ಮಂಡ್ಯ: ಮದ್ದೂರಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿತ್ತು. ಈ ಹಿನ್ನಲೆಯಲ್ಲಿ ಬಂದ್ ಕೂಡ ನಡೆಸಲಾಗಿತ್ತು. ಹೀಗಾಗಿ ಇಂದು ಶಾಂತಿ ಸಭೆಯನ್ನು ಕರೆಯಲಾಗಿತ್ತು. ಆದರೇ ಈ ಶಾಂತಿ ಸಭೆಗೆ ನಾವು ಹೋಗುವುದಿಲ್ಲ ಎಂಬುದಾಗಿ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಹೇಳಿದ್ದಾರೆ.
ಇಂದು ಮದ್ದೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಒಂದೆರೆಡು ಕಲ್ಲೆಸೆದಿದ್ದಾರೆ ಅಂತಾರೆ. ಗೃಹ ಸಚಿವರು ಸಣ್ಣ ಘಟನೆ ಅಂತಾರೆ. ಘಟನೆ ನಡೆಯದಂತೆ ತಡೆಗಟ್ಟಬೇಕಿತ್ತು. ಹೀಗ ಸಭೆ ಮಾಡಿದ್ರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಇದೇ ವೇಳೆ ನಿನ್ನೆ ಪ್ರತಿಭಟನಾಕಾರ ಮೇಲೆ ಎಫ್ಐಆರ್ ಗೆ ಖಂಡನೆ ವ್ಯಕ್ತ ಪಡಿಸಿದಂತ ಅವರು, ಪ್ರಕರಣ ದಾಖಲಿಸುತ್ತಾರೆ ಎಂಬುದು ನಮಗೆ ಮೊದಲೆ ಗೊತ್ತಿತ್ತು. ನ್ಯಾಯ ಕೇಳಲು ಹೋದವರ ಮೇಲೆ ಅನ್ಯಾಯ ಮಾಡಿದ್ದಾರೆ. ನಮ್ಮವರ ಮೇಲೆಯೇ ದೂರು ದಾಖಲಿಸಿದ್ದಾರೆ. ಮುಂದೇ ಮತ್ತಷ್ಟು ಎಫ್ಐಆರ್ ಹಾಕುತ್ತಾರೆ ಎಂದು ಪೊಲೀಸರ ನಡೆಯನ್ನು ಖಂಡಿಸಿದರು.
500 ಜನರ ಮೇಲೆ ದೂರು ಮಾಡಲಾಗಿದೆ. ಬಿಜೆಪಿ ಲೀಗಲ್ ಟೀಂ ಅವರ ಜೊತೆ ಇರುತ್ತೆ ಎಂದು ಭರವಸೆಯನ್ನು ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೀಡಿದರು.
ವರದಿ: ಗಿರೀಶ್ ರಾಜ್, ಮಂಡ್ಯ
ನಾಳೆ ಮದ್ದೂರಲ್ಲಿ 28 ಗಣಪತಿ ಸಾಮೂಹಿಕವಾಗಿ ವಿಸರ್ಜನೆ: ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