ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 34 ತಹಶೀಲ್ದಾರ್ ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಕಂದಾಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡ ತಹಶೀಲ್ದಾರ್ ವರ್ಗಾವಣೆ ಮಾಡಿ ಆದೇಶಿಸಿರುವುದಾಗಿ ತಿಳಿಸಿದೆ.
ಬೆಂಗಳೂರಿನ ವಿವಿ ಟವರ್ ನಲ್ಲಿ ವಿಶೇಷಾಧಿಕಾರಿಗಳು, ಸಕ್ಷಮ ಪ್ರಾಧಿಕಾರಿಗಳ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ತಹಶೀಲ್ದಾರ್ ಗ್ರೇಡ್-2 ಕಾವ್ಯಶ್ರೀ ಹೆಚ್ ಅವರನ್ನು ಬಾದಾಮಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-1 ಆಗಿ ವರ್ಗಾವಣೆ ಮಾಡಲಾಗಿದೆ. ಬಾಗಲಕೋಟೆಯ ಗುಳೇದಗುಡ್ಡ ತಾಲ್ಲೂಕಿನ ವಿಶೇಷ ತಹಶೀಲ್ದಾರ್ ಮಹೇಶ್ ಭಗವಂತ ಗಸ್ತೆ ಅವರನ್ನು ಧಾರವಾಡದ ಹುಬ್ಬಳ್ಳಿ ನಗರ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಎಂ.ರೇಣುಕಾ ಅವರನ್ನು ಹಿರೇಕೆರೂರು ತಾಲ್ಲೂಕು ತಹಶೀಲ್ದಾರ್, ಕೆ.ರಾಘವೇಂದ್ರರಾವ್ ಅವರನ್ನು ಶಿರಹಟ್ಟಿ ತಾಲ್ಲೂಕು ತಹಶೀಲ್ದಾರ್ ಗ್ರೇಡ್-1 ಹುದ್ದೆ, ಡಾ.ಚಿಕ್ಕಪ್ಪ ನಾಯಕ ಅವರನ್ನು ಅಂಕೋಲಾ ತಾಲ್ಲೂಕಿನ ತಹಶೀಲ್ದಾರ್ ಗ್ರೇಡ್-1 ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಎಸ್ ಬಿ ಕೊಡಲಗಿ ಅವರನ್ನು ಪುತ್ತೂರು ತಾಲ್ಲೂಕು ತಹಶೀಲ್ದಾರ್ ಆಗಿ, ಶೀತಲ್ ಟಿ ಎಸ್ ಅವರನ್ನು ನೆಲಮಂಗಲ ತಾಲ್ಲೂಕು ತಹಶೀಲ್ದಾರ್ ಆಗಿ, ಜಿವಿ ಮೋಹನ್ ಕುಮಾರ್ ಅವರನ್ನು ತಿಪಟೂರು ತಾಲ್ಲೂಕು ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 34 ತಹಶೀಲ್ದಾರರುಗಳ ವರ್ಗಾವಣೆ ಪಟ್ಟಿ
JOB ALERT: ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಉದ್ಯೋಗಿಗಳೇ ಗಮನಿಸಿ : ಪ್ರತಿ ತಿಂಗಳು ನಿಮ್ಮ ಸಂಬಳದಿಂದ `PF’ ಕಡಿತಗೊಂಡರೆ ಸಿಗಲಿವೆ ಈ 7 ಪ್ರಯೋಜನಗಳು.!