Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೇ 16 ರಂದು ‘IPL’ ಟೂರ್ನಿಯ ಪಂದ್ಯಗಳು ಪುನಾರಂಭ, ಮೇ 30ಕ್ಕೆ ಫೈನಲ್ ಪಂದ್ಯ : ವರದಿ | IPL 2025

11/05/2025 4:11 PM

BIG NEWS : ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

11/05/2025 3:35 PM

BREAKING : ರಾಮನಗರದಲ್ಲಿ ಭೀಕರ ಅಪಘಾತ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ನಾಲ್ವರು ಗಂಭೀರ

11/05/2025 3:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING NEWS: ‘ಸಾಗರ ತಾಲ್ಲೂಕು ಕಚೇರಿ’ ಮೇಲೆ ‘ಲೋಕಾಯುಕ್ತ ದಾಳಿ’: ‘ನಕಲಿ ದಾಖಲೆ ಸೃಷ್ಠಿ’ ಬಗ್ಗೆ ದಾಖಲೆ ಪರಿಶೀಲನೆ | Lokayukta Raid
KARNATAKA

BREAKING NEWS: ‘ಸಾಗರ ತಾಲ್ಲೂಕು ಕಚೇರಿ’ ಮೇಲೆ ‘ಲೋಕಾಯುಕ್ತ ದಾಳಿ’: ‘ನಕಲಿ ದಾಖಲೆ ಸೃಷ್ಠಿ’ ಬಗ್ಗೆ ದಾಖಲೆ ಪರಿಶೀಲನೆ | Lokayukta Raid

By kannadanewsnow0911/03/2025 3:30 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಕಚೇರಿಯಾದಂತ ತಾಲ್ಲೂಕು ಆಡಳಿತ ಸೌಧದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಸಾಗರ ಪಟ್ಟದ ಸಮೀಪದ ಸರ್ವೆ ನಂ.12ರ ಸರ್ಕಾರಿ ಭೂಮಿಯನ್ನೇ ಭೂಗಳ್ಳರಿಗೆ ನಕಲಿ ದಾಖಲೆ ಸೃಷ್ಠಿಸಿ ಸಂಬಂಧ ಪಿನ್ ಟು ಪಿನ್ ದಾಖಲೆಗಳನ್ನು ಪರಿಶೀಲಿಸಿರುವುದಾಗಿ ತಿಳಿದು ಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಸಮೀಪದಲ್ಲೇ ಸರ್ವೇ ನಂ.12ರಲ್ಲಿ ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಭೂಮಿ ಕಬಳಿಕೆ ಬಗ್ಗೆ ನಿಮ್ಮ ಕನ್ನಡ ನ್ಯೂಸ್ ನೌನಲ್ಲಿ ರಾಜ್ಯದಲ್ಲೊಂದು ಬಹುದೊಡ್ಡ ಹಗರಣ: ಸರ್ಕಾರಿ ಭೂಮಿಗೆ ಸರ್ಕಾರಿ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಠಿಸಿ ಕಬಳಿಕೆಗೆ ಯತ್ನ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಇದಕ್ಕೂ ಮೊದಲು ಹಿರಿಯ ಪತ್ರಕರ್ತ ಮಹೇಶ್ ಹೆಗಡಿ ಅವರು ಸಂಯುಕ್ತ ಕರ್ನಾಟಕ ಹಾಗೂ ಜನ ಹೋರಾಟ ಪತ್ರಿಕೆಯಲ್ಲಿ ವಿಸ್ತೃತವಾದಂತ ವರದಿಯನ್ನು ಪ್ರಕಟಿಸಿದ್ದರು.

ಈ ಸುದ್ದಿಯ ಫಲಶೃತಿ ಎನ್ನುವಂತೆ ಇಂದು ದಿಢೀರ್ ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಅವರ ನೇತೃತ್ವದಲ್ಲಿ ಸಾಗರ ತಾಲ್ಲೂಕು ಕಚೇರಿಯ ಮೇಲೆ ದಾಳಿಯನ್ನು ನಡೆಸಲಾಗಿದೆ. ಸಾಗರ ತಹಶೀಲ್ದಾರ್ ಅವರ ಕಚೇರಿಯಲ್ಲಿ ಸರ್ವೇ ನಂಬರ್ 12ರ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಠಿಯ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಒಂದಷ್ಟು ದಾಖಲೆಗಳನ್ನು ಲೋಕಾಯುಕ್ತ ಎಸ್ಪಿ ನೇತೃತ್ವದ ಅಧಿಕಾರಿಗಳ ತಂಡ ಕೊಂಡೊಯ್ದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇನ್ನೂ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಅವರು ಖುದ್ದು ಸಾಗರ ಪಟ್ಟಣದ ಸಮೂಪದ ಸರ್ವೇ ನಂಬರ್.12ರ ಸರ್ಕಾರಿ ಭೂಮಿ ನಕಲಿ ದಾಖಲೆ ಸೃಷ್ಠಿ ಸಂಬಂಧ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಪರಿಶೀಲನೆಯ ವೇಳೆಯಲ್ಲಿ ಸ್ಥಳೀಯ ಜನರಿಂದಲೂ ಸರ್ವೆ ನಂ.12ರ ಬಗ್ಗೆ ಮಾಹಿತಿಯನ್ನು ಲೋಕಾಯುಕ್ತ ಎಸ್ಪಿ ಪಡೆದು ತೆರಳಿದ್ದಾಗಿ ಹೇಳಲಾಗುತ್ತಿದೆ.

ಏನಿದು ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿಸೋ ಕೇಸ್?

ಸಾಗರ ತಾಲ್ಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವಂತ ಭೂಗಳ್ಳರು ಸರ್ಕಾರಿ ಜಾಗ ಎಲ್ಲೆಲ್ಲಿ ಇದ್ಯೋ ಅಲ್ಲೆಲ್ಲ ತಮ್ಮ ಪ್ರಭಾವ ಬಳಸಿ ನಕಲಿ ದಾಖಲೆ ಸೃಷ್ಠಿಸಿ, ಅನಾಮಿಕರ ಹೆಸರಿಗೆ ಮಾಡಿಸೋ ಅಡ್ಡದಾರಿಯನ್ನು ಹಿಡಿದಿದ್ದಾರೆ.

ಇದೇ ಮಾದರಿಯಲ್ಲೇ ಸಾಗರ ತಾಲ್ಲೂಕಿನ ಕಸಬಾ ಹೋಬಳಿಯ ಮಂಕೋಡು ಗ್ರಾಮದ ಸರ್ವೇ ನಂ 12ರಲ್ಲಿ ಸುಮಾರು 59 ಎಕರೆ 35 ಗುಂಟೆ ಸರ್ಕಾರಿ ಜಾಗ ಖಾಲಿ ಇರೋ ವಿಚಾರ ಭೂಗಳ್ಳರ ಕಣ್ಣಿಗೆ ಬಿದ್ದಿದೆ. ಈ ಜಾಗ ದನದ ಮುಪ್ಪತ್ತಿಗಾಗಿ ಮೀಸಲಿಟ್ಟಿದ್ದಾಗಿದೆ.

ಇಂತಹ 59 ಎಕಲೆ 35 ಗುಂಟೆ ಜಾಗದಲ್ಲಿ 16 ಎಕರೆಗೆ ನಕಲಿ ದಾಖಲೆ ಸೃಷ್ಠಿಸಿ ಅನಾಮಿಕ ವ್ಯಕ್ತಿಯ ಹೆಸರಿಗೆ ಮಾಡೋ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಸಾಗರ ತಾಲ್ಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿಗಳೇ ಭೂಗಳ್ಳರಿಗೆ ಸಾಥ್ ನೀಡಿ, ದಂಧೆಯಲ್ಲಿ ಕೈ ಜೋಡಿಸಿದ್ದಾರೆ.

ಸರ್ಕಾರಿ ದಾಖಲೆಯನ್ನೇ ತಿದ್ದಿದ ಸಾಗರ ತಾಲ್ಲೂಕು ಕಚೇರಿ ಅಧಿಕಾರಿ, ಸಿಬ್ಬಂದಿ

ಸರ್ಕಾರಿ ಕಚೇರಿಯಲ್ಲಿನ ಕಡತಗಳನ್ನು ಹೊರಗಿನವರು ಬಂದು ತಿದ್ದೋದಕ್ಕೆ ಬಿಲ್ ಖುಲ್ ಸಾಧ್ಯವೇ ಇಲ್ಲ. ಹಾಗೊಂದು ವೇಳೆ ತಿದ್ದಿದ್ದರೂ ಅದಕ್ಕೆ ಕಚೇರಿಯಲ್ಲಿನ ಅಧಿಕಾರಿ, ಸಿಬ್ಬಂದಿಗಳು ಸಾಥ್ ನೀಡಿದಾಗಲೇ ಸಾಧ್ಯ. ಇದು ಎಲ್ಲರಿಗೂ ಗೊತ್ತಿರೋ ವಿಚಾರವೇ ಆಗಿದೆ.

ಹೀಗೆ ಇರುವಾಗ ಸಾಗರ ತಾಲ್ಲೂಕು ಕಚೇರಿಯಲ್ಲಿ ಮಂಕೋಡು ಗ್ರಾಮದ ಸರ್ವೆ ನಂ.12ರಲ್ಲಿನ ಸರ್ಕಾರಿ ದಾಖಲೆಯಲ್ಲಿದ್ದಂತ ದನದ ಮುಪ್ಪತ್ತಿನ ಜಾಗದಲ್ಲಿ 16 ಎಕರೆಯನ್ನು ಭೂಗಳ್ಳರಿಗೆ ಮಾಡಿ ಕೊಡೋ ಸಂಬಂಧ ದಾಖಲೆಯನ್ನೇ ತಿದ್ದಿದ್ದಾರೆ. 1964 ರಿಂದ 2000 ವರ್ಷದವರೆಗಿನ ಕಂದಾಯ ಇಲಾಖೆಯಲ್ಲಿನ ಎಲ್ಲಾ ದಾಖಲೆಯನ್ನು ತಿದ್ದಲಾಗಿದೆ.

ಇದಷ್ಟೇ ಅಲ್ಲದೇ ಬೇರೆ ಬೇರೆಯವರ ಹೆಸರಿಗೆ 8 ಎಕರೆ, 2 ಎಕರೆ ಸರ್ಕಾರಿ ಜಾಗ ಮಂಜೂರಾಗಿದೆ ಅಂತ ಕೈ ಬರಹದ ಪಹಣಿಯಲ್ಲಿ ತಿದ್ದುಪಡಿಯನ್ನು ಮಾಡಿ ಜಾಲಾಕಿ ಕೃತ್ಯವನ್ನು ಸಾಗರದ ತಾಲ್ಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿಗಳೇ ಎಸಗಿರೋದು ಬೆಳಕಿಗೆ ಬಂದಿದೆ.

ಮೂಲ ದಾಖಲೆಗಳನ್ನೇ ಭೂಗಳ್ಳರಿಗೆ ಕೊಟ್ಟ ಸರ್ಕಾರಿ ಅಧಿಕಾರಿ, ಸಿಬ್ಬಂದಿ

ಮಂಕೋಡು ಸರ್ವೆ ನಂ.12ಕ್ಕೆ ಸಂಬಂಧಿಸಿದಂತ ದಾಖಲೆಯಲ್ಲಿ 16 ಎಕರೆ ಒಬ್ಬರಿಗೆ, 8 ಎಕರೆ ಮಗದೊಬ್ಬರಿಗೆ, 2 ಎಕರೆ ಜಾಗ ಇನ್ನೊಬ್ಬರಿಗೆ ನಕಲಿ ದಾಖಲೆ, ತಿದ್ದುಪಡಿ ಮಾಡಿ ಸರ್ಕಾರಿ ಕಚೇರಿಯವರೇ ಮಾಡಿಕೊಟ್ಟಿದ್ದಾರೆ.

ಅಚ್ಚರಿ ಎನ್ನುವಂತೆ ಈ ದನದ ಮುಪ್ಪತ್ತಿನ ಜಾಗಕ್ಕೆ ಸಂಬಂಧಿಸಿದಂತ ಮೂಲ ದಾಖಲೆಗಳನ್ನೇ ಭೂಗಳ್ಳರ ಪಾಲಾಗುವಂತೆ ನೀಡಿ, ದಾಖಲೆಗಳೇ ನಾಪತ್ತೆಯಾಗಿರೋ ನಾಟಕವನ್ನು ಸೃಷ್ಠಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಸಾಗರದ ತಾಲ್ಲೂಕು ಕಚೇರಿಯ ಅಧಿಕಾರಿ, ಸಿಬ್ಬಂದಿಗಳ ನೆರವಿಲ್ಲದೇ ಹೇಗೆ ಸಾಧ್ಯ ಅಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸರ್ಕಾರಿ ಅಧಿಕಾರಿಯಿಂದಲೇ ನಕಲಿ ದಾಖಲೆ ಸೃಷ್ಠಿ ಪ್ರಕರಣ ಬಯಲು

ಸಾಗರ ತಾಲ್ಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವಂತ ಸಂತೋಷ್ ಎಂಬುವರೇ ತಹಶೀಲ್ದಾರ್ ಅವರಿಗೆ ಪತ್ರ ಬರೆದು, ಈ ಪ್ರಕರಣವನ್ನು ಬಯಲಿಗೆ ಇಟ್ಟಿದ್ದಾರೆ. ಮಂಕೋಡು ಗ್ರಾಮದ ಸರ್ವೆ ನಂ.12ಕ್ಕೆ ಸಂಬಂಧಿಸಿದಂತ ನಕಲಿ ದಾಖಲೆ ಸೃಷ್ಠಿಯ ಇಂಚಿಂಚೂ ಮಾಹಿತಿಯನ್ನು ಪತ್ರದಲ್ಲಿ ಬಿಚ್ಚಿಟ್ಟಿದ್ದರು.

SDA ಸಂತೋಷ್ ತಹಶೀಲ್ದಾರರಿಗೆ ಬರೆದಿರುವಂತ ಪತ್ರದಲ್ಲಿ ಏನಿದೆ?

ದಿನಾಂಕ 20-08-2024ರಂದು ಪತ್ರ ಬರೆದಿರುವಂತ ಅವರು, ನಾನು ಸಾಗರ ತಾಲ್ಲೂಕು ಕಛೇರಿಯ ಅಭಿಲೇಖಾಲಯ ಶಾಖೆಯಲ್ಲಿ ವಿಷಯ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ. ಸದರಿ ಶಾಖೆಯಲ್ಲಿ ದಿನಾಂಕ:30-05-2024 ರಂದು ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನಿರಂಜನ್ ಎಂಬ ವ್ಯಕ್ತಿ ಮಂಕೋಡು ಗ್ರಾಮ ಸ ನಂ 12ರಲ್ಲಿ 16-00 ಎಕರೆ ಗ ಸಂಬಂಧಿಸಿದ ದರಖಾಸ್ತು ಕಡತದ ನಕಲನ್ನು ಕೋರಿದ್ದರು.

ಆ ಕಡತ ಅನುಮಾನಸ್ಪದವಾಗಿ ಕಂಡುಬಂದಿರುತ್ತದೆ. ಏಕಂದರೆ ಈ ಹಿಂದೆ ನಾನು ಕೆಲವು ಸರ್ವೆ ನಂ ಹಾಗೂ ಗ್ರಾಮಗಳ, ಕಡತಗಳು ಮಿಶ್ರಣಗೊಂಡಿದ್ದರಿಂದ ಚೆಕ್‌, ಲೀಸ್ಟ್ ಗಳನ್ನು ಕಡತ ಹುಡುಕಲು ಸ್ಕ್ಯಾನ್ ಮಾಡಿಕೊಂಡಿರುತ್ತೇನೆ. ಸದರಿ ಕಡತ ಅನುಮಾನಸ್ಪದವಾಗಿ ಕಂಡುಬಂದ ಬೆನ್ನಲ್ಲಿ ಈ ಹಿಂದೆ ಸ್ಕ್ಯಾನ್ ಮಾಡಿದ ಚೆಕ್, ಲೀಸ್ಟ್ ನ ಪರಿಶೀಲಿಸಿದಾಗ ಪುಟ ಸಂಖ್ಯೆಯಿಂದ ಸದರಿ ಕಡತದಲ್ಲಿ ಮಂಕೋಡು ಗ್ರಾಮ ಸರ್ವೆ ನಂ 12 ರ ದರಖಾಸ್ತು ಕಡತ ಸೇರ್ವಡೆಗೊಂಡಿರುವ ಬಗ್ಗೆ ದೃಢಪಟ್ಟಿರುತ್ತದೆ ಎಂಬುದಾಗಿ ಅನುಮಾನ ವ್ಯಕ್ತ ಪಡಿಸಿದ್ದರು.

ಇನ್ನೂ 1964 ರಿಂದ 2000 ರವರೆಗಿನ ಆರ್.ಟಿ.ಸಿ ಯನ್ನು ಪರಿಶೀಲಿಸಿದಾಗ ಪ್ರತಿ ವರ್ಷದ ಆ‌ .ಟಿ.ಸಿ ಯಲ್ಲಿನ ವಿಸ್ತೀರ್ಣ ತಿನ್ನುವಡಿಗೊಂಡಿರುವುದು ಕಂಡುಬಂದಿರುತ್ತದೆ. ನಾನು ಸರ್ಕಾರಿ ನೌಕರನಾಗಿದ್ದು, ಸರ್ಕಾರದ ಆಸ್ತಿಯನ್ನು ಸಂರಕ್ಷಿಸುವುದು ನನ್ನ ಕರ್ತವ್ಯ ಆಗಿರುವುದರಿಂದ ಕೂಡಲೇ ಆರ್ ಆರ್ ಟಿ ಶಾಖೆಯ ಶಿರಸ್ತೇದಾರ್ ಮತ್ತು ತಹಶೀಲ್ದಾರ್ ಗೆ ಮೌಕಿಕವಾಗಿ ವಿಷಯವನ್ನು ತಿಳಿಸಿರುತ್ತೇನೆ ಎಂದಿದ್ದರು.

ಸದರಿ ಕಡತವನ್ನು ಆರ್ ಆರ್ ಟಿ ಶಾಖೆಯ ಶಿರಸ್ತೇದಾರರು ತಹಶೀಲ್ದಾರರ ಬಳಿ ಚರ್ಚಿಸಲು ಅಭಿಲೇಖಾಲಯ ಶಾಖೆಯಿಂದ ಪಡೆದಿರುತ್ತಾರೆ. ಈ ಕೃತ್ಯವನ್ನು ಕಛೇರಿಯ ಕೆಲ ಸಿಬ್ಬಂಧಿಗಳ ಸಹಾಯದಿಂದ ಅನ್ಯ ವ್ಯಕ್ತಿಗಳು ಎಸಗಿರುವುದಾಗಿ ಸಹ ಅನುಮಾನ ಬಂದಿರುತ್ತದೆ. ಈ ಪ್ರಕರಣ ಗಂಭಿರವಾಗಿರುವುದರಿಂದ ಮುಂದಿನ ದಿನಗಳಲ್ಲಿನ ಆಗು ಹೋಗುಗಳಿಗೆ ನಾನು ವಿಷಯದ ಕುರಿತು ಉತ್ತರ ನೀಡಬೇಕಾಗಿದೆ. ಈ ಪ್ರಕರಣದ ಕುರಿತು ಲಿಖಿತವಾಗಿ ತಮ್ಮ ಮುಂದೆ ಪ್ರಸ್ತುತ ವಡಿಸುತ್ತಾ ಒಂದು ವೇಳೆ ನಾನು ವ್ಯಕ್ತವಡಿಸಿದಂತಹ ಅನುಮಾನ ಸತ್ಯವಾಗಿದ್ದಲ್ಲಿ, ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಆಸ್ತಿಯನ್ನು ಉಳಿಸಬೇಕಾಗಿ ಅಂತ ಎಸ್ ಡಿ ಎ ಸಂತೋಷ್ ಅವರು ಸಾಗರ ತಹಶೀಲ್ದಾರರರಲ್ಲಿ ಮನವಿ ಮಾಡಿದ್ದರು.

ಈ ಹಿನ್ನಲೆಯಲ್ಲೇ ಲೋಕಾಯುಕ್ತದಲ್ಲಿ ಸುಮೋಟೋ ಕೇಸ್ ದಾಖಲಾಗಿತ್ತು. ಹೀಗಾಗಿ ಇಂದು ಸಾಗರ ಪಟ್ಟಣ ಸಮೀಪದ ಸರ್ವೇ ನಂ.12ರ ಸ್ಥಳಕ್ಕೆ ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಅವರು ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇದಲ್ಲದೇ ಈ ಪ್ರಕರಣ ಸಂಬಂಧ ಸಾಗರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇನ್ಮುಂದೆ ಸರ್ಕಾರಿ ಭೂಮಿಗೆ ನಕಲಿ ದಾಖಲಿ ಸೃಷ್ಠಿಸಿದಂತವರಿಗೆ ನಡುಕ ಶುರುವಾಗಿದೆ. ಜೊತೆಗೆ ಈ ನಕಲಿ ದಾಖಲೆ ಸೃಷ್ಠಿಯಲ್ಲಿ ಭಾಗಿಯಾದಂತ ಸರ್ಕಾರಿ ಅಧಿಕಾರಿಗಳು, ಭೂಗಳ್ಳರಿಗೆ ಕಾನೂನಿನ ಕುಣಿಕೆ ಫಿಕ್ಸ್ ಆದಂತೆ ಆಗಿದೆ.

ವರದಿ: ವಸಂತ ಬಿ ಈಶ್ವರಗೆರೆ

BREAKING NEWS: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಡಿವೈಎಸ್ಪಿ ಅರೆಸ್ಟ್

BREAKING NEWS: ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ | Allu Arjun Pushpa 2

Share. Facebook Twitter LinkedIn WhatsApp Email

Related Posts

BIG NEWS : ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

11/05/2025 3:35 PM1 Min Read

BREAKING : ರಾಮನಗರದಲ್ಲಿ ಭೀಕರ ಅಪಘಾತ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ನಾಲ್ವರು ಗಂಭೀರ

11/05/2025 3:22 PM1 Min Read

BREAKING : ಬಾಗಲಕೋಟೆಯಲ್ಲಿ ಭೀಕರ ಅಪಘಾತ : ಟಿಪ್ಪರ್ ಹರಿದು ಬೈಕ್ ಸವಾರ ದುರ್ಮರಣ

11/05/2025 2:28 PM1 Min Read
Recent News

BREAKING : ಮೇ 16 ರಂದು ‘IPL’ ಟೂರ್ನಿಯ ಪಂದ್ಯಗಳು ಪುನಾರಂಭ, ಮೇ 30ಕ್ಕೆ ಫೈನಲ್ ಪಂದ್ಯ : ವರದಿ | IPL 2025

11/05/2025 4:11 PM

BIG NEWS : ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

11/05/2025 3:35 PM

BREAKING : ರಾಮನಗರದಲ್ಲಿ ಭೀಕರ ಅಪಘಾತ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ನಾಲ್ವರು ಗಂಭೀರ

11/05/2025 3:22 PM

SHOCKING : ಕಾಡಿನಲ್ಲಿ ಸಿಗುವ ಆಹಾರ ಬಳಸೋ ಮುನ್ನ ಇರಲಿ ಎಚ್ಚರ : ‘ವಿಷ ಅಣಬೆ’ ಸೇವಿಸಿ 6 ಜನ ಸಾವು!

11/05/2025 3:01 PM
State News
INDIA

BIG NEWS : ಕಾಶ್ಮೀರದ ಕೃಷಿ ವಿಜ್ಞಾನ ವಿವಿಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್

By kannadanewsnow0511/05/2025 3:35 PM INDIA 1 Min Read

ಶ್ರೀನಗರ : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನವಾಗಿದ್ದು ಇದೇ ವೇಳೆ ಪಾಕಿಸ್ತಾನ ನಿರಂತರವಾಗಿ ಕಾಶ್ಮೀರ, ಪಂಜಾಬ್, ರಾಜಸ್ಥಾನ್…

BREAKING : ರಾಮನಗರದಲ್ಲಿ ಭೀಕರ ಅಪಘಾತ : ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಸಾವು, ನಾಲ್ವರು ಗಂಭೀರ

11/05/2025 3:22 PM

BREAKING : ಬಾಗಲಕೋಟೆಯಲ್ಲಿ ಭೀಕರ ಅಪಘಾತ : ಟಿಪ್ಪರ್ ಹರಿದು ಬೈಕ್ ಸವಾರ ದುರ್ಮರಣ

11/05/2025 2:28 PM

BREAKING : ಕರ್ನಾಟಕ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕನಿಂದಲೇ ‘ಹುಸಿ ಬಾಂಬ್’ ಕರೆ : ಆರೋಪಿ ಅರೆಸ್ಟ್

11/05/2025 2:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.