Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಂಜಾನೆಯ `ಲೈಂಗಿಕ ಕ್ರಿಯೆ ನಡೆಸುವುದು ಕೇವಲ ಸುಖವಲ್ಲ, ಆರೋಗ್ಯಕ್ಕೂ ಇದು ವರದಾನ!

02/04/2026 6:24 PM

‘ಇರಾನ್ ವಿರುದ್ಧದ ಸುದೀರ್ಘ ಯುದ್ಧಕ್ಕೆ ಅಮೆರಿಕನ್ನರಲ್ಲಿ ತಾಳ್ಮೆಯಿಲ್ಲ’: ಯುದ್ಧದ ಅನಿಶ್ಚಿತತೆ ಬಗ್ಗೆ ಡೊನಾಲ್ಡ್ ಟ್ರಂಪ್ ಪರೋಕ್ಷ ಒಪ್ಪಿಗೆ!

02/04/2026 6:16 PM

ರಕ್ಷಣಾ ರಫ್ತಿನಲ್ಲಿ ಭಾರತದ ದಾಖಲೆಯ ಜಿಗಿತ: 38,424 ಕೋಟಿ ರೂ. ತಲುಪಿದ ರಕ್ಷಣಾ ರಫ್ತು !

02/04/2026 6:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಧಾನಸಭೆಯಲ್ಲಿ ‘LPG ಸಿಲಿಂಡರ್ ಅಭಾವ’ದ ಸದ್ದು: ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ
KARNATAKA

ವಿಧಾನಸಭೆಯಲ್ಲಿ ‘LPG ಸಿಲಿಂಡರ್ ಅಭಾವ’ದ ಸದ್ದು: ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರ

By kannadanewsnow0911/03/2026 4:05 PM

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ತೀವ್ರ ಕೊರತೆ ಇಂದು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ಸಂಘರ್ಷಕ್ಕೆ ಕಾರಣವಾಯಿತು. ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಹಾಗೂ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಕುರಿತಾದ ಆರೋಪ-ಪ್ರತ್ಯಾರೋಪಗಳಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.

ಮೋದಿ ಹೆಸರು ಕೇಳಿ ಕೆರಳಿದ ಬಿಜೆಪಿ

ಶೂನ್ಯವೇಳೆಯಲ್ಲಿ ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಗ್ಯಾಸ್ ಅಭಾವದ ಬಗ್ಗೆ ಗಮನ ಸೆಳೆದರು. “900 ರೂಪಾಯಿ ಇದ್ದ ಸಿಲಿಂಡರ್‌ಗೆ ಇಂದು 1,800 ರೂಪಾಯಿ ನೀಡಬೇಕಾದ ಪರಿಸ್ಥಿತಿ ಬಂದಿದೆ. ಇದಕ್ಕೆ ಪ್ರಧಾನಿ ಮೋದಿ ಸರ್ಕಾರದ ದುರ್ಬಲ ವಿದೇಶಾಂಗ ನೀತಿಯೇ ಕಾರಣ” ಎಂದು ಆರೋಪಿಸಿದರು. ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಬಿಜೆಪಿ ಸದಸ್ಯರು ರಂಗನಾಥ್ ವಿರುದ್ಧ ಮುಗಿಬಿದ್ದು, ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ವರ್ಸಸ್ ಸುನಿಲ್ ಕುಮಾರ್

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, “ದೇಶದ ಆರ್ಥಿಕ ಮತ್ತು ವಿದೇಶಾಂಗ ನೀತಿ ಏನಾಗಿದೆ? ಪ್ರಧಾನಿಯವರು ಇಷ್ಟೆಲ್ಲಾ ನಡೆಯುತ್ತಿದ್ದರೂ ಯಾಕೆ ಮೌನವಾಗಿದ್ದಾರೆ? ಕ್ರಿಕೆಟ್ ಟೀಮ್‌ಗೆ ವಿಶ್ ಮಾಡುವ ಅವರು ಈ ಗಂಭೀರ ಸಮಸ್ಯೆಯ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?” ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್, “ಯುದ್ಧದ ಸಂದರ್ಭದಲ್ಲಿ ಇಡೀ ವಿಶ್ವವೇ ಈ ಸಮಸ್ಯೆ ಎದುರಿಸುತ್ತಿದೆ. ಆದರೆ ಈ ಸರ್ಕಾರಕ್ಕೆ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ ಯೋಗ್ಯತೆ ಇಲ್ಲ. ಕರಾವಳಿಯಲ್ಲಿ ಮರಳು ನೀಡಲು, ಸರ್ವರ್ ಸಮಸ್ಯೆ ಸರಿಪಡಿಸಲು ಹಾಗೂ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಈ ಸರ್ಕಾರ ವಿಫಲವಾಗಿದೆ” ಎಂದು ತಿರುಗೇಟು ನೀಡಿದರು.

