ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, ಮೇಜರ್ ಸರ್ಜರಿ ಮಾಡಲಾಗಿದೆ. ಬರೋಬ್ಬರಿ 23 ಡಿವೈಎಸ್ಪಿ ಹಾಗೂ 129 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಮಾಡಿದೆ.
ಇಂದು ರಾಜ್ಯ ಸರ್ಕಾರದಿಂದ ವರ್ಗಾವಣೆ ಆದೇಶ ಹೊರಡಿಸಿದ್ದು, ಕಲಬುರ್ಗಿಯ ಪಿಟಿಸಿ ನಾಗೇನಹಳ್ಳಿ ಡಿವೈಎಸ್ಪಿಯಾಗಿದ್ದಂತ ರಾಜಣ್ಣ ಡಿ.ಜಿ ಅವರನ್ನು ಬೀದರ್ ಉಪ ವಿಭಾಗದ ವರ್ಗಾವಣೆ ಆದೇಶ ರದ್ದುಪಡಿಸಿ, ಅಲ್ಲಿಯೇ ಮುಂದುವರೆಸಲಾಗಿದೆ.
ಇನ್ನೂ ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ ಅವರನ್ನು ಗೋಕಾಕ್ ಉಪ ವಿಭಾಗದಿಂದ ಬೀದರ್ ಉಪ ವಿಭಾಗದ ಡಿವೈಎಸ್ಪಿಯಾಗಿ, ಗಿರೀಶ್ ಬಿ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಉತ್ತರ ಕನ್ನಡದ ಭಟ್ಕಳ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಮಹೇಶ್.ಎಂ.ಕೆ ಅವರನ್ನು ಭಟ್ಕಳ ಉಪ ವಿಭಾಗದಿಂದ ಸಿಐಡಿಗೆ, ಯು.ಡಿ ಕೃಷ್ಣಕುಮಾರ್ ಎಂಬುವರನ್ನು ರಾಜ್ಯ ಗುಪ್ತವಾರ್ತೆಯಿಂದ ಶ್ರೀರಂಗಪಟ್ಟಣ ಉಪ ವಿಭಾಗದ ಡಿವೈಎಸ್ಪಿಯಾಗಿ, ಪ್ರಭು ಡಿ.ಟಿ ಅವರನ್ನು ಉಡುಪಿ ಉಪ ವಿಭಾಗದಿಂದ, ಕಲಬುರ್ಗಿ ನಗರ ಸಂಚಾರ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 23 ಡಿವೈಎಸ್ಪಿ ವರ್ಗಾವಣೆ ಪಟ್ಟಿ

ಇನ್ನೂ ರಾಜ್ಯ ಸರ್ಕಾರದಿಂದ 129 ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶಿಸಿದೆ. ಸಿಸಿಬಿಯಲ್ಲಿದ್ದಂತ ಶ್ರೀನಿವಾಸ ಜಿ.ಟಿ ಅವರನ್ನು ಬೆಂಗಳೂರಿನ ಮಾಗಡಿ ಪೊಲೀಸ್ ಠಾಣೆಯ ಪಿಐ ಆಗಿ ವರ್ಗಾವಣೆ ಮಾಡಲಾಗಿದೆ. ಗಂಗಾಧರ ಟಿ.ಎಂ ಎಂಬುವರನ್ನು ಡಿಸಿಆರ್ ಇಗೆ, ವಿಜಯಕುಮಾರ್.ಆರ್ ಅವರನ್ನು ಬಿಡದಿ ಪೊಲೀಸ್ ಠಾಣೆಗೆ, ಪ್ರಕಾಶ್.ಆರ್ ಅವರನ್ನು ರಾಜ್ಯ ಗುಪ್ತವಾರ್ತೆಯಲ್ಲಿಯೇ ಮುಂದುವರೆಸಲಾಗಿದೆ.
ಕೃಷ್ಣ.ಎಸ್.ಕೆ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ, ಮಾರುತಿ.ಬಿ ಅವರನ್ನು ಬೆಂಗಳೂರು ನಗರದ ವಿವಿಐಪಿ ಭದ್ರತೆಗೆ, ನಂಜೇಗೌಡ ಎಸ್ ಅವರನ್ನು ಕಗ್ಗಲೀಪುರ ಪೊಲೀಸ್ ಠಾಣೆಗೆ, ವೆಂಕಟೇಶ್.ಕೆ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.
ಹೀಗಿದೆ 129 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆಯ ಪಟ್ಟಿ




BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 23 ಡಿವೈಎಸ್ಪಿ ವರ್ಗಾವಣೆ | DYSP Transfer
SHOCKING: ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ








