Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM

BREAKING : ಹಾರ್ಮುಜ್ ಜಲಸಂಧಿಯ ಮೂಲಕ ‘ಭಾರತೀಯ ತೈಲ’ ಸಾಗಿಸಲು ಅನುಮತಿ ; ಇರಾನ್ ರಾಯಭಾರಿ

14/03/2026 3:57 PM

‘ಭಾರತವನ್ನ ಬೆದರಿಸಿದ್ದಾಯ್ತು, ಈಗ ಜಗತ್ತನ್ನೇ ಬೇಡಿಕೊಳ್ತಿದೆ’ : ರಷ್ಯಾದ ತೈಲದ ವಿಚಾರದಲ್ಲಿ ಟ್ರಂಪ್ ಕೆಣಕಿದ ಇರಾನ್

14/03/2026 3:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಲ್‌ಪಿಜಿ, ಇಂಧನ ಬಿಕ್ಕಟ್ಟು ನಿವಾರಿಸಿ: ಪ್ರಧಾನಿ ಮೋದಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪತ್ರ
KARNATAKA

ಎಲ್‌ಪಿಜಿ, ಇಂಧನ ಬಿಕ್ಕಟ್ಟು ನಿವಾರಿಸಿ: ಪ್ರಧಾನಿ ಮೋದಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪತ್ರ

By kannadanewsnow0913/03/2026 3:37 PM

ಬೆಂಗಳೂರು: ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ತಲೆದೋರಿರುವ ಎಲ್‌ಪಿಜಿ ಮತ್ತು ಇಂಧನ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಹೋಟೆಲ್ ಉದ್ಯಮ ಹಾಗೂ ಕಾರ್ಮಿಕರ ಸಂಕಷ್ಟ

ಜಾಗತಿಕ ರಾಜಕೀಯ ಸಂಘರ್ಷಗಳಿಂದಾಗಿ ಭಾರತದ ನಾಗರಿಕರು ಅನುಭವಿಸುತ್ತಿರುವ ತೊಂದರೆಗಳತ್ತ ಪ್ರಧಾನಿಯವರ ಗಮನ ಸೆಳೆದಿರುವ ಅವರು, “ಬೆಂಗಳೂರಿನಂತಹ ಮಹಾನಗರಗಳಲ್ಲಿ ನಿತ್ಯದ ಊಟಕ್ಕಾಗಿ ಹೋಟೆಲ್‌ಗಳನ್ನು ಅವಲಂಬಿಸಿರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋಟೆಲ್ ಕಾರ್ಮಿಕರು ಜೀವನೋಪಾಯ ಕಳೆದುಕೊಳ್ಳುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಜತಾಂತ್ರಿಕ ಶಕ್ತಿ ಪ್ರದರ್ಶನಕ್ಕೆ ಇದು ಸಕಾಲ

ದೇಶದ ಯಾವುದೇ ಭಾಗದಲ್ಲಿ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ನೈಸರ್ಗಿಕ ಅನಿಲಕ್ಕೆ ಕೊರತೆಯಾಗದಂತೆ ಕ್ರಮ ವಹಿಸಲು ಶಾಸಕರು ಮನವಿ ಮಾಡಿದ್ದಾರೆ. “ಈ ಬಿಕ್ಕಟ್ಟು ನಿಮ್ಮ ರಾಜತಾಂತ್ರಿಕ ಪ್ರೌಢಿಮೆಯನ್ನು ಪ್ರದರ್ಶಿಸಲು ಇರುವ ಒಂದು ಅವಕಾಶವಾಗಿದೆ. ತಕ್ಷಣವೇ ಮಿತ್ರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ಅಗತ್ಯ ಪ್ರಮಾಣದ ನೈಸರ್ಗಿಕ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಆಮದು ಮಾಡಿಕೊಳ್ಳಲು ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಿ,” ಎಂದು ಅವರು ಸಲಹೆ ನೀಡಿದ್ದಾರೆ.

ಸಿಲಿಂಡರ್ ಬುಕ್ಕಿಂಗ್ ನಿರ್ಬಂಧಕ್ಕೆ ಆಕ್ಷೇಪ

ಸಿಲಿಂಡರ್ ಮರುಪೂರಣದ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿರುವುದನ್ನು ದರ್ಶನ್ ಪುಟ್ಟಣ್ಣಯ್ಯ ವಿರೋಧಿಸಿದ್ದಾರೆ.

“ಗ್ರಾಹಕರು ಮುನ್ನೆಚ್ಚರಿಕೆಯಿಂದ ಸಿಲಿಂಡರ್ ಬುಕ್ ಮಾಡುವುದು ನಾಳೆಯ ಆತಂಕದಿಂದಲೇ ಹೊರತು ಲಾಭ ಮಾಡಲೆಂದಲ್ಲ. ಇಂತಹ ನಿರ್ಬಂಧಗಳು ನಾಗರಿಕರಿಗೆ ಮಾಡುವ ಅವಮಾನ. ಇದರ ಬದಲು ನೈಸರ್ಗಿಕ ಅನಿಲವು ಕಪ್ಪು ಮಾರುಕಟ್ಟೆ ಪಾಲಾಗದಂತೆ ಬಿಗಿ ಕ್ರಮ ಕೈಗೊಳ್ಳಿ,” ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಇಂಧನ ಸ್ವಾವಲಂಬನೆಗೆ ‘ಸ್ವರಾಜ್’ ಮಂತ್ರ

ದೀರ್ಘಕಾಲೀನ ಪರಿಹಾರವಾಗಿ ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವಂತೆ ‘ಸ್ವರಾಜ್’ ಪರಿಕಲ್ಪನೆಯನ್ನು ಜಾರಿಗೆ ತರಲು ಅವರು ಕೋರಿದ್ದಾರೆ:

  • ಸೌರ ಮತ್ತು ಪವನ ಶಕ್ತಿ: ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಗರಿಷ್ಠ ಒತ್ತು ನೀಡಬೇಕು.

  • ಸ್ಟಾರ್ಟ್-ಅಪ್ ಮತ್ತು ಕೌಶಲ್ಯಾಭಿವೃದ್ಧಿ: ಈ ಕ್ಷೇತ್ರಗಳಲ್ಲಿ ಸೌರಶಕ್ತಿ ಆಧಾರಿತ ಯೋಜನೆಗಳಿಗೆ ಆದ್ಯತೆ ನೀಡಬೇಕು.

  • ರಿಯಾಯಿತಿಗಳು: ಸೌರ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಹಾಗೂ ಅಳವಡಿಸಿಕೊಳ್ಳುವ ನಾಗರಿಕರಿಗೆ ಸಬ್ಸಿಡಿ ನೀಡಬೇಕು.

  • ಸ್ವಾವಲಂಬಿ ಗ್ರಾಮ: ಹಳ್ಳಿಗಳು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾದರೆ ಅಂತರಾಷ್ಟ್ರೀಯ ರಾಜಕೀಯ ಬಿಕ್ಕಟ್ಟುಗಳು ನಮ್ಮ ನಾಗರಿಕರ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಬಿಕ್ಕಟ್ಟನ್ನು ಇಂಧನ ಸ್ವಾವಲಂಬನೆಗೆ ಒಂದು ಅವಕಾಶವನ್ನಾಗಿ ಬಳಸಿಕೊಳ್ಳುವಂತೆ ಮತ್ತು ತಕ್ಷಣವೇ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಅವರು ಪತ್ರದ ಮೂಲಕ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.

ಯಾದಗಿರಿಯಲ್ಲಿ ಸರ್ಕಾರಿ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು

BREAKING: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಒಂದೇ ದಿನದಲ್ಲಿ ಹೂಡಿಕೆದಾರರ ₹5.87 ಲಕ್ಷ ಕೋಟಿ ಭಸ್ಮ | Share Market

Share. Facebook Twitter LinkedIn WhatsApp Email

Related Posts

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM1 Min Read

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM2 Mins Read

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ನಾಳೆ ಖಾದಿ ಬಟ್ಟೆ ಖರೀದಿಗೆ ಅವಕಾಶ

14/03/2026 3:11 PM1 Min Read
Recent News

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

14/03/2026 4:02 PM

BREAKING : ಹಾರ್ಮುಜ್ ಜಲಸಂಧಿಯ ಮೂಲಕ ‘ಭಾರತೀಯ ತೈಲ’ ಸಾಗಿಸಲು ಅನುಮತಿ ; ಇರಾನ್ ರಾಯಭಾರಿ

14/03/2026 3:57 PM

‘ಭಾರತವನ್ನ ಬೆದರಿಸಿದ್ದಾಯ್ತು, ಈಗ ಜಗತ್ತನ್ನೇ ಬೇಡಿಕೊಳ್ತಿದೆ’ : ರಷ್ಯಾದ ತೈಲದ ವಿಚಾರದಲ್ಲಿ ಟ್ರಂಪ್ ಕೆಣಕಿದ ಇರಾನ್

14/03/2026 3:42 PM

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM
State News
KARNATAKA

ಮೇ 1ರಿಂದ ಶಿವಮೊಗ್ಗದಲ್ಲಿ ಇಂಡಿಗೋ ವಿಮಾನ ಸೇವೆ ಸ್ಥಗಿತ? ಆತಂಕದಲ್ಲಿ ಪ್ರಯಾಣಿಕರು

By kannadanewsnow0914/03/2026 4:02 PM KARNATAKA 1 Min Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಜನತೆಗೆ ವಿಮಾನಯಾನ ಸಂಸ್ಥೆ ಇಂಡಿಗೋ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ…

ರಾಜ್ಯದಲ್ಲಿ 4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: 14,525 ಉದ್ಯೋಗ ಅವಕಾಶ ಸೃಷ್ಟಿ

14/03/2026 3:24 PM

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ನಾಳೆ ಖಾದಿ ಬಟ್ಟೆ ಖರೀದಿಗೆ ಅವಕಾಶ

14/03/2026 3:11 PM

BIG NEWS: ರಾಜ್ಯದಲ್ಲೊಂದು ಅಮಾನುಷ ಘಟನೆ: ವಿದ್ಯಾರ್ಥಿ ಮೇಲೆ ‘ಮೂವರು ಶಿಕ್ಷಕ’ರು ಹಲ್ಲೆ

14/03/2026 3:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.