ಶಿವಮೊಗ್ಗ: ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಮಹೇಶ್ ಹೆಗಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಹೇಶ್ ಹೆಗಡೆ, ಉಪಾಧ್ಯಕ್ಷರಾಗಿ ರವಿನಾಯ್ಡು, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಕುಮಾರ್ ಗುಡಿಗಾರ್ ಹಾಗೂ ಖಜಾಂಚಿಯಾಗಿ ಗಿರೀಶ್ ಆರ್ ರಾಯ್ಕರ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದಂತ ನೂತನ ಅಧ್ಯಕ್ಷರಾದಂತ ಮಹೇಶ್ ಹೆಗಡೆ ಅವರು, ನನಗೆ ಹೊಸದೊಂದು ಜವಾಬ್ದಾರಿಯನ್ನು ಹೊರಿಸಲಾಗಿದೆ. ಈವರೆಗೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಈಗ ಅಧ್ಯಕ್ಷರಾಗಿ ನಿಮ್ಮೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಕೆಲಸ ಮಾಡಲಿದ್ದೇನೆ. ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದಂತ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ಅಂತ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ಗುಡಿಗಾರ್ ಮಾತನಾಡಿ, ಸಂಘಕ್ಕೆ ದುಡಿದಂತ ಅವಿರತ ಶ್ರಮಕ್ಕೆ ಇಂದು ಹೊಸ ಜವಾಬ್ದಾರಿಯನ್ನು ನೀಡಲಾಗಿದೆ. ಅದನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವುದಾಗಿ ಹೇಳಿದರು.

ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಮಾತನಾಡಿ ಜಿಲ್ಲಾ ಸಂಘವು ತುಂಬಾ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಪತ್ರಕರ್ತರ ಆರೋಗ್ಯದ ವಿಚಾರದಲ್ಲಿ ಅನೇಕ ಆರೋಗ್ಯ ತಪಾಸಣೆ ನಡೆಸಿದೆ. ಬರುವ ದಿನಗಳಲ್ಲೂ ಈ ನಿಟ್ಟಿನಲ್ಲಿ ಹಲವು ಕ್ರಮ ವಹಿಸಲಿದೆ. ಇಡೀ ಜಿಲ್ಲೆಯಲ್ಲಿ ಸಂಘಕ್ಕೆ ಅವಿರೋಧವಾಗಿ ಪದಾಧಿಕಾರಿಗಳು ಆಯ್ಕೆಯಾಗಬೇಕು ಎನ್ನುವ ನಿರ್ಣಯವನ್ನು ಕೈಗೊಂಡಿದ್ದು, ಅದರಂತೆ ಸಾಗರ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಮಾದರಿಯಾಗಿದೆ. ರಾಜ್ಯ ಮತ್ತು ಜಿಲ್ಲೆಯ ಸಂಘಟನೆಯ ಮಾರ್ಗದರ್ಶನ, ಸಹಕಾರದಲ್ಲಿ ತಾಲ್ಲೂಕು ಸಂಘಟನೆಗಳನ್ನು ಎಲ್ಲರೂ ಸೇರಿ ವ್ಯವಸ್ಥಿತವಾಗಿ ಮುನ್ನೆಡೆಸೋಣ ಎಂದ ಅವರು, ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.
ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದಂತ ನಾಗೇಶ್.ಜಿ ಅವರು ಮಾತನಾಡಿ ನನಗೆ ಎರಡು ಅವಧಿಗೆ ತಾಲ್ಲೂಕು ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಲು ಸಂಘವು ಅವಕಾಶ ನೀಡಿದೆ. ಎಲ್ಲರಿಗೂ ಧನ್ಯವಾದಗಳು ಅಂತ ಹೇಳಿದರು.

ಇದೇ ಸಂದರ್ಭದಲ್ಲಿ ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದಂತ ಜಿ.ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ನೂತನ ತಾಲ್ಲೂಕು ಅಧ್ಯಕ್ಷ ಮಹೇಶ್ ಹೆಗಡೆ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ಗುಡಿಗಾರ್ ಅವರನ್ನು ಸಂಘದ ಸದಸ್ಯರು ಹಾರ ಹಾಕಿ ಅಭಿನಂದಿಸಿ, ಶುಭಾಶಯವನ್ನು ತಿಳಿಸಲಾಯಿತು.
ಈ ವೇಳೆ ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದಂತ ಮಾ ವೆಂ ಸೆ ಪ್ರಸಾದ್, ರವಿ ಕುಮಾರ್ ಆನಂದಪುರ, ವಸಂತ್ ನೀಚರಡಿ, ಮೂರನೇ ಕಣ್ಣು ನಾಗರಾಜ್, ಜಮೀಲ್ ಸಾಗರ್, ರಫೀಕ್ ಕೊಪ್ಪ, ಇಮ್ರಾನ್ ಸಾಗರ್, ಗಣೇಶ್ ಹಾರಿಗೆ, ಶಿವಕುಮಾರ್ ಗೌಡ, ವಸಂತ ಬಿ ಈಶ್ವರಗೆರೆ ಉಪಸ್ಥಿತರಿದ್ದರು.
BIG NEWS: ಸಾಗರ ತಾಲ್ಲೂಕಲ್ಲಿ ’50 ಕೋಟಿ’ಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ‘ಆರ್ಥಿಕ ಇಲಾಖೆ’ ಅನುಮತಿಸಿ ಆದೇಶ
ALERT : ತೊಳೆಯದ `ತಲೆದಿಂಬು’ ಬಳಸುವವರೇ ಎಚ್ಚರ : ಇದರಲ್ಲಿವೆ `ಟಾಯ್ಲೆಟ್ ಸೀಟ್’ ಗಿಂತ ಡೇಂಜರ್ ಬ್ಯಾಕ್ಟೀರಿಯಾ.!