ಸಚಿವ ಕೆ.ಹೆಚ್. ಮುನಿಯಪ್ಪ ಅವರ ಸ್ಪಷ್ಟನೆ:

ಗದ್ದಲದ ನಡುವೆಯೇ ಉತ್ತರ ನೀಡಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಗ್ಯಾಸ್ ಅಭಾವದ ವಾಸ್ತವ ಸ್ಥಿತಿಯನ್ನು ವಿವರಿಸಿದರು:

  • ಯುದ್ಧದ ಪರಿಣಾಮ: ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದಾಗಿ ವಿದೇಶದಿಂದ ಬರಬೇಕಾದ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಶೇ. 70ರಷ್ಟು ಗ್ಯಾಸ್ ವಿದೇಶದಿಂದಲೇ ಬರಬೇಕಿದೆ.

  • ಗೃಹಬಳಕೆ ಸಿಲಿಂಡರ್ ನಿಯಮ: ಸದ್ಯಕ್ಕೆ ಮನೆಬಳಕೆಯ ಸಿಲಿಂಡರ್‌ಗಳಿಗೆ ತೊಂದರೆಯಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಮಾತ್ರ ನೀಡಲು ತೀರ್ಮಾನಿಸಲಾಗಿದೆ.

  • ವಾಣಿಜ್ಯ ಸಿಲಿಂಡರ್ ಕೊರತೆ: ಹೋಟೆಲ್ ಮತ್ತು ಕಲ್ಯಾಣ ಮಂಟಪಗಳಿಗೆ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಎಲ್ಲರೂ ಸಹಕರಿಸಬೇಕು. ಆದ್ಯತೆಯ ಮೇರೆಗೆ ಶಾಲೆ ಮತ್ತು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುವುದು.

  • ದಾಸ್ತಾನು ಮಾಡಿದರೆ ಕ್ರಮ: ಯಾರೂ ಸಿಲಿಂಡರ್‌ಗಳನ್ನು ಅನಗತ್ಯವಾಗಿ ಸ್ಟೋರೇಜ್ (ದಾಸ್ತಾನು) ಮಾಡಬಾರದು. ಒಂದು ವೇಳೆ ಅಕ್ರಮವಾಗಿ ದಾಸ್ತಾನು ಮಾಡಿದ್ದು ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು.

ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು (CS) ಪ್ರತಿ ವಾರ ಸಭೆ ನಡೆಸಿ ಪರಿಶೀಲಿಸಲಿದ್ದಾರೆ ಎಂದು ಸಚಿವರು ಭರವಸೆ ನೀಡಿದರು.

ಕೇಂದ್ರದ ದ್ವಂದ್ವ ನೀತಿ: ತಮಿಳುನಾಡಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ- ಸಚಿವ ಎಂ.ಬಿ ಪಾಟೀಲ್ ಕಿಡಿ

ಯಾವುದೇ ಹೂಡಿಕೆ ಮಾಡುವ ಅಗತ್ಯವಿಲ್ಲ ; ದಿನಕ್ಕೆ 2 ಗಂಟೆ ಹೀಗೆ ಮಾಡಿ, ತಿಂಗಳಿಗೆ 1 ಲಕ್ಷ ರೂ. ಖಚಿತ.!

Share. Facebook Twitter LinkedIn WhatsApp Email

Related Posts

ಮುಂಜಾನೆಯ `ಲೈಂಗಿಕ ಕ್ರಿಯೆ ನಡೆಸುವುದು ಕೇವಲ ಸುಖವಲ್ಲ, ಆರೋಗ್ಯಕ್ಕೂ ಇದು ವರದಾನ!

