ಯಾದಗಿರಿ : ಗಾಂಧೀಜಿ ನಮ್ಮ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುರುಮಠಕಲ್ ನಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಗಾಂಧಿ ನಮ್ಮ ದೇಶದ ರಾಷ್ಟ್ರಪಿತ ಎಂದು ನಾನು ಒಪ್ಪುವುದೇ ಇಲ್ಲ, ನೆಹರು ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ಎಂದು ನಾನು ಒಪ್ಪುವುದೇ ಇಲ್ಲ, ಇವರೆಲ್ಲ ತಮ್ಮ ತಮ್ಮ ಚಟಕ್ಕೆ ದೇಶ ಹಾಳು ಮಾಡಿದವರು ಎಂದರು.
ಗಾಂಧಿಯನ್ನು ನಾನು ನಮ್ಮ ಭಾರತದ ರಾಷ್ಟ್ರಪಿತ ಎಂದು ಎಂದಿಗೂ ಒಪ್ಪಲ್ಲ, ನೆಹರು ಮೊದಲ ಪ್ರಧಾನಿ ಅಲ್ಲ. ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಶ್ಚಂದ್ರ ಬೋಸ್. ಆಜಾದ್, ತಾತ್ಯಾ ಟೋಪಿ, ಸಾವರ್ಕರ್, ಲಾಲಾ ಲಜಪತ ರಾಯ್, ತಿಲಕ್, ಅಂಬೇಡ್ಕರ್ ರಂಥವರು ಸ್ವಾತಂತ್ರ್ಯಕ್ಕಾಗಿ ಕಷ್ಟಪಟ್ಟವರು ಎಂದು ಹೇಳಿದ್ದಾರೆ.








