ಬೆಂಗಳೂರು: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ದೇಶದೆಲ್ಲೆಡೆಯ ಶಿವನ ದೇವಾಲಯಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ. ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿದ್ದು, ಭಕ್ತರು ತಮ್ಮ ತನು ಮನವನ್ನು ದೇವನತ್ತ ಅರ್ಪಿಸುತ್ತಿದ್ದಾರೆ.ಧರ್ಮಸ್ಥಳ, ನಂಜನಗೂಡು ಸೇರಿದಂಥೆ ಆಂಧ್ರಪ್ರದೇಶದ ಶ್ರೀಕಾಳಹಸ್ತಿ, ತಿರುಪತಿ, ವಿಜಯವಾಡದ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಶಿವಘೋಷ ಮೊಳಗುತ್ತಿದೆ.
ಈ ನಡುವೆ ಅರಮನೆಯ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ದೇವರಿಗೆ ಯದುವಂಶಸ್ಥರಾದ ಯದುವೀರ್ ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ ಅವರು, ನಾಡಿನ ಜನತೆಗೆ ಶಿವರಾತ್ರಿಯ ಶುಭಾಶಯಗಳು. ಎಲ್ಲರಿಗೂ ಶುಭವಾಗಲಿ. ಪ್ರತಿ ವರ್ಷವೂ ತ್ರಿಣೇಶ್ವರ ದೇವರಿಗೆ ಪೂಜೆ ಸಲ್ಲಿಸುತ್ತೇವೆ. ಶ್ರೀರಂಗಪಟ್ಟಣದಲ್ಲಿ ರಾಜರು ಇದ್ದಾಗಿನಿಂದಲೂ ಇಲ್ಲಿ ಪೂಜೆ ಇದೆ ಎಂದರು.
ಚಿತ್ರದುರ್ಗ : ವೈದ್ಯರ ‘ನಿರ್ಲಕ್ಷ್ಯ’ದಿಂದ 4 ದಿನದ ‘ಹಸುಗೂಸು’ ಸಾವು : ಕುಟುಂಬಸ್ಥರಿಂದ ಗಂಭೀರ ಆರೋಪ
ನಾಳೆ ‘ರಾಷ್ಟ್ರಗೀತೆ’ ಹಾಡುವ ಮೂಲಕ ‘ರಾಮೇಶ್ವರಂ ಕೆಫೆಯನ್ನು’ ಆರಂಭಿಸುತ್ತೇವೆ : ಸಿಎಒ ರಾಘವೇಂದ್ರ ರಾವ್ ಹೇಳಿಕೆ