ಮಡಿಕೇರಿ : ಮಗಳನ್ನು ಪ್ರೀತಿಸಿದ್ದಕ್ಕೆ ತಂದೆಯೊಬ್ಬ ಯುವಕನ ಮೇಲೆ ಬಿಸಿನೀರು ಎರಚಿ ವಿಕೃತಿ ಮೆರೆದಿರುವ ಘಟನೆ ಮಡಿಕೇರಿ ತಾಲೂಕಿನಲ್ಲಿ ನಡೆದಿದೆ.
ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದಲ್ಲಿ ಸುಹೈಲ್ ಎಂಬಾತನ ಮೇಲೆ ಬಿಸಿನೀರು ಎರಚಿ ವಿಕೃತ ಮೆರೆದಿದ್ದು, ಯುವಕನ ಮುಖ, ಕುತ್ತಿಗೆ ಭಾಗದಲ್ಲಿ ಗಂಭೀರವಾದ ಗಾಯವಾಗಿದ್ದು, ಗಾಯಗೊಂಡ ಸುಹೈಲ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆನೀಡಲಾಗುತ್ತಿದೆ.
ಮಡಿಕೇರಿಯ ಗಣಪತಿ ಬೀದಿ ನಿವಾಸಿಯಾದ ಸುಹೈಲ್ ಕಳೆದ ಕೆಲ ವರ್ಷಗಳಿಂದ ಮದೆನಾಡು ಗ್ರಾಮದ ಸಾಧಿಕ್ ಎಂಬುವರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಈ ವೇಳೆ ಮನೆಯಲ್ಲಿ ಹಿಂಸೆಯಾಗುತ್ತಿದೆ ಎಂದು ಯುವತಿ ಫೋನ್ ಕರೆ ಮಾಡಿದ್ದಾಳೆ. ಹೀಗಾಗಿ ಪ್ರೇಯಸಿಯ ಮನೆಗೆ ಹೋಗಿದ್ದ ವೇಳೆ ಪ್ರೇಯಸಿಯ ತಂದೆ ಸಾದಿಕ್ ಬಿಸಿನೀರು ಎರಚಿರುವ ಘಟನೆ ನಡೆದಿದೆ.