇಕು. ಹುಟ್ಟಿದ ಕೂಡಲೇ ಮಗುವಿಗೆ 24 ಗಂಟೆಯೊಳಗೆ ಹೆಪಟೈಟೀಸ್-ಬಿ ಲಸಿಕೆ, ಬಿ.ಸಿ.ಜಿ ಹಾಗೂ ಓ.ಪಿ.ವಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 6 ವಾರಗಳ ನಂತರ ಓ.ಪಿ.ವಿ-1, ರೋಟಾ-1, ಐ.ಪಿ.ವಿ- 1, ಪಿ.ಸಿ.ವಿ-1 ಹಾಗೂ ಪೆಂಟಾವೆಲೆಂಟ್-1 ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 10 ವಾರಗಳ ನಂತರ ಓ.ಪಿ.ವಿ-2, ರೋಟಾ-2 ಮತ್ತು ಪೆಂಟಾವೆಲೆಂಟ್-2 ಲಸಿಕೆಯನ್ನು ಪಡೆದುಕೊಳ್ಳಬೇಕು. ಹುಟ್ಟಿದ 14 ವಾರಗಳ ನಂತರ ಓ.ಪಿ.ವಿ-3, ರೋಟಾ-3, ಐ.ಪಿ.ವಿ-2, ಪಿ.ಸಿ.ವಿ-2 ಹಾಗೂ ಪೆಂಟಾವೆಲೆಂಟ್-3 ಲಸಿಕೆಯನ್ನು ಪಡೆದುಕೊಳ್ಳಬೇಕು. 9 ತಿಂಗಳ ಮಗುವಿಗೆ ಐ.ಪಿ.ವಿ-3, ದಡಾರ ರುಬೆಲ್ಲಾ-1, ಪಿ.ಸಿ.ವಿ ವರ್ಧಕ, ಜೆ.ಇ-1 ಮತ್ತು ವಿಟಮಿನ್ ಎ-1 ಲಸಿಕೆಗಳನ್ನು ಪಡೆದುಕೊಳ್ಳಬೇಕು.
16-23 ತಿಂಗಳ ಮಕ್ಕಳಿಗೆ ಓ.ಪಿ.ವಿ ವರ್ಧಕ; ದಡಾರ ರುಬೆಲ್ಲಾ-2, ಡಿ.ಪಿ.ಟಿ ವರ್ಧಕ-1, ಜೆಇ-2 ಲಸಿಕೆಗಳನ್ನು ಪಡೆದುಕೊಳ್ಳಬೇಕು. 5-6 ವರ್ಷದ ವಯಸ್ಸಿನ ಮಕ್ಕಳು ಡಿ.ಪಿ.ಟಿ ವರ್ಧಕ-2 ಲಸಿಕೆ, 10 ವರ್ಷದಲ್ಲಿ ಟಿ.ಡಿ ಹಾಗೂ 16 ವರ್ಷದಲ್ಲಿ ಟಿ.ಡಿ ಲಸಿಕೆಗಳನ್ನು ತಮ್ಮ ಮಕ್ಕಳಿಗೆ ಹಾಕಿಸುವುದರಿಂದ ಆರೋಗ್ಯವಂತ ಮಕ್ಕಳನ್ನು ರಕ್ಷಿಸಿಕೊಳ್ಳಿ.
ಈ ಮೇಲೆ ತಿಳಿಸಿರುವ ಎಲ್ಲಾ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ತಮ್ಮ ಮಕ್ಕಳಿಗೆ ಹಾಕಿಸುವುದರಿಂದ ಪೋಲಿಯೋ, ಜಾಂಡೀಸ್, ಕಾಮಾಲೆ, ಹೆಪಟೈಟೀಸ್-ಬಿ, ನಾಯಿ ಕೆಮ್ಮು, ಧರ್ನುವಾಯು, ಗಂಟಲು ಮಾರಿ, ಡಿಪ್ತಿರೀಯಾ, ಮೆದುಳು ಜ್ವರ, ನ್ಯುಮೋನಿಯಾ, ಅತಿಸಾರ ಬೇದಿ ನಿಯಂತ್ರಣ, ಇರುಳು ಕುರುಡುತನ ರೋಗಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಬೇಕು.
ಜಾಣ್ಮೆಯಿಂದ ಯೋಚಿಸಿ ಜಾಗರೂಕರಾಗಿ ಲಸಿಕೆ ಹಾಕಿಸಿ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆಮಾಡಿ ಸಂಪರ್ಕಿಸಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








