ಹಾವೇರಿ: 2,000 ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್, ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವಂತ ಘಟನೆ ಹಾವೇರಿಯ ಹಾನಗಲ್ ನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗಲೇ ಉಪ ತಹಶೀಲ್ದಾರ್ ನಾಗರಾಜ್ ಸೂರ್ಯವಂಶಿ, ಕಂಪ್ಯೂಟರ್ ಆಪರೇಟರ್ ಕಿರಣ್ ಮುದಕಣ್ಣನವರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಂಶವೃಕ್ಷ ಪ್ರಮಾಣ ಪತ್ರ ನೀಡಲು 15,000 ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಹಣದಲ್ಲಿ ಇಂದು 2,000 ಲಂಚದ ಹಣವನ್ನು ಮುಂಗಡವಾಗಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ರೆಡ್ ಹ್ಯಾಂಡ್ ಹಿಡಿದಿದ್ದಾರೆ.
ಮಕ್ಕಳ ಮಾನಸಿಕ ದೃಢತೆ ಹೆಚ್ಚಲು ಓದಿನ ಜೊತೆಗೆ ‘ಕ್ರೀಡೆ’ಯಲ್ಲೂ ಪಾಲ್ಗೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು








