ಮಂಡ್ಯ: ಜಿಲ್ಲೆಯ ಮದ್ದೂರಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ ನಡೆದಿತ್ತು. ಈ ಬಗ್ಗೆ ಮದ್ದೂರು ಶಾಸಕ ಕದಲೂರು ಉದಯ್ ಹೇಳಿದ್ದೇನು ಅಂತ ಮುಂದೆ ಓದಿ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಕದಲೂರು ಉದಯ್ ಅವರು, ನಿನ್ನೆ ನಡೆದ ಅಹಿತಕರ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಈ ಘಟನೆಯನ್ನ ನಾನು ಖಂಡಿಸುತ್ತೇನೆ. ಈ ಘಟನೆ ಹಿಂದೆ ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಯಾರು ಆತಂಕಕ್ಕೆ ಒಳಗಾಗುವುದು ಬೇಡ. ಯಾರು ಉದ್ವೇಗಕ್ಕೆ ಒಳಗಾಗಬೇಡಿ ಎಂದರು.
ನಮ್ಮ ಮದ್ದೂರು ತಾಲೂಕಿನ ಜನತೆ ಶಾಂತಿ ಪ್ರಿಯರು. ಆಗಿರುವ ಘಟನೆಯನ್ನ ಸರಿಪಡಿಸಿಕೊಳ್ಳೋಣ. ತಪ್ಪಿತಸ್ಥರನ್ನ ಸೆದೆಬಡಿದು ನ್ಯಾಯ ಕೊಡಿಸುವ ಕೆಲಸ ಮಾಡ್ತೇವೆ. ನಿಮ್ಮ ಜೊತೆ ನಾವು ಯಾವಾಗಲೂ ಇರುತ್ತೇವೆ. ಎಲ್ಲರೂ ಶಾಂತಿಯನ್ನ ಕಾಪಾಡುವಂತೆ ಕೈ ಮುಗಿದು ಶಾಸಕ ಉದಯ್ ಮನವಿ ಮಾಡಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಶಾಸಕ ವೀರೇಂದ್ರ ವಿರುದ್ಧದ ಅಕ್ರಮ ಆನ್ ಲೈನ್ ಬೆಟ್ಟಿಂಗ್ ಕೇಸ್: 14 ದಿನ ನ್ಯಾಯಾಂಗ ಬಂಧನ
ಮದ್ದೂರು ಕಲ್ಲು ತೂರಾಟ ಘಟನೆ: ನಾವು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲ್ಲ- ಸಚಿವ ಚಲುವರಾಯಸ್ವಾಮಿ
ನಾಡ ಕಚೇರಿಗೆ ಹೋಗಬೇಕಿಲ್ಲ, VA, RI ಕಾಣಬೇಕಿಲ್ಲ: ಈ ಪ್ರಮಾಣಪತ್ರಗಳನ್ನು ಪಡೆಯಲು ಜಸ್ಟ್ ಹೀಗೆ ಮಾಡಿ | Nadakacheri