ಶಿವಮೊಗ್ಗ: ಜಿಲ್ಲೆಯ ರಿಪ್ಪನ್ ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕರುನಾಡ ಹಬ್ಬ’ದ ಲಕ್ಕಿ ಡ್ರಾ ಫಲಿತಾಂಶ ಘೋಷಣೆ ವಿಳಂಬವಾಗುತ್ತಿರುವ ಕುರಿತು ಆಯೋಜಕರು ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಕಳೆದ ನವೆಂಬರ್ 28, 29 ಮತ್ತು 30ರಂದು ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅದ್ಧೂರಿ ‘ಕರುನಾಡ ಹಬ್ಬ’ ಆಚರಿಸಲಾಗಿತ್ತು. ಈ ಸಂಭ್ರಮದ ಭಾಗವಾಗಿ ಬೈಕ್ ಸೇರಿದಂತೆ ವಿವಿಧ ಆಕರ್ಷಕ ಬಹುಮಾನಗಳ ‘ಲಕ್ಕಿ ಡ್ರಾ’ ಆಯೋಜಿಸಲಾಗಿತ್ತು.
ವಿಳಂಬಕ್ಕೆ ಕಾರಣವೇನು?
ಲಕ್ಕಿ ಡ್ರಾ ಟಿಕೆಟ್‌ಗಳ ಮಾರಾಟ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿರಲಿಲ್ಲ. ಒಟ್ಟು ಲಭ್ಯವಿದ್ದ ಟಿಕೆಟ್‌ಗಳಲ್ಲಿ ಕೇವಲ 200 ರಿಂದ 300 ಟಿಕೆಟ್‌ಗಳು ಮಾತ್ರ ಮಾರಾಟವಾಗಿದ್ದವು. ಈ ಹಿನ್ನೆಲೆಯಲ್ಲಿ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಬೇಕಾಗಿ ಬಂದಿದ್ದರಿಂದ ನಿಗದಿತ ಸಮಯದಲ್ಲಿ ಬಹುಮಾನ ಘೋಷಿಸಲು ಸಾಧ್ಯವಾಗಿಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಸಂಘದಿಂದ ಈ ವಿನಂತಿ
ಮಾರ್ಚ್ 31ರ ಒಳಗಾಗಿ ಸಂಘದ ತುರ್ತು ಸಭೆಯನ್ನು ಕರೆಯಲಾಗುವುದು. ಈಸಭೆಯಲ್ಲಿ ಲಕ್ಕಿ ಡ್ರಾ ನಡೆಸುವ ಅಂತಿಮ ದಿನಾಂಕವನ್ನು ನಿರ್ಧರಿಸಲಾಗುವುದು. ಬಹುಮಾನ ಘೋಷಣೆಯ ದಿನಾಂಕವನ್ನು ಶೀಘ್ರದಲ್ಲೇ ಪತ್ರಿಕೆಗಳ ಮೂಲಕ ಸಾರ್ವಜನಿಕರಿಗೆ ಪ್ರಕಟಿಸಲಾಗುವುದು ಎಂಬುದಾಗಿ ರಿಬ್ಬನ್ ಪೇಟೆಯ ಕಲಾ ಕೌಸ್ತುವ ಕನ್ನಡ ಸಂಘವು ಸ್ಪಷ್ಟ ಪಡಿಸಿದೆ.
ಸಾರ್ವಜನಿಕರು ಮತ್ತು ಟಿಕೆಟ್ ಖರೀದಿಸಿದವರು ಸಹಕರಿಸಬೇಕೆಂದು ಕಲಾ ಕೌಸ್ತುಭ ಕನ್ನಡ ಸಂಘದ ಆಯೋಜಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಸಾಧನೆಯ ಶಿಖರಕ್ಕೇರಿದ ಸಾಗರದ ‘ಯುವ ಉದ್ಯಮಿ’: ‘RBD ಮಹೇಶ್’ಗೆ ‘ನಾರಾಯಣ ರತ್ನ ಪ್ರಶಸ್ತಿ’ಯ ಗೌರವ
ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!








