ಮಂಡ್ಯ: ಮದ್ದೂರಲ್ಲಿ ಇಂದು ಜನ ಸೇರಲು ಬಿಜೆಪಿ ಜೆಡಿಎಸ್ ಕಾರಣ. ನಾಳೆಯ ಬಂದ್‌ಗೆ ಪ್ರೇರಣೆ ಕೊಟ್ಟಿರೋದು ಬಿಜೆಪಿ ಜೆಡಿಎಸ್. ಧಾರ್ಮಿಕವಾಗಿ ಇರುವ ಹುಡುಗರು ಇದಕ್ಕೆ ಕಾರಣ ಅಲ್ಲ. ರಾಜಕೀಯವಾಗಿ ಅವರನ್ನು ಬಳಸಿಕೊಂಡು ಹೀಗೆ ಮಾಡ್ತಾರೆ. ನಾವು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲ್ಲ ಎಂಬುದಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಮದ್ದೂರು ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಲೈಟ್ ಆಫ್ ಮಾಡಿದ್ದು, ಸನ್ನಿವೇಶದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಲ್ಲಾ ಅಧಿಕಾರಿಗಳು ಸೂಕ್ಷ್ಮವಾಗಿ ಈ ಘಟನೆ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆ. ಏನು ಹಿನ್ನೆಲೆ ಇದೆ, ರಾಜಕೀಯ ಪ್ರೇರಿತ ಇದಿಯೋ, ಇಲ್ಲವೋ, ಯಾವ ವ್ಯಕ್ತಿ ಇದ್ದರೋ ಎಲ್ಲಾ ತನಿಖೆ ನಡೆಯಲಾಗುತ್ತಿದೆ. ಇದನ್ನು ಗಮನಿಸಿದ್ರೆ ಪ್ಲಾನ್ಡ್ ಆಗಿ ಮಾಡಲಾಗಿದೆ ಎಂಬುದು ಗೊತ್ತಾಗುತ್ತೆ ಎಂದರು.
ಧಾರ್ಮಿಕ ಭಾವನೆಗಳನ್ನ ಇಟ್ಟುಕೊಂಡು ಪೂಜೆ ಮಾಡುವವವರಿಗೆ ಹೇಳುತ್ತೇನೆ. ಇದರಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಒಲೈಕೆ ಪರ ನಿಲ್ಲುವ ಕೆಲಸ ಮಾಡಲ್ಲ.
ಮಾಡಿದ್ರೆ ನಾಲ್ಕೈದು ಜನರನ್ನು ಬಂಧಿಸಿ ಸುಮ್ಮನಾಗ್ತಿದ್ವಿ. ನಾವು ಒಲೈಕೆ ಮಾಡಲ್ಲ, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ. ಮಂಡ್ಯ ಕಾವೇರಿ, ಸ್ವತಂತ್ರ ಹೋರಾಟ ಮಾಡಿದ ಜಿಲ್ಲೆ. ಇಂತಹ ಕೋಮು ವಿಚಾರಕ್ಕೆ ಜಿಲ್ಲೆಯಲ್ಲಿ ಗಲಾಟೆಯಾಗಿಲ್ಲ. ಇದೀಗಾ ಈ ವಿಚಾರಕ್ಕೆ ಗಲಾಟೆಯಾಗಿದೆ. ನಾಳೆ ಬಂದ್, ನಾಳಿದ್ದು ಸಾಮೂಹಿಕ ವಿಸರ್ಜನೆ ಇದೆ. ಒಂದೆರಡು ದಿನದಲ್ಲಿ ತನಿಖೆ ವರದಿ ಕೊಡಲು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.
ಧಾರ್ಮಿಕ ವಿಚಾರದ ಪರವಾಗಿ ನಾವು ಇರುತ್ತೇವೆ. ಯಾರು ಕೂಡ ಆತಂಕಪಡುವ ಆಗತ್ಯವಿಲ್ಲ. ಪ್ರತಾಪ್ ಸಿಂಹನಂತಹ ಕಿಡಿಗೇಡಿಗಳು ಈ ಘಟನೆಗೆ ಕಾರಣ. ಯಾವುದೇ ಸಂಘಟನೆಗಳು ಇದಕ್ಕೆ ಕಾರಣವಲ್ಲ ಎಂದರು.
ಪ್ರತಾಪ್ ಸಿಂಹನಿಗೆ ಕೆಲಸ ಇಲ್ಲ. ಪಕ್ಷ ಸಹ ಪ್ರತಾಪ್ ಸಿಂಹನನ್ನು ಹೊರ ಇಟ್ಟಿದೆ. ಪಕ್ಷದವರನ್ನು ವಲಿಸಿಕೊಳ್ಳಲು ಪ್ರತಾಪ್ ಸಿಂಹ ಹೀಗೆ ಮಾಡ್ತಾ ಇದ್ದಾರೆ. ತುಂಬಾ ವರ್ಷ ರಾಜಕೀಯ ನಾನು ಮಾಡಿದ್ದೇನೆ. ಯಾರು ಏಕೆ ಏನು ಮಾತಾಡುತ್ತಾರೆ ಎಂದು ಗೊತ್ತಿದೆ. ಕಾಂಗ್ರೆಸ್ ಮುಗಿದೆ ಹೋಯಿತು ಎಂದು ಕುಮಾರಸ್ವಾಮಿ ಹೇಳ್ತಾರೆ. ಜೆಡಿಎಸ್ ಎಲ್ಲಿದೆ ಎಂದು ಹುಡಕಬೇಕು. ಮಂಡ್ಯದಲ್ಲಿ ಅಲ್ಲೊಂದು ಇಲ್ಲೊಂದು ಬಿಟ್ಟರೆ ಎಲ್ಲೂ ಇಲ್ಲ. ರಾಜಶೇಖರ್ ರೆಡ್ಡಿ ತರ ಇವರೇನು ಪಕ್ಷ ಕಟ್ಟಿಲ್ಲ. ರಾಜಕೀಯ ಮಾಡೋಕೆ ಇನ್ನೂ ತುಂಬಾ ವರ್ಷ ಇದೆ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಈಗ ಸುಮ್ಮನೆ ಹೀಗೆಲ್ಲಾ ಮಾತಾಡಬೇಡಿ ಎಂದರು.
