ಕೋಲಾರ: ಆ ಯುವಕನಿಗೆ ಇನ್ಸ್ ಸ್ಟಾಗ್ರಾಮ್ ನಲ್ಲಿ ಆಕೆಯ ಮೇಲೆ ಪ್ರೀತಿ ಬೆಳೆದಿತ್ತು. ಇನ್ಸ್ ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ತಿರುಗಿದಂತ ಪ್ರಿಯತಮೆಯನ್ನು ಹುಡುಕಿಕೊಂಡು ಬಂದ ಆ ಹುಡುಗನಿಗೆ ಆಗಿದ್ದು ಮಾತ್ರ ಶಾಕ್.
ಹೌದು.. ನವನೀತ್ ಹಾಗೂ ಅಪೂರ್ವ ನಡುವೆ ಇನ್ಸ್ ಸ್ಟಾಗ್ರಾಮ್ ನಲ್ಲಿ ಲವ್ ಆಗಿತ್ತು. ಆಕೆಯನ್ನು ಹುಡುಕಿಕೊಂಡು ಚಿಕ್ಕಮಗಳೂರಿಗೆ ನವನೀತ್ ತೆರಳಿದ್ದನು. ಅಲ್ಲಿ ಹೋಗಿ ನೋಡಿದ್ರೆ ಪ್ರೇಯಸಿ 3 ಮಕ್ಕಳ ತಾಯಿ ಎಂಬುದಾಗಿ ಗೊತ್ತಾಗಿ ದಿಗಿಲು ಬಡಿದಂತೆ ಆಗಿದೆ.
ಕೋಲಾರ ಜಿಲ್ಲೆಯ ನವನೀತ್ ಗೆ ಚಿಕ್ಕಮಗಳೂರು ಜಿಲ್ಲೆಯ ಅಪೂರ್ವ ಇನ್ಸ್ ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದರು. 35 ವರ್ಷದ ಲೇಡಿ ಮೇಲೆ 24 ವರ್ಷದ ಯುವಕನಿಗೆ ಪ್ಯಾರ್ ಆಗಿ ಬಿಟ್ಟಿತ್ತು. ಮದುವೆ ಆಗೋಣ ಬಾ ಎಂದಿದ್ದಕ್ಕೆ ನಂಬರ್ ಬ್ಲಾಕ್ ಮಾಡಲಾಗಿತ್ತು.
ಈ ಕಾರಣದಿಂದ ಪ್ರಿಯಕರ ನವನೀತ್ ಮೂಡಿಗೆರೆಯ ಹೊಸಕೆರೆ ಗ್ರಾಮಕ್ಕೆ ಅಪೂರ್ವ ಹುಡುಕಿಕೊಂಡು ಬಂದಿದ್ದನು. ಅಲ್ಲಿಗೆ ಬಂದು ನೋಡಿದರೇ ಅಪೂರ್ವ ಮೂರು ಮಕ್ಕಳ ತಾಯಿ ಎಂಬುದಾಗಿ ತಿಳಿದು ಶಾಕ್ ಆಗಿದ್ದಾನೆ.
ಅಂದಹಾಗೇ ಈ ವಿಷಯ ತಿಳಿಯುವುದಕ್ಕೂ ಮೊದಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಂತ ಕೋಲಾರ ನವನೀತ್ 1 ವರ್ಷದಿಂದ ಮೂರು ಮಕ್ಕಳ ತಾಯಿಯನ್ನು ಪ್ರೀತಿಸುತ್ತಿದ್ದನಂತೆ. ಅಲ್ಲದೇ ಆಕೆಯೊಂದಿಗೆ ಬೆಂಗಳೂರು, ಮಂಗಳೂರು ಕೂಡ ಸುತ್ತಾಡಿದ್ದಾನೆ.
ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಯಶಸ್ವಿ: ಸಿಎಂ ಸಿದ್ದರಾಮಯ್ಯ
5 ವರ್ಷ ದಾಟಿದ ಮಕ್ಕಳ ಆಧಾರ್ ನವೀಕರಣ ಕಡ್ಡಾಯ ; ಪೋಷಕರಿಗೆ ‘UIDAI’ ಎಚ್ಚರಿಕೆ