Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
BIG BREAKING NEWS: Mild tremors felt again in Kodagu's Sampaje

BREAKING: ಬೆಳ್ಳಂಬೆಳಗ್ಗೆ ಕಂಪಿಸಿದ ಕಾಶ್ಮೀರ: ಭಾರತ-ಪಾಕ್ ಗಡಿಯುದ್ದಕ್ಕೂ 4.6 ತೀವ್ರತೆಯ ಭೂಕಂಪ | Earthquake

02/02/2026 7:05 AM

ALERT : ಟಾಯ್ಲೆಟ್ ಗೆ ‘ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ..! ಮಿಸ್ ಮಾಡದೇ ಈ ಸುದ್ದಿ ಓದಿ

02/02/2026 7:05 AM

`ಕಿಡ್ನಿ ಸ್ಟೋನ್’ ಸಮಸ್ಯೆ ಇದ್ರೆ ಜಸ್ಟ್ ಈ ಹಣ್ಣು ತಿನ್ನಿ, ಕಲ್ಲುಗಳು ಕರಗುತ್ವೆ!

02/02/2026 7:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ‘ಸ್ಟಾಫ್ ನರ್ಸ್’ ಖಾಯಂಗೊಳಿಸಿ: ‘ಕರ್ನಾಟಕ ಹೈಕೋರ್ಟ್’ ಮಹತ್ವದ ತೀರ್ಪು
KARNATAKA

BIG NEWS: 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ‘ಸ್ಟಾಫ್ ನರ್ಸ್’ ಖಾಯಂಗೊಳಿಸಿ: ‘ಕರ್ನಾಟಕ ಹೈಕೋರ್ಟ್’ ಮಹತ್ವದ ತೀರ್ಪು

By kannadanewsnow0908/10/2024 3:31 PM

ಬೆಂಗಳೂರು: 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದಂತ ಸ್ಟಾಫ್ ನರ್ಸ್ ಗಳನ್ನು ಖಾಯಂಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಜಯದೇವ ಆಸ್ಪತ್ರೆ 10ಕ್ಕೂ ಹೆಚ್ಚು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಂತ ಸ್ಟಾಫ್ ನರ್ಸ್ ಗಳ ಸೇವೆಯನ್ನು ಖಾಯಂಗೊಳಿಸುವಂತೆ ಆದೇಶಿಸಿದೆ.

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಬಿ.ಜೆ ರಾಣಿ ಸೇರಿದಂತೆ 10ಕ್ಕೂ ಹೆಚ್ಚು ಸ್ಟಾಫ್ ನರ್ಸ್ ಗಳು ಗುತ್ತಿಗೆ ಆಧಾರದಲ್ಲಿ ಜಯದೇವ ಹೃದಯ ರಕ್ತನಾಳದ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿಮ್ಮ ಸೇವೆಯನ್ನು ಕಾಯಂಗೊಳಿಸಲು ಆಗದು ಎಂಬುದಾಗಿ ಲಿಖಿತವಾಗಿ ಪತ್ರದಲ್ಲಿ ಆಸ್ಪತ್ರೆಯು ತಿಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದಂತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ಅವರನ್ನೊಳಗೊಂಡಂತ ಏಕಸದಸ್ಯ ನ್ಯಾಯಪೀಠವು, ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿದ್ದ 10ಕ್ಕೂ ಹೆಚ್ಚು ಅರ್ಜಿದಾರ ನರ್ಸ್ ಗಳನ್ನು ಖಾಯಂಗೊಳಿಸುವಂತೆ ಆದೇಶಿಸಿದರು.

ಜಯದೇವ ಹೃದ್ರೋಗ ಸಂಸ್ಥೆಗೆ, ಅದರ ಹೃದಯವೇ ಸರಿಯಾದ ಸ್ಥಳದಲ್ಲಿ ಇಲ್ಲ ಎಂದು ಕುಟುಕಿದಂತ ಹೈಕೋರ್ಟ್‌, ನಿಮ್ಮ ಸೇವೆಯನ್ನು ಕಾಯಂಗೊಳಿಸಲು ಆಗದು ಎಂದು ಸಂಸ್ಥೆಯು ಅರ್ಜಿದಾರರಿಗೆ ನೀಡಿದ್ದ ಹಿಂಬರಹವನ್ನು ರದ್ದುಗೊಳಿಸಿದೆ.