ಇಂದು ಜನ ಸೇರಲು ಬಿಜೆಪಿ ಜೆಡಿಎಸ್ ಕಾರಣ. ನಾಳೆಯ ಬಂದ್‌ಗೆ ಪ್ರೇರಣೆ ಕೊಟ್ಟಿರೋದು ಬಿಜೆಪಿ ಜೆಡಿಎಸ್. ಧಾರ್ಮಿಕವಾಗಿ ಇರುವ ಹುಡುಗರು ಇದಕ್ಕೆ ಕಾರಣ ಅಲ್ಲ. ರಾಜಕೀಯವಾಗಿ ಅವರನ್ನು ಬಳಸಿಕೊಂಡು ಹೀಗೆ ಮಾಡ್ತಾರೆ. ನಾವು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲ್ಲ ಎಂದರು.
ನಮ್ಮನ್ನು ವಿಧಾನಸಭೆಯಲ್ಲಿ ಸೋಲಿಸೋಕೆ ಬಿಜೆಪಿ ಜೆಡಿಎಸ್ ಆಗಿಲ್ಲ. ನಮ್ಮನ್ನು ವಿರೋಧ ಮಾಡೋಕೆ ಇವರಿಗೆ ಏನು ಇಲ್ಲ. ಅದಕ್ಕಾಗಿ ಧರ್ಮದ ವಿಚಾರವನ್ನು ಮುಂದೆ ಇಟ್ಟುಕೊಂಡು ಬಂದಿದ್ದಾರೆ. ಪ್ರತಾಪ್ ಸಿಂಹ ಇಲ್ಲಿ ಏಕೆ ಬರಬೇಕಿತ್ತು. ಇಲ್ಲಿಗೆ ಬಂದು ಜನರನ್ನು ಪ್ರವೋಕ್ ಮಾಡುವ ಅಗತ್ಯವೇನು. ಮಂಡ್ಯದಲ್ಲಿ ಧರ್ಮದ ವಿಚಾರದಲ್ಲಿ ಯಾವುದೇ ಗಲಾಟೆ ಇರಲಿಲ್ಲ. ಅದಕ್ಕಾಗಿ ಇಷ್ಟು ವರ್ಷ ಬಿಜೆಪಿ ಇಲ್ಲಿ ನೆಲೆ ಕಂಡಿಲ್ಲ. ಈಗ ಜೆಡಿಎಸ್ ಬಿಜೆಪಿ ಜೊತೆ ಹೊಂದಾಣಿ ಆಗಿದ್ದಾರೆ. ಜೆಡಿಎಸ್ ಯಾರ ಜೊತೆ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ. ಈಗ ಹೇಗಾದರೂ ಮಂಡ್ಯದಲ್ಲಿ ಬಿಜೆಪಿ ಅಸ್ತಿತ್ವ ಹುಟ್ಟಿಸಿಕೊಳ್ಳಲು ಪ್ರಯತ್ನ ಮಾಡ್ತಾ ಇದೆ. ನಿನ್ನೆ ನಡೆದ ಘಟನೆ ನಡೆಯ ಬಾರದಾಗಿತ್ತು. ಇನ್ನೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಬಹುದಿತ್ತು. ಅದು ಆಗಿಲ್ಲ, ಇಲ್ಲಿ ಲೋಪ ಆಗಿದೆ. ಇದರ ಸಮಗ್ರ ವರದಿ ಇನ್ನೂ ಎರಡು ದಿನಗಳಲ್ಲಿ ನೀಡಲು ಹೇಳಿದ್ದೇವೆ ಎಂದರು.
ನಾವು ಯಾವುದೇ ಕೇಸ್ ವಾಪಸ್ಸು ತೆಗೆದುಕೊಳ್ಳಲ್ಲ. ಸಿಎಂ ನಾವು ಹೀಗೆ ತೀರ್ಮಾನ ಮಾಡಿದ್ದೇವೆ ಎಂಬುದಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.
ವರದಿ: ಗಿರೀಶ್ ರಾಜ್, ಮಂಡ್ಯ
ಭಾರತೀಯ ಸೇನೆಗೆ ಸೇರ ಬಯಸೋರಿಗೆ ಗುಡ್ ನ್ಯೂಸ್: ಉಚಿತ ಮಾರ್ಗದರ್ಶನ, ತರಬೇತಿಗೆ ಅರ್ಜಿ ಆಹ್ವಾನ