ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಉಳವಿಯಲ್ಲಿ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ-2026ರ ಅಂಗವಾಗಿ ದೇವಸ್ಥಾನ ಸಮಿತಿಯು ಸಾರ್ವಜನಿಕರಿಗಾಗಿ ವಿಶೇಷ ಲಾಟರಿ ಯೋಜನೆಯನ್ನು ಹಮ್ಮಿಕೊಂಡಿದೆ. ಭಕ್ತರು ಮತ್ತು ಸಾರ್ವಜನಿಕರು ದೇವಿಯ ಕೃಪೆಯೊಂದಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲಲು ಇದು ಉತ್ತಮ ಅವಕಾಶವಾಗಿದೆ.
ಗೆಲ್ಲಬಹುದಾದ ಬೃಹತ್ ಬಹುಮಾನಗಳು:
ಲಾಟರಿಯಲ್ಲಿ ಅದೃಷ್ಟಶಾಲಿಗಳಿಗಾಗಿ ಸಮಿತಿಯು ಈ ಕೆಳಗಿನ ಆರು ಪ್ರಮುಖ ಬಹುಮಾನಗಳನ್ನು ನಿಗದಿಪಡಿಸಿದೆ:
-
ಬಂಪರ್ ಬಹುಮಾನ: ಹೀರೋ ಫ್ಯಾಷನ್ ಪ್ರೋ ಬೈಕ್ (Hero Passion Pro Bike)
-
ಪ್ರಥಮ ಬಹುಮಾನ: ಎಲ್ ಜಿ ಕಂಪನಿಯ ವಾಷಿಂಗ್ ಮಿಷಿನ್
-
2ನೇ ಬಹುಮಾನ: 41 ಇಂಚಿನ ಎಲ್ ಇ ಡಿ ಕಲರ್ ಟಿವಿ
-
3ನೇ ಬಹುಮಾನ: ಕಳೆ ಕಟ್ಟಿಂಗ್ ಮಿಷಿನ್
-
4ನೇ ಬಹುಮಾನ: ಮಿಕ್ಸಿ
-
5ನೇ ಬಹುಮಾನ: ಗ್ಯಾಸ್ ಒಲೆ
ವಿಶೇಷ ಸೂಚನೆ: ಮೇಲಿನ ಆರು ಬಹುಮಾನಗಳನ್ನು ಗೆದ್ದ ಸಂಖ್ಯೆಗಳ ಹಿಂದಿನ ಮತ್ತು ಮುಂದಿನ ಸಂಖ್ಯೆಗಳಿಗೂ ಸಮಾಧಾನಕರ ಬಹುಮಾನಗಳನ್ನು (Consolation Prizes) ನೀಡಲಾಗುತ್ತದೆ.
ಟಿಕೆಟ್ ಪಡೆಯುವುದು ಹೇಗೆ?
-
ಟಿಕೆಟ್ ಬೆಲೆ: ಕೇವಲ ರೂ. 200 ಮಾತ್ರ.
-
ದೊರೆಯುವ ಸ್ಥಳ: ಉಳವಿಯ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯ ಬಳಿಯೇ ದೇವಸ್ಥಾನ ಸಮಿತಿಯಿಂದ ಅಧಿಕೃತವಾಗಿ ಹಣ ನೀಡಿ ಟಿಕೆಟ್ ಖರೀದಿಸಬಹುದಾಗಿದೆ.
-
ಟಿಕೆಟ್‌ಗಳ ಸಂಖ್ಯೆ ಸೀಮಿತವಾಗಿದ್ದು, ಆಸಕ್ತರು ತಡಮಾಡದೆ ಟಿಕೆಟ್ ಖರೀದಿಸಲು ಕೋರಲಾಗಿದೆ.
ಫಲಿತಾಂಶ ಯಾವಾಗ?
ನಿಮ್ಮ ಅದೃಷ್ಟದ ಪರೀಕ್ಷೆ ಮಾರ್ಚ್ 14, 2026 ರಂದು ನಡೆಯಲಿದೆ. ಅಂದು ಅದೃಷ್ಟಶಾಲಿ ವಿಜೇತರ ಸಂಖ್ಯೆಗಳನ್ನು ಪ್ರಕಟಿಸಲಾಗುವುದು. ಅಂದೇ ಉಳವಿಯ ಶ್ರೀ ಮಾರಿಕಾಂಬ ದೇವಸ್ಥಾನ ಸಮಿತಿಯಿಂದ ಬಹುಮಾನವನ್ನು ಅದೃಷ್ಟ ಶಾಲಿಗಳಿಗೆ ವಿತರಣೆ ಮಾಡಲಾಗುತ್ತದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಬಜೆಟ್ ಮಾತ್ರವಲ್ಲ, ಇಡೀ ಕಾಂಗ್ರೆಸ್ ಸರ್ಕಾರ ನಡೆಯುತ್ತಿರುವುದೇ ಸುಳ್ಳಿನ ಕಂತೆಯ ಮೇಲೆ: ಆರ್.ಅಶೋಕ್
ಯಾವುದೇ ಹೂಡಿಕೆ ಮಾಡುವ ಅಗತ್ಯವಿಲ್ಲ ; ದಿನಕ್ಕೆ 2 ಗಂಟೆ ಹೀಗೆ ಮಾಡಿ, ತಿಂಗಳಿಗೆ 1 ಲಕ್ಷ ರೂ. ಖಚಿತ.!