02/04/2026 6:24 PM1 Min Read

ಸ್ವ-ಉದ್ಯೋಗಾಕಾಂಕ್ಷಿ ಯುವಕರ ಗಮನಕ್ಕೆ: ಉಚಿತ ‘ದ್ವಿಚಕ್ರ ವಾಹನ ರಿಪೇರಿ’ ತರಬೇತಿಗೆ ಅರ್ಜಿ ಆಹ್ವಾನ!

02/04/2026 6:00 PM1 Min Read

ಮಹಿಳೆಯರೇ ಗಮನಕ್ಕೆ: ಟೈಲರಿಂಗ್ ಉಚಿತ ತರಬೇತಿ ಪಡೆಯಲು ಅರ್ಜಿ ಆಹ್ವಾನ

02/04/2026 5:35 PM1 Min Read
Recent News

ಮುಂಜಾನೆಯ `ಲೈಂಗಿಕ ಕ್ರಿಯೆ ನಡೆಸುವುದು ಕೇವಲ ಸುಖವಲ್ಲ, ಆರೋಗ್ಯಕ್ಕೂ ಇದು ವರದಾನ!

02/04/2026 6:24 PM

‘ಇರಾನ್ ವಿರುದ್ಧದ ಸುದೀರ್ಘ ಯುದ್ಧಕ್ಕೆ ಅಮೆರಿಕನ್ನರಲ್ಲಿ ತಾಳ್ಮೆಯಿಲ್ಲ’: ಯುದ್ಧದ ಅನಿಶ್ಚಿತತೆ ಬಗ್ಗೆ ಡೊನಾಲ್ಡ್ ಟ್ರಂಪ್ ಪರೋಕ್ಷ ಒಪ್ಪಿಗೆ!

02/04/2026 6:16 PM

ರಕ್ಷಣಾ ರಫ್ತಿನಲ್ಲಿ ಭಾರತದ ದಾಖಲೆಯ ಜಿಗಿತ: 38,424 ಕೋಟಿ ರೂ. ತಲುಪಿದ ರಕ್ಷಣಾ ರಫ್ತು !

02/04/2026 6:04 PM

ಆಮ್ ಆದ್ಮಿ ಪಕ್ಷದಲ್ಲಿ ಬಿರುಕು? ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ರಾಘವ್ ಚಡ್ಡಾ ಔಟ್; ಅಶೋಕ್ ಮಿತ್ತಲ್‌ಗೆ ಒಲಿದ ಪಟ್ಟ!

02/04/2026 6:00 PM
State News
KARNATAKA

ಮುಂಜಾನೆಯ `ಲೈಂಗಿಕ ಕ್ರಿಯೆ ನಡೆಸುವುದು ಕೇವಲ ಸುಖವಲ್ಲ, ಆರೋಗ್ಯಕ್ಕೂ ಇದು ವರದಾನ!

By kannadanewsnow5702/04/2026 6:24 PM KARNATAKA 1 Min Read

ದಿನದ ಆರಂಭ ಉತ್ತಮವಾಗಿದ್ದರೆ ಇಡೀ ದಿನ ಉತ್ಸಾಹದಿಂದ ಇರಲು ಸಾಧ್ಯ ಎಂಬ ಮಾತಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಮುಂಜಾನೆಯ ಶಾರೀರಿಕ…

ಸ್ವ-ಉದ್ಯೋಗಾಕಾಂಕ್ಷಿ ಯುವಕರ ಗಮನಕ್ಕೆ: ಉಚಿತ ‘ದ್ವಿಚಕ್ರ ವಾಹನ ರಿಪೇರಿ’ ತರಬೇತಿಗೆ ಅರ್ಜಿ ಆಹ್ವಾನ!

02/04/2026 6:00 PM

ಮಹಿಳೆಯರೇ ಗಮನಕ್ಕೆ: ಟೈಲರಿಂಗ್ ಉಚಿತ ತರಬೇತಿ ಪಡೆಯಲು ಅರ್ಜಿ ಆಹ್ವಾನ

02/04/2026 5:35 PM

ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಏ.5ರಂದು ಈ ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ

02/04/2026 5:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.