ಬೆಂಗಳೂರು: ರಾಜ್ಯದ 10 ಗಣಿ ಗುತ್ತಿಗೆ ಕಂಪನಿಗಳ ವಿರುದ್ಧ ತನಿಖೆಗೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಲೋಕಾಯುಕ್ತ ಎಸ್ಐಟಿ ತಂಡದಿಂದ ತನಿಖೆ ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಂತ ಸಚಿವ ಹೆಚ್.ಕೆ ಪಾಟೀಲ್ ಅವರು, 10 ಗಣಿ ಕಂಪನಿಗಳವಿರುದ್ಧ ತನಿಖೆಗೆ ನಿರ್ಣಯ ಕೈಗೊಳ್ಳಲಾಗಿದೆ. ಲೋಕಾಯುಕ್ತ ಎಸ್ ಐಟಿ ತನಿಖೆಗೆ ವಹಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
10 ಗಣಿ ಕಂಪನಿಗಳು ಯಾವುವು.?
ಮೈಸೂರು ಮ್ಯಾಂಗನೀಸ್ ಕಂಪನಿ( ಚಿತ್ರದುರ್ಗ)
ದಶರಥ್ ರಾಮೀರೆಡ್ಡಿ ಕಂಪನಿ( ಚಿತ್ರದುರ್ಗ)
ಅಲ್ಲಂ ವೀರಭದ್ರಪ್ಪ ಗಣಿ ಕಂಪನಿ( ಚಿತ್ರದುರ್ಗ)
ಕರ್ನಾಟಕ ಲಿಂಪೋ ಕಂಪನಿ( ತುಮಕೂರು)
ಅಂಜನಾ ಮಿನರಲ್ಸ್ ಕಂಪನಿ( ಚಿತ್ರದುರ್ಗ)
ರಾಜಯ್ಯ ಕಾನುಮ್ ಕಂಪನಿ( ಚಿತ್ರದುರ್ಗ)
ಮಹಾಲಕ್ಷ್ಮಿ ಆಂಡ್ ಕೋಂ ( ತುಮಕೂರು)
ಎಂ.ಶ್ರೀನಿವಾಸುಲು ಕಂಪನಿ( ಚಿತ್ರದುರ್ಗ)
ಲಕ್ಷ್ಮಿ ನರಸಿಂಹ ಮೈನಿಂಗ್ ಕಂಪನಿ( ಚಿತ್ರದುರ್ಗ)
ಜಿ ರಾಜಶೇಖರ್ ಮಾಲಿಕತ್ವದ ಕಂಪನಿ( ತುಮಕೂರು)
ಈ ಮೇಲ್ಕಂಡ ಕಂಪನಿಗಳ ವಿರುದ್ಧ ಲೋಕಾಯುಕ್ತ ನೇತೃತ್ವದಲ್ಲಿನ ಎಸ್ಐಟಿ ತಂಡವನ್ನು ರಚಿಸಲಾಗುತ್ತಿದ್ದು, ಆ ಮೂಲಕ ತನಿಖೆಯನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಲಫಂಗ ಸಿದ್ದರಾಮಯ್ಯ, ಹು*ಸೂ* ಮಗನಿಗೆ ಕಪಾಳಕ್ಕೆ ಹೊಡೆಯುತ್ತಿದ್ದೆ: ವಿವಾದತ್ಮಕ ಹೇಳಿಕೆ ನೀಡಿದ ಸ್ವಾಮೀಜಿ.!
BIG NEWS: ರಾಜ್ಯದ ‘ಬಗರ್ ಹುಕುಂ ರೈತ’ರಿಗೆ ‘ಸಾಗುವಳಿ ಚೀಟಿ’ ವಿತರಣೆಗೆ ಡೇಟ್ ಫಿಕ್ಸ್