ಹುಬ್ಬಳ್ಳಿ: ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಲವ್ ಜಿಹಾದ್ ಶುರವಾಗಿ. ರಾಜ್ಯದಲ್ಲಿ ನಿರಾತಂಕವಾಗಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿವೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯದಲ್ಲಿ ಹಿಂದೂ ಹೆಣ್ಣುಮಕ್ಕಳ ಕುಟುಂಬದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆರೋಪಿ ಸದ್ದಾಂ ಹುಸೇನ್ ಕಬ್ಬಿಣದ ರಾಡ್ ತೆಗೆದುಕೊಂಡು ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದು ರಾಜ್ಯ ಸರ್ಕಾರ ತಲೆ ತಗ್ಗಿಸುವಂತ ಕೆಲಸವಾಗಿದೆ ಎಂದು ಹೇಳಿದರು.
ಇದೇ ವೇಳೆ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ನಾವು ಯಾರೂ ಪ್ರಜ್ವಲ್ ರೇವಣ್ಣ ಪ್ರಕರಣ ಬೆಂಬಲಿಸುತ್ತಿಲ್ಲ. ತಪ್ಪು ಮಾಡಿರೋರಿಗೆ ಶಿಕ್ಷೆ ಆಗಬೇಕು. ನನಗೆ ಪೆನ್ ಡ್ರೈವ್ ಬಗ್ಗೆ ಮೊದಲೇ ಪತ್ರ ಬರೆದಿದ್ದರು ಅಂತಿದ್ದಾರೆ. ಆದ್ರೇ ನನಗಂತೂ ಯಾವುದೇ ಪತ್ರ ಬಂದಿಲ್ಲ. ರಾಜ್ಯ ಸರ್ಕಾರ ಮಾತ್ರ ಈಗ ಪೆನ್ ಡ್ರೈವ್ ಹಿಂದೆ ಬಿದ್ದಿದೆ ಎಂದರು.
BREAKING: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಕೇಸ್: ‘SIT ಅಧಿಕಾರಿ’ಗಳೊಂದಿಗೆ ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ಸಭೆ
ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಸಾಂಕ್ರಾಮಿಕ ರೋಗಗಳ ಹೆಚ್ಚಳ ; ಅಗತ್ಯ ಕ್ರಮವಹಿಸಲು ಸೂಚನೆ