ಚಿಕ್ಕಮಗಳೂರು: ಜಿಲ್ಲೆಯ ಅಲ್ದೂರು ಪಟ್ಟಣದಲ್ಲಿ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಮುಸ್ಲೀಂ ಯುವಕನೊಬ್ಬನನ್ನು ರೂಮಿನಲ್ಲಿ ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ಪಟ್ಟಣದಲ್ಲಿ ಮುಸ್ಲೀಂ ಯುವಕ ಹಾಗೂ ಅನ್ಯ ಕೋಮಿನ ಯುವತಿ ರೂಮಲ್ಲಿ ಇದ್ದಂತ ವಿಷಯ ತಿಳಿದು, ವಿಹೆಚ್ ಪಿ ಮುಖಂಡರು ದಾಳಿ ನಡೆಸಿದ್ದಾರೆ. ಯುವಕನನ್ನು ರೂಮಿನಲ್ಲಿ ಕೂಡಿ ಹಾಕಿ ಥಳಿಸಿದ್ದಾರೆ.
ಈ ಸಂಬಂಧ ಅನ್ಯ ಕೋಮಿನ ಯುವಕ ನೀಡಿದಂತ ದೂರಿನ ಹಿನ್ನಲೆಯಲ್ಲಿ ಚಿಕ್ಕಮಗಳೂರು ವಿಹೆಚ್ ಪಿ ಜಿಲ್ಲಾ ಸಂಚಾಲಕ ಸೇರಿ ಒಟ್ಟು 6 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ ಅನ್ಯ ಕೋಮಿನ ಯುವಕನ ವಿರುದ್ಧ ಪೋಕ್ಸೋ ಅಡಿಯಲ್ಲಿ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದಲ್ಲಿ Snapchat ಸರ್ವರ್ ಡೌನ್ : ಕಂಟೆಂಟ್ ‘ಅಪ್‌ಲೋಡ್’ ಸಮಸ್ಯೆ ಎದುರಿಸಿದ ಬಳಕೆದಾರರು
‘IPS’ ಹುದ್ದೆಗೆ ‘ಪ್ರತಾಪ್ ರೆಡ್ಡಿ’ ರಾಜೀನಾಮೆ: ನಿವೃತ್ತಿಗೆ 2 ತಿಂಗಳು ಬಾಕಿ ಇರುವಾಗಲೇ ‘ಗುಡ್ ಬೈ’