ಮಡಿಕೇರಿ: ಕೆಲಸಕ್ಕೆ ಹೋಗುವಂತೆ ಸಲಹೆ ನೀಡಿದ 60 ವರ್ಷದ ತಾಯಿಯನ್ನು ಮರದ ಕೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಮದ್ಯವ್ಯಸನಿಯೊಬ್ಬನಿಗೆ ಕರ್ನಾಟಕ ಹೈಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ ದಂಡ ವಿಧಿಸಿದೆ.
ತನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತ ಪಡೆಯಲು ಸಂಪಾಜೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮನೆಕೆಲಸ, ತೋಟಗಾರಿಕೆ ಮುಂತಾದ ಸಮುದಾಯ ಸೇವೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
2017ರ ಮಾರ್ಚ್ ನಲ್ಲಿ ತಾಯಿ ಗಂಗಮ್ಮ ಕೊಲೆ ಪ್ರಕರಣದಿಂದ ಆರೋಪಿ ಅನಿಲ್ ಎನ್.ಬಿ(37)ನನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಮಡಿಕೇರಿ ಗ್ರಾಮಾಂತರ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಗೆ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಭಾಗಶಃ ಅನುಮತಿ ನೀಡಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಅನಿಲ್ ಮದ್ಯದ ವ್ಯಸನಿಯಾಗಿದ್ದನು ಮತ್ತು ದಾರಿತಪ್ಪಿದ್ದನು. 2015ರ ಎಪ್ರಿಲ್ 4ರಂದು ಘಟನೆ ನಡೆದ ದಿನ ಕುಡಿದು ಮನೆಗೆ ಬರದಂತೆ ತಾಯಿ ಬುದ್ಧಿವಾದ ಹೇಳಿದ್ದರು. ಆರೋಪಿಗೆ ತನ್ನ ತಾಯಿಯನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ ಎಂದು ದಾಖಲೆಗಳು ತೋರಿಸುತ್ತವೆ, ಆದರೆ ಅವನು ಅವಳ ಮೇಲೆ ಮಾರಣಾಂತಿಕ ರೀತಿಯಲ್ಲಿ ಹಲ್ಲೆ ಮಾಡಿದನು, ಇದು ಅವಳ ಸಾವಿಗೆ ಕಾರಣವಾಯಿತು ಎಂದು ನ್ಯಾಯಾಲಯ ಹೇಳಿದೆ.