ಅರ್ಜಿದಾರರು 2004 ರಿಂದ 2007ರ ನಡುವಿನ ಅವಧಿಯಲ್ಲಿ ಗುತ್ತಿಗೆ ಆಧಾರದಡಿ ನೇಮಕಗೊಂಡು ಸ್ಟಾರ್ಫ್‌ ನರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ, 10 ವರ್ಷ ಸೇವೆ ಪೂರೈಸಿದ ದಿನದಿಂದ ಅನ್ವಯವಾಗುವಂತೆ ಅವರ ಸೇವೆಯನ್ನು ಕಾಯಂಗೊಳಿಸಬೇಕು. ಹತ್ತು ವರ್ಷ ಪರಿಗಣಿಸುವಾಗ ಮಧ್ಯದಲ್ಲಿ ಒಂದೆರಡು ದಿನಗಳ ಬ್ರೇಕಿಂಗ್‌ ಅವಧಿಯನ್ನು ನಿರ್ಲಕ್ಷಿಸಬೇಕು ಎಂದು ಹೈಕೋರ್ಟ್ ನ್ಯಾಯಪೀಠ, ಜಯದೇವ ಹೃದ್ರೋಗ ಸಂಸ್ಥೆಗೆ ನಿರ್ದೇಶಿಸಿದೆ.

ರಾಜ್ಯದ ಅತ್ಯುತ್ತಮ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದೆನಿಸಿರುವ ಜಯದೇವ ಸಂಸ್ಥೆಯು ರಾಜ್ಯಕ್ಕೆ ಮಾದರಿಯಾಗಿ ನಡೆದುಕೊಳ್ಳಬೇಕು. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಅಧ್ಯಕ್ಷರಾಗಿರುವ ಇದರ ಆಡಳಿತ ಮಂಡಳಿಯು ತನ್ನದೇ ಆಸ್ಪತ್ರೆಯ ನರ್ಸ್‌ಗಳ ವಿಚಾರದಲ್ಲಿ ಅನ್ಯಾಯದಿಂದ ನಡೆದುಕೊಳ್ಳುವುದು ಸರಿಯಲ್ಲ. ಸಿಬ್ಬಂದಿಯ ಅನುಭವವನ್ನು ಕಾನೂನಾತ್ಮಕವಾಗಿ ಪರಿಗಣಿಸಿ ಅವರ ಸೇವೆ ಕಾಯಂ ಬಗ್ಗೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದೆ. ಅರ್ಜಿದಾರರ ಪರವಾಗಿ ಹೈಕೋರ್ಟ್‌ ವಕೀಲ ಎಸ್‌.ರಂಗನಾಥ ಜೋಯಿಸ್ ವಾದಿಸಿದ್ದರು.

ಏನಿದು ಪ್ರಕರಣ?

ಜಯದೇವ ಹೃದಯ ರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಂತ ಸ್ಟಾಫ್ ನರ್ಸ್ ಗಳಿಗೆ ಸಂಸ್ಥೆಯು ಹಿಂಬರಹದಲ್ಲಿ ಸೇವೆ ಖಾಯಂಗೆ ಸಾಧ್ಯವಿಲ್ಲ ಎಂಬುದಾಗಿ ನೀಡಲಾಗಿತ್ತು. ಈ ಹಿಂಬರಹ ಏಕಪಕ್ಷೀಯವಾಗಿದೆ. ಕಾನೂನು ಬಾಹಿರವಾಗಿದೆ. ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾದಂತೆ ಆಗಿದೆ. ಇದನ್ನು ರದ್ದುಗೊಳಿಸಬೇಕು. ನಮ್ಮ ಸೇವೆಯನ್ನು ಖಾಯಂಗೊಳಿಸುವಂತೆ, ಕಾನೂನು ಬದ್ಧವಾಗಿ ಸಲ್ಲಬೇಕಾದಂತ ಎಲ್ಲಾ ಸೌಲಭ್ಯಗಳನ್ನು ನೀಡು ಜಯದೇವ ಆಸ್ಪತ್ರೆಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ಅವರನ್ನೊಳಗೊಂಡಂತ ಏಕಸದಸ್ಯ ನ್ಯಾಯಪೀಠವು, ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿದ್ದ 10ಕ್ಕೂ ಹೆಚ್ಚು ಅರ್ಜಿದಾರ ನರ್ಸ್ ಗಳನ್ನು ಖಾಯಂಗೊಳಿಸುವಂತೆ ಆದೇಶಿಸಿದರು.

