ಶ್ರೀನಗರ: ಜಮ್ಮುವಿನಲ್ಲಿ ಗುರುವಾರ ಸಂಜೆ ಅನೇಕ ದೊಡ್ಡ ಸ್ಫೋಟಗಳು ಕೇಳಿಬಂದಿದ್ದು, ನಿವಾಸಿಗಳಲ್ಲಿ ಭೀತಿಯನ್ನು ಸೃಷ್ಟಿಸಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿ ನಡೆಸಿದ ಒಂದು ದಿನದ ನಂತರ ಈ ಸ್ಫೋಟ ಸಂಭವಿಸಿದೆ.
ಸ್ಫೋಟಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಫೋಟದ ನಂತರ ಸ್ಥಳೀಯರಲ್ಲಿ ಭೀತಿ ಉಂಟಾಗಿದ್ದು, ಅದಕ್ಕೂ ಮೊದಲು ವಾಯು ದಾಳಿಯ ಸೈರನ್ ಗಳು ಮತ್ತು ಬ್ಲ್ಯಾಕೌಟ್ ಗಳು ನಡೆದಿವೆ.
ಜಮ್ಮುವಿನಲ್ಲಿ ಸಂಪೂರ್ಣ ವಿದ್ಯುತ್ ಕಡಿತ. ದೊಡ್ಡ ಸ್ಫೋಟಗಳು-ಬಾಂಬ್ ದಾಳಿ, ಶೆಲ್ ದಾಳಿ ಅಥವಾ ಕ್ಷಿಪಣಿ ದಾಳಿಗಳು ಶಂಕಿತವಾಗಿವೆ. ಮಾತಾ ವೈಷ್ಣೋ ದೇವಿ ನಮ್ಮೊಂದಿಗಿದ್ದಾರೆ. ಮತ್ತು ಧೈರ್ಯಶಾಲಿ ಭಾರತೀಯ ಸಶಸ್ತ್ರ ಪಡೆಗಳು ಸಹ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಫೋಟದ ಶಬ್ದ ಕೇಳಿದ ಕೂಡಲೇ ಅಂಗಡಿಯವರು ತಮ್ಮ ಮನೆಗಳಿಗೆ ಧಾವಿಸುತ್ತಿರುವುದು ಕಂಡುಬಂದಿದೆ.
#WATCH | J&K | A complete blackout has been enforced in Kishtwar of Jammu Division, and sirens are being heard throughout the district. pic.twitter.com/1tBwxjoxR7
— ANI (@ANI) May 8, 2025