ಬೆಂಗಳೂರು : ರಾಜ್ಯದ ಸರ್ಕಾರಿ / ಅನುದಾನಿತ / ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಕುರಿತು ಅರಿವು ಮೂಡಿಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರಿ/ಅನುದಾನಿತ/ಅನುದಾನರಹಿತ ವಿಧ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹಾಗೂ ತಂಬಾಕು ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಕಾಲೇಜುಗಳ ಆವರಣದಿಂದ 100 ಗಜಗಳ ಅಂತರದಲ್ಲಿ ತಂಬಾಕುಯುಕ್ತ ವಸ್ತುಗಳ ಮಾರಾಟ ನಿಷೇಧಿಸಿದೆ ಎಂದು ಶಾಲಾ/ಕಾಲೇಜುಗಳ ಆವರಣದಲ್ಲಿ ಫಲಕಗಳನ್ನು ಪ್ರದರ್ಶಿಸಲು ತಿಳಿಸಿ ಉಲ್ಲೇಖ (1) ರ ಸುತ್ತೋಲೆಯನ್ನು ಹೊರಡಿಸಲಾಗಿದೆ. ತದ ನಂತರ ಈ ಕುರಿತು ಅನುಪಾಲನ ಮಾಡಲು ಮೇಲಿಂದ ಮೇಲೆ ತಿಳಿಸಲಾಗಿದೆ.
ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಹಾಗೂ ತಂಬಾಕು ಉತ್ಪನ್ನಗಳನ್ನು ಯಾವುದೇ ರೂಪದಲ್ಲಿ ಉತ್ಪಾದಿಸುವ ಅಥವಾ ಮಾರಾಟ/ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವ ಯಾವುದೇ ಸಂಸ್ಥೆ ಅಥವಾ ಮಾರಾಟಗಾರರು ಪ್ರಾಯೋಜಿಸುವ ಯಾವುದೇ ಕಾರ್ಯದಲ್ಲಿ ಭಾಗವಹಿಸಬಾರದು. ಇಂತಹ ಸಂಸ್ಥೆಗಳು ನೀಡುವ ಬಹುಮಾನ ಅಥವಾ ವಿದ್ಯಾರ್ಥಿ ವೇತನಗಳನ್ನು ಶಿಕ್ಷಣ ಸಂಸ್ಥೆಗಳಾಗಲೀ ಅಥವಾ ವಿದ್ಯಾರ್ಥಿಗಳಾಗಲೀ ಸ್ವೀಕರಿಸಬಾರದೆಂದು ಎಲ್ಲಾ ಶಾಲೆಗಳಿಗೆ ತಿಳಿಸಲು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸಲು ಶಾಲಾ ಹಂತದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ತಿಳಿಸಿ ಉಲ್ಲೇಖ (2) ರ ವಿವಿಧ ದಿನಾಂಕಗಳ ಸುತ್ತೋಲೆಗಳಲ್ಲಿ ಸೂಚಿಸಲಾಗಿದೆ.
໙ (3) 03 Ministry of health and Family welfare Guidelines for Tobacco Free Educational Institution (Revised) ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವುದರಿಂದ, ಸದರಿ ಮಾರ್ಗಸೂಚಿಯನ್ನು ಈ ಸುತ್ತೋಲೆಗೆ ಅನುಬಂಧಿಸಿದೆ. ಸದರಿ ಸುತ್ತೋಲೆಯಂತೆ ಶಾಲೆಗಳಲ್ಲಿ ಮುಖ್ಯ ಶಿಕ್ಷಕರುಗಳಿಗೆ ಅಗತ್ಯ ಕ್ರಮವಹಿಸಲು ತಿಳಿಸುವಂತೆ ಸೂಚಿಸಿದೆ.
ಈ ಕುರಿತು Sub Committee on Health under the Petition Committee ರವರ ಇತ್ತೀಚಿನ ಸಭೆಯಲ್ಲಿ ಶಿಕ್ಷಣ (TOFEI Compliance, Tobacco Free Institutions) (Revised Guidelines) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಹಂತದ ವರದಿ ಕೋರಿದ್ದು, ಈ ಸಂಬಂಧ ಈಗಾಗಲೇ ದಿನಾಂಕ : 27/03/2024 ರಂದು ಜ್ಞಾಪನವನ್ನು ಹೊರಡಿಸಿ ಮಾಹಿತಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ.