ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, ಮೇಜರ್ ಸರ್ಜರಿ ಮಾಡಲಾಗಿದೆ. ಬರೋಬ್ಬರಿ 23 ಡಿವೈಎಸ್ಪಿಯವರನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ.
ಇಂದು ರಾಜ್ಯ ಸರ್ಕಾರದಿಂದ ವರ್ಗಾವಣೆ ಆದೇಶ ಹೊರಡಿಸಿದ್ದು, ಆಡಳಿತಾತ್ಮಕ ಹಿತದೃಷ್ಠಿಯಿಂದ ಕಲಬುರ್ಗಿಯ ಪಿಟಿಸಿ ನಾಗೇನಹಳ್ಳಿ ಡಿವೈಎಸ್ಪಿಯಾಗಿದ್ದಂತ ರಾಜಣ್ಣ ಡಿ.ಜಿ ಅವರನ್ನು ಬೀದರ್ ಉಪ ವಿಭಾಗದ ವರ್ಗಾವಣೆ ಆದೇಶ ರದ್ದುಪಡಿಸಿ, ಅಲ್ಲಿಯೇ ಮುಂದುವರೆಸಲಾಗಿದೆ.
ಇನ್ನೂ ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ ಅವರನ್ನು ಗೋಕಾಕ್ ಉಪ ವಿಭಾಗದಿಂದ ಬೀದರ್ ಉಪ ವಿಭಾಗದ ಡಿವೈಎಸ್ಪಿಯಾಗಿ, ಗಿರೀಶ್ ಬಿ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಉತ್ತರ ಕನ್ನಡದ ಭಟ್ಕಳ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಮಹೇಶ್.ಎಂ.ಕೆ ಅವರನ್ನು ಭಟ್ಕಳ ಉಪ ವಿಭಾಗದಿಂದ ಸಿಐಡಿಗೆ, ಯು.ಡಿ ಕೃಷ್ಣಕುಮಾರ್ ಎಂಬುವರನ್ನು ರಾಜ್ಯ ಗುಪ್ತವಾರ್ತೆಯಿಂದ ಶ್ರೀರಂಗಪಟ್ಟಣ ಉಪ ವಿಭಾಗದ ಡಿವೈಎಸ್ಪಿಯಾಗಿ, ಪ್ರಭು ಡಿ.ಟಿ ಅವರನ್ನು ಉಡುಪಿ ಉಪ ವಿಭಾಗದಿಂದ, ಕಲಬುರ್ಗಿ ನಗರ ಸಂಚಾರ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 23 ಡಿವೈಎಸ್ಪಿ ವರ್ಗಾವಣೆ ಪಟ್ಟಿ

SHOCKING: ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ








