ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕೆಲವೊಬ್ಬರಿಗೆ ವ್ಯಾಯಾಮ, ದೇಹ ದಂಡನೆ ಎಂದರೆ ಆಗದು. ಏನೂ ಶ್ರಮವಿಲ್ಲದೆ, ಯಾವುದೇ ಎಕ್ಸ್‌ಸೈಸ್‌ಗಳಿಲ್ಲದೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವವರಿಗೆ ಸುಲಭದ ಟಿಪ್ಸ್.
ವ್ಯಾಯಾಮ ಇಲ್ಲದೇ ತೂಕ ಇಳಿಸಿಕೊಳ್ಳಲು ಮಾಡಬೇಕಾದ ಮೊದಲ ಹೆಜ್ಜೆ ಎಂದರೆ ನಮ್ಮ ಆಹಾರದ ವಿಷಯದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಆರೋಗ್ಯಕ್ಕೆ ಒಳ್ಳೆಯದಲ್ಲದ ಜಂಗ್ ಫುಡ್, ಫ್ರೋಜನ್ ಫುಡ್, ಬೇಕರಿ ಐಟಂ, ಚಾಟ್ಸ್‌ಗಳಿಂದ ಸಂಪೂರ್ಣವಾಗಿ ದೂರವಿರಬೇಕು. ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ತಾಜಾ ತರಕಾರಿ ಹಣ್ಣು, ಮೊಳಕೆ ಕಾಳುಗಳನ್ನ ನಿತ್ಯದ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಟ್ಟಾರೆ ಹೊರಗಿನ ಜಂಗ್ ಫುಡ್ ಬಿಟ್ಟು ಮನೆಯ ಊಟವನ್ನು ನಿಯಮಿತವಾಗಿ ಮಾಡಿದರೆ ಯಾವುದೇ ದೈಹಿಕ ಶ್ರಮವಿಲ್ಲದೇ ನೀವು ಆರಾಮಾಗಿ ತೂಕ ಇಳಿಸಿಕೊಳ್ಳಬಹುದು.
ನೀವು ಊಟ ಮಾಡುವ ಪದ್ಧತಿ ಅಥವಾ ಪ್ರಕ್ರಿಯೆ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಊಟ ಮಾಡುವಾಗ ಚೆನ್ನಾಗಿ ಜಗಿದು ತಿನ್ನಿ. ಅವಸರದಲ್ಲಿ ಬೇಗ ಬೇಗ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಊಟವನ್ನು ನಿಧಾನವಾಗಿ ಜಗಿದು ತಿಂದರೆ ತೂಕ ಕಡಿಮೆ ಆಗೋಕೆ ಉತ್ತಮ ಪ್ರಯೋಜನಾರಿಯಾಗಿದೆ. ಸಂಪೂರ್ಣವಾಗಿ ಜಗಿದು ತಿಂದರೆ ಜೀರ್ಣಕ್ರಿಯೆಯ ಸಮಸ್ಯೆಯೇ ಇರುವುದಿಲ್ಲ. ಜೀರ್ಣಕ್ರಿಯೆ ಸುಲಭವಾಗಿ ಆದರೆ ತೂಕ ಇಳಿಸಿಕೊಳ್ಳಲು ಮತ್ತಷ್ಟು ಸಹಾಯವಾಗುತ್ತದೆ.
ಹೆಚ್ಚು ನೀರು ಸೇವನೆ ತೂಕ ಇಳಿಸುಕೊಳ್ಳುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಎಷ್ಟು ನೀರು ಕುಡಿಯುತ್ತೀರೋ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಇನ್ನು ತೂಕ ಇಳಿಸಿಕೊಳ್ಳುವಲ್ಲಿ ನೀರಿನ ಪಾತ್ರ ಹೆಚ್ಚು. ನೀರು ಸೇವನೆ ದೇಹದಲ್ಲಿನ ಕಲ್ಮಷಗಳನ್ನು ಹೊರ ಹಾಕುತ್ತದೆ. ಇದರಿಂದ ದೇಹದ ತೂಕ ತನ್ನಂತಾನೇ ಕಡಿಮೆಯಾಗುತ್ತದೆ. ಇನ್ನು ಬೆಚ್ಚಗಿನ ನೀರಿನ ಸೇವನೆ ಕೂಡ ದೇಹದ ತೂಕ ಇಳಿಸಿಕೊಳ್ಳಲು ಮತ್ತಷ್ಟು ಸಹಾಯ ಮಾಡುತ್ತದೆ.
ನಿದ್ರೆ ದೇಹದ ಆರೋಗ್ಯವನ್ನು ನಿರ್ಧರಿಸುತ್ತದೆ. ನಿದ್ರೆ ದೇಹದ ತೂಕ ಹಾಗು ಹಸಿವಿನ ಮೇಲೆ ಪ್ರಭಾವ ಬೀರುತ್ತದೆ. ನಿದ್ರೆ ಕೊರತೆ ಉಂಟಾದರೆ ಎಲ್ಲಾ ರೀತಿಯ ಆರೋಗ್ಯದ ಸಮಸ್ಯೆ ಕಾಡಲಾರಂಬಿಸುತ್ತದೆ. ದಿನಕ್ಕೆ ಎಂಟು ತಾಸು ಸುಖ ನಿದ್ರೆ ಮಾಡಿದರೆ ಜೀರ್ಣಕ್ರಿಯೆ ಉತ್ತಮವಾಗಿದ್ದು, ಉತ್ತಮವಾದ ಜೀರ್ಣಕ್ರಿಯೆ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಅತೀ ಹೆಚ್ಚಿನ ನಿದ್ರೆ, ಅತೀ ವೇಗದಲ್ಲಿ ದೇಹದ ತೂಕವನ್ನು ಹೆಚ್ಚು ಮಾಡುತ್ತದೆ ಜಾಗೃತೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.