ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸ್ ( Karnataka Lokayukta Police ) ವಿಭಾಗದ ಬೆಳಗಾವಿ-1, ಬಾಗಲಕೋಟೆ-1, ಬಳ್ಳಾರಿ-1, ದಾವಣಗೆರೆ-1, ಉಡುಪಿ-1, ಗದಗ-1 ಮತ್ತು ಧಾರವಾಡ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 7 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ.
ಈ ದಿನ ದಿನಾಂಕ: 31.05.2025 ರಂದು ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 33 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ.
1) ಸಿದ್ದಲಿಂಗಪ್ಪ ನಿಂಗಪ್ಪ ಬನಸಿ, ಜಿಲ್ಲಾ ವ್ಯವಸ್ಥಾಪಕರು, ಡಿ ದೇವರಾಜ ಅರಸ್ ಅಭಿವೃದ್ದಿ ನಿಗಮ, ಸುವರ್ಣ ಸೌಧ, ಬೆಳಗಾವಿ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು, 1 ವಾಸದ ಮನೆ, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,02,66,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 18,260/- ನಗದು, ರೂ. 34,64,691/- ಬೆಲೆ ಬಾಳುವ ಚಿನ್ನಾಭರಣಗಳು, ರೂ 10,60,000/- ಬೆಲೆ ಬಾಳುವ ವಾಹನಗಳು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 45,42,951/-
(ಇ) ಒಟು ಆಸ್ತಿ ಮೌಲ್ಯ- ರೂ. 1,48,08,951/-
2) ಶ್ರೀಶೈಲ್ ಸುಭಾಷ ತತ್ರಾನಿ, ಪ್ರ.ದ.ಸ, ಆಡಿಟ್ ಆಫೀಸ್, ಬಾಗಲಕೋಟೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 3 ನಿವೇಶನಗಳು, 6 ವಾಸದ ಮನೆಗಳು, 6-38 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,27,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 21,01,304/- ಬೆಲೆ ಬಾಳುವ ಚಿನ್ನಾಭರಣಗಳು, ರೂ 45,60,000/- ಬೆಲೆ ಬಾಳುವ ವಾಹನಗಳು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 66,61,304/-
(ಇ) ಒಟು ಆಸ್ತಿ ಮೌಲ್ಯ- ರೂ. 2,93,61,304/-
3) ಅಮಿನ್ ಮುಕ್ತರ್ ಅಹಮದ್, ಅಧೀಕ್ಷಕ ಅಭಿಯಂತರರು, ಪಿಡಬ್ಲ್ಯೂಡಿ ಬಳ್ಳಾರಿ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 31 ನಿವೇಶನಗಳು, 2 ವಾಸದ ಮನೆಗಳು, 5-30 ಎಕರೆ ಕೃಷಿ ಜಮೀನು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 5,71,00,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 25,49,000/- ನಗದು, ರೂ 79,00,000/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 47,10,000/- ಬೆಲೆ ಬಾಳುವ ವಾಹನಗಳು, ರೂ. 10,00,000/- ಬೆಲೆಬಾಳುವ ಇತರೆ ಗೃಹೋಪಯೋಗಿ ವಸ್ತುಗಳು ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 1,61,59,000/-
(ಇ) ಒಟು ಆಸ್ತಿ ಮೌಲ್ಯ- ರೂ 7,32,59,000/-
4) ರಾಮಕೃಷ್ಣ ಬಾಳಪ್ಪ ಗುಡಗೇರಿ, ಪಿ.ಡಿ.ಓ, ಬಾಡ ಗ್ರಾಮ ಪಂಚಾಯಿತಿ, ಶಿಗ್ಗಾವಿ ತಾಲ್ಲೂಕು, ಹಾವೇರಿ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 1 ವಾಸದ ಮನೆ, 9-07 ಎಕರೆ ಕೃಷಿ ಜಮೀನು-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 86,16,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 79,500/- ನಗದು, ರೂ 8,53,300/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 13,50,000/- ಬೆಲೆಬಾಳುವ ವಾಹನಗಳು ಮತ್ತು ರೂ. 10,00,000/- ಇತರೆ ಮತ್ತು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 32,82,800/-
(ಇ) ಒಟು ಆಸ್ತಿ ಮೌಲ್ಯ- ರೂ 1,18,98,800/-
5) ಗಿರೀಶ್ ರಾವ್, ಲೆಕ್ಕಾಧಿಕಾರಿ, ಮೆಸ್ಕಾಂ, ಕಾರ್ಕಳ, ಉಡುಪಿ ಜಿಲ್ಲೆ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 5 ನಿವೇಶನಗಳು, 1 ವಾಸದ ಮನೆ, 1 ವಾಣಿಜ್ಯ ಮಳಿಗೆ-ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 2,48,25,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 4,000/- ನಗದು, ರೂ 30,25,608/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 9,50,000/- ಬೆಲೆಬಾಳುವ ವಾಹನಗಳು, ರೂ. 1,24,880/- ಬೆಲೆಬಾಳುವ ಸೆಲ್ ಫೋನ್. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 41,04,488/-
(ಇ) ಒಟು ಆಸ್ತಿ ಮೌಲ್ಯ- ರೂ 2,89,29,488/-
6) ಗಂಗಾಧರ ವೀರಪ್ಪ ಶಿರೋಳ, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಗದಗ ಜಿಲ್ಲೆ, ಗದಗ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 4 ನಿವೇಶನಗಳು, 7 ವಾಸದ ಮನೆಗಳು- 3-29 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 2,68,50,000/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 25,000/- ನಗದು, ರೂ 27,53,982/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 17,30,000/- ಬೆಲೆಬಾಳುವ ವಾಹನಗಳು, ರೂ. 21,25,000/- ಬೆಲೆಬಾಳುವ ಬ್ಯಾಂಕ್ ಉಳಿತಾಯ, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 66,33,982/-
(ಇ) ಒಟು ಆಸ್ತಿ ಮೌಲ್ಯ- ರೂ 3,34,83,982/-
7) ಹೆಚ್. ಸುರೇಶ, ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆ(ಉತ್ತರ ವಲಯ), ಸಂಪರ್ಕ ಮತ್ತು ಕಟ್ಟಡ(ಎನ್), ಧಾರವಾಡ.
ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು ಕಂಡುಬಂದಿರುತ್ತದೆ.
(ಅ) ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 2 ನಿವೇಶನಗಳು, 2 ವಾಸದ ಮನೆಗಳು, 6 ವಾಣಿಜ್ಯ ಮಳಿಗೆಗಳು, 11-35 ಎಕರೆ ಕೃಷಿ ಜಮೀನು, ಎಲ್ಲಾ ಸೇರಿ ಒಟ್ಟು ಮೌಲ್ಯ ರೂ. 2,89,36,528/-
(ಆ) ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- ರೂ. 76,600/- ನಗದು, ರೂ 23,98,326/- ಬೆಲೆ ಬಾಳುವ ಚಿನ್ನಾಭರಣಗಳು, ರೂ. 26,00,000/- ಬೆಲೆಬಾಳುವ ವಾಹನಗಳು, ರೂ. 1,65,00,000/- ಬ್ಯಾಂಕ್ ಖಾತೆಗಳ ಬ್ಯಾಲೆನ್ಸ್, ರೂ. 25,00,000/- ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು. ಎಲ್ಲಾ ಸೇರಿ ಒಟ್ಟು ಮೌಲ್ಯ ರೂ 2,40,74,926/-
(ಇ) ಒಟು ಆಸ್ತಿ ಮೌಲ್ಯ- ರೂ 5,30,11,454/-
ನಾಳೆಯಿಂದ ಈ ಐಫೋನ್, ಆಂಡ್ರಾಯ್ಡ್ ಫೋನ್ಗಳಲ್ಲಿ WhatsApp ಸ್ಥಗಿತ: ನಿಮ್ಮ ಪೋನ್ ಇದ್ಯಾ ಚೆಕ್ ಮಾಡಿ
ಕುರಿಗಾಹಿಗಳಿಗೆ ಬಂದೂಕು ನೀಡೋದು ಸಮರ್ಪಕಗೊಳಿಸಿ : ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
SHOCKING : ಚಾಮರಾಜನಗರ : ಕಾಂಪೌಂಡ್ ಸರಳಿಗೆ ಕುತ್ತಿಗೆ ಸಿಲುಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ!