ಬೆಳಗಾವಿ: ರಾಜ್ಯದ ಮಹಿಳಾ ಹೋರಾಟಗಾರ್ತಿಯಾಗಿ ಗುರ್ತಿಸಿಕೊಂಡಿದ್ದು, ಅನೇಕ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸಿದ್ದಂತ ಮಹಿಳೆಗೆ ಯೋಧನೊಬ್ಬ ಲವ್ ಸೆಕ್ಸ್ ದೋಖಾ ಮಾಡಿರೋದಾಗಿ ತಿಳಿದು ಬಂದಿದೆ. ಈ ಕಾರಣದಿಂದಲೇ ಹೋರಾಟಗಾರ್ತಿ, ಯೋಧನ ಮನೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಮಚ್ಚ ಗ್ರಾಮ ಪ್ರಮೋದಾ ಹಜಾರೆ ಅವರೇ ಲವ್, ಸೆಕ್ಸ್ ದೋಖಾಗೆ ಒಳಗಾದವರು. ಬೆಳಗಾವಿಯ ಬಿಜಿಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ಫೇಸ್ ಬುಕ್ ಮೂಲಕ ಪ್ರಮೋದಾಗೆ ಪರಿಚಯವಾಗಿದ್ದರು. ಕಳೆದ 6 ವರ್ಷಗಳ ಹಿಂದೆ ಪರಿಚಯವಾಗಿದ್ದಂತ ಇವರ ನಡುವೆ ಪ್ರೀತಿ ಬೆಳೆದಿತ್ತು. ತನಗಿಂತ 14 ವರ್ಷ ಹಿರಿಯ ಮಹಿಳೆಯನ್ನು ಅಕ್ಷಯ್ ಪ್ರೀತಿ ಮಾಡುವುದಾಗಿ ನಂಬಿಸಿದ್ದನು.
ಇದಷ್ಟೇ ಅಲ್ಲದೇ ಮದುವೆಯಾಗುವುದಾಗಿ ಹೋರಾಟಗಾರ್ತಿ ಪ್ರಮೋದಾ ಹಜಾರೆಗೆ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದನಂತೆ. ಆ ಬಳಿಕ ಪ್ರಮೋದಾ ಹಜಾರೆಗೆ ಮನೆಗೆ ರಜೆಗೆ ಬಂದಿದ್ದಂತ ಅಕ್ಷಯ್ ಆಕೆಯ ಮನೆಯಲ್ಲಿನ ದೇವರ ಕೋಣೆಯಲ್ಲಿ ಮದುವೆಯಾಗಿದ್ದನಂತೆ. ರಜೆಗಾಗಿ ಕೆಲ ದಿನಗಳ ಹಿಂದೆ ಬಂದು 15 ದಿನಗಳ ಕಾಲ ಪ್ರಮೋದಾ ಮನೆಯಲ್ಲೇ ಉಳಿದಿದ್ದನಂತೆ.
ಈ ವೇಳೆಯಲ್ಲಿ 9 ಯುವತಿಯ ಜೊತೆಗೆ ಸಂಪರ್ಕ ಇರುವ ವಿಷಯ ತಿಳಿದಾಗ, ಇಬ್ಬರ ನಡುವೆ ಗಲಾಟೆ ಕೂಡ ಆಗಿದೆ. ಅದನ್ನು ಪ್ರಮೋದಾ ಪ್ರಶ್ನಿಸಿದಾಗ, ಎಲ್ಲವನ್ನು ಅಕ್ಷಯ್ ಬಿಟ್ಟಿದ್ದನಂತೆ. ಮೊನ್ನೆ ರಜೆ ಮೇಲೆ ಬಂದಾಗ ಅಕ್ಷಯ್ ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿಷಯ ತಿಳಿದಿದೆ. ಹೀಗಾಗಿ ಅವರ ಮನೆಗೆ ಹೋಗಿ ಪ್ರಮೋದಾ ಗಲಾಟೆ ಮಾಡಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ್ದಂತ ಊರಿನ ಗ್ರಾಮಸ್ಥರು ಸರಿ ಪಡಿಸುವುದಾಗಿ ತಿಳಿಸಿ ಕಳುಹಿಸಿದ್ದಾರೆ. ಆ ಸಂದರ್ಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವಂತ ಹುಡುಗಿಯೊಂದಿಗೆ ಮದುವೆ ಆಗುವುದಿಲ್ಲ ಅಂತ ಯೋಧ ಅಕ್ಷಯ್ ತಿಳಿಸಿದ್ದನಂತೆ. ಆದರೇ ಇಂದು ಮದುವೆ ಮಾಡುತ್ತಿರುವಂತ ವಿಷಯ ತಿಳಿದು ಮನೆಯ ಬಳಿಗೆ ಹೋಗಿ ಧರಣೆ ನಡೆಸಿದ್ದಾರೆ.
ಯೋಧ ಅಕ್ಷಯ್ ಮನೆ ಬೀಗ ಹಾಕಿದ್ದು, ನಾನು ಸಾಯುವವರೆಗೂ ಯೋಧನ ಮನೆಯ ಮುಂದೆ ಧರಣಿ ನಡೆಸೋದಕ್ಕೆ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಯೋಧ ಅಕ್ಷಯ್ ಮನೆಯ ಎದುರು ಮಹಿಳಾ ಹೋರಾಟಗಾರ್ತಿ ಪ್ರಮೋದಾ ಕಣ್ಣೀರಿಡುತ್ತ ಧರಣಿ ಕುಳಿತಿದ್ದಾರೆ.
ಅಬಕಾರಿ ಸಚಿವರನ್ನು ರಾಜ್ಯ ಸರಕಾರ ರಕ್ಷಿಸುತ್ತಿರುವುದೇಕೆ?: ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ
BIG NEWS : ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ : ತನಿಖೆಯಲ್ಲಿ ಸ್ಪೋಟಕ ಅಂಶ ಬಹಿರಂಗ!