ಬೆಂಗಳೂರು: ನಗರದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. ಐಷಾರಾಮಿ ಕಾರು ಮಾಲೀಕರಿಂದ ಲಕ್ಷ ಲಕ್ಷ ತೆರಿಗೆ ಹಣವನ್ನು ವಸೂಲಿ ಮಾಡಲಾಗಿದೆ.
ಹೌದು ಬೆಂಗಳೂರಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಐಷಾರಾಮಿ ಕಾರು ಮಾಲೀಕರನಿಂದ ಭರ್ಜರಿ ತೆರಿಗೆ ವಸೂಲಿ ಮಾಡಿದ್ದಾರೆ. ಐಷಾರಾಮಿ ಕಾರು ಮಾಲೀಕನಿಂದ ಬರೋಬ್ಬರಿ 98 ಲಕ್ಷ ತೆರಿಗೆ ವಸೂಲಿ ಮಾಡಿದ್ದಾರೆ.
ಫೆರಾರಿ ಕಾರು ಮಾಲೀಕನಿಂದ 61,94,494 ರೂ ತೆರಿಗೆ ವಸೂಲಿ ಮಾಡಿದ್ದರೇ, ಬೆಂಜ್ ಕಾರು ಮಾಲೀಕನಿಂದ 37,03,444 ತೆರಿಗೆ ವಸೂಲಿ ಮಾಡಲಾಗಿದೆ. ಒಂದು ವೇಳೆ ತೆರಿಗೆ ಕಟ್ಟದಿದ್ದರೇ ಫೆರಾರಿ, ಮರ್ಸಿಡಿಸ್ ಬೆಂಜ್ ಕಾರು ಜಪ್ತಿಗೂ ಆರ್ ಟಿ ಒ ಅಧಿಕಾರಿಗಳು ಮುಂದಾಗಿದ್ದರು. ಹೀಗಾಗಿ ಲಕ್ಷಾಂತರ ತೆರಿಗೆ ಬಾಕಿಯನ್ನು ಕಟ್ಟಿದ್ದಾರೆ.
BREAKING: ಭಾರೀ ಮಳೆ ಹಿನ್ನಲೆ: ನಾಳೆ ರಾಜ್ಯದ ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