BREAKING: ಸಿಎಂ ಕಾನ್ವೆ ನಿಯಮ ಉಲ್ಲಂಘನೆ: ಶಾಸಕ ಜನಾರ್ಧನ ರೆಡ್ಡಿ ಕಾರು ಜಪ್ತಿ

“ಇನ್ನೊಮ್ಮೆ ಇಂತಹ ಅನಕ್ಷರಸ್ಥರನ್ನ ಆಹ್ವಾನಿಸಬೇಡಿ” : ‘ಝಾಕಿರ್ ನಾಯ್ಕ್’ ಗೌರವಿಸಿದ ಸರ್ಕಾರಕ್ಕೆ ‘ಪಾಕಿಸ್ತಾನಿ’ಯರ ತರಾಟೆ

BREAKING : ಹರಿಯಾಣ ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ `ವಿನೇಶ್ ಪೋಗಟ್’ ಗೆ ಭರ್ಜರಿ ಗೆಲುವು | Vinesh Phogat

Share. Facebook Twitter LinkedIn WhatsApp Email

Related Posts

`ಕಿಡ್ನಿ ಸ್ಟೋನ್’ ಸಮಸ್ಯೆ ಇದ್ರೆ ಜಸ್ಟ್ ಈ ಹಣ್ಣು ತಿನ್ನಿ, ಕಲ್ಲುಗಳು ಕರಗುತ್ವೆ!

02/02/2026 7:00 AM2 Mins Read

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : 2 ಕಂತಿನ `ಗೃಹಲಕ್ಷ್ಮಿ’ ಹಣ ಬಿಡುಗಡೆ.!

02/02/2026 6:53 AM1 Min Read

ರೈತರಿಗೆ ಗುಡ್ ನ್ಯೂಸ್ : `ಟ್ರ್ಯಾಕ್ಟರ್’ ಖರೀದಿಗೆ ಸರ್ಕಾರದಿಂದಲೇ ಸಿಗಲಿದೆ ಶೇ.50% ಸಬ್ಸಿಡಿ.!

02/02/2026 6:45 AM4 Mins Read
Recent News
BIG BREAKING NEWS: Mild tremors felt again in Kodagu's Sampaje

BREAKING: ಬೆಳ್ಳಂಬೆಳಗ್ಗೆ ಕಂಪಿಸಿದ ಕಾಶ್ಮೀರ: ಭಾರತ-ಪಾಕ್ ಗಡಿಯುದ್ದಕ್ಕೂ 4.6 ತೀವ್ರತೆಯ ಭೂಕಂಪ | Earthquake

02/02/2026 7:05 AM

ALERT : ಟಾಯ್ಲೆಟ್ ಗೆ ‘ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ..! ಮಿಸ್ ಮಾಡದೇ ಈ ಸುದ್ದಿ ಓದಿ

02/02/2026 7:05 AM

`ಕಿಡ್ನಿ ಸ್ಟೋನ್’ ಸಮಸ್ಯೆ ಇದ್ರೆ ಜಸ್ಟ್ ಈ ಹಣ್ಣು ತಿನ್ನಿ, ಕಲ್ಲುಗಳು ಕರಗುತ್ವೆ!

02/02/2026 7:00 AM

ಊಟವಾದ ಮೇಲೆ ಹೊಟ್ಟೆ ಉಬ್ಬರಿಸುತ್ತಿದೆಯೇ? ಜೀರ್ಣಕ್ರಿಯೆ ಸುಧಾರಿಸಲು ಇಲ್ಲಿವೆ ಟಿಪ್ಸ್

02/02/2026 7:00 AM
State News
KARNATAKA

`ಕಿಡ್ನಿ ಸ್ಟೋನ್’ ಸಮಸ್ಯೆ ಇದ್ರೆ ಜಸ್ಟ್ ಈ ಹಣ್ಣು ತಿನ್ನಿ, ಕಲ್ಲುಗಳು ಕರಗುತ್ವೆ!

By kannadanewsnow5702/02/2026 7:00 AM KARNATAKA 2 Mins Read

ಅನಾರೋಗ್ಯಕರ ಜೀವನ, ಅನಿಯಮಿತ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆಯಂತಹ ವಿವಿಧ ಜೀವನಶೈಲಿಯ ಅಂಶಗಳು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇದು…

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : 2 ಕಂತಿನ `ಗೃಹಲಕ್ಷ್ಮಿ’ ಹಣ ಬಿಡುಗಡೆ.!

02/02/2026 6:53 AM

ರೈತರಿಗೆ ಗುಡ್ ನ್ಯೂಸ್ : `ಟ್ರ್ಯಾಕ್ಟರ್’ ಖರೀದಿಗೆ ಸರ್ಕಾರದಿಂದಲೇ ಸಿಗಲಿದೆ ಶೇ.50% ಸಬ್ಸಿಡಿ.!

02/02/2026 6:45 AM

ಇನ್ನೊಂದು ತಿಂಗಳಿನಲ್ಲಿ ‘ಜಾತಿಗಣತಿ ವರದಿ’ ಬಿಡುಗಡೆ : CM ಸಿದ್ಧರಾಮಯ್ಯ ಘೋಷಣೆ

02/02/2026 6:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.