ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಬರೋಬ್ಬರಿ 55 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿವಿಲ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದ್ದು, ಆನೇಕಲ್ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀವ್ ಕುಮಾರ್ ಅವರನ್ನು ರಾಮನಗರ ಜಿಲ್ಲೆಯ ಕೋಡಿಹಳ್ಳಿ ಪೊಲೀಸ್ ಠಾಣೆಯ ಖಾಲಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಬನ್ನೇರುಘಟ್ಟ ಠಾಣೆಯ ಸಿದ್ದನಗೌಡ ಜಲಪೂರ ಅವರನ್ನು ಆನೇಕಲ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಜಿಗಣಿ ಠಾಣೆಯ ಶಭಾನಾ ಭಾನು ಯಾಸೀನ್ ಮಾಕಂದಾರ್ ಅವರನ್ನು ಸರ್ಜಾಪುರ ಠಾಣೆಗೆ, ಸರ್ಜಾಪುರ ಠಾಣೆಯ ದುಂಡಪ್ಪ ಬಾರ್ಕಿ ಅವರನ್ನು ಮಾದನಾಯಕನಹಳ್ಳಿ ಠಾಣೆಗೆ, ಸೂರ್ಯನಗರ ಠಾಣೆಯ ಬಸವರಾಜು ಸವಟಗಿ ಅವರನ್ನು ತುಮಕೂರಿನ ನೊಣವಿನಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಎಂ ಗಂಗಪ್ಪ ಅವರನ್ನು ಬೆಂಗಳೂರಿನ ನಂದಗುಡಿ ಠಾಣೆಗೆ, ನಂದಗುಡಿ ಠಾಣೆಯ ವಿ ಸುಬ್ರಮಣಿ ಅವರನ್ನು ಹೊಸಕೋಟೆ ಸಂಚಾರ ಪೊಲೀಸ್ ಠಾಣೆಗೆ ವರ್ಗಾವರ್ಗಿ ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಕೆ.ಜಿ ಪಂಕಜ ಅವರನ್ನು ಬೆಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.
ಹೀಗಿದೆ 55 ಪಿಎಸ್ಐ ವರ್ಗಾವಣೆ ಸಂಪೂರ್ಣ ಪಟ್ಟಿ