ಕಲಬುರ್ಗಿ: ಜಿಲ್ಲೆಯ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಪತ್ತೆಯಾದಂತ ಚಿನ್ನಾಭರಣ ಕಂಡು ಲೋಕಾಯುಕ್ತ ಪೊಲೀಸರೇ ಶಾಕ್ ಆಗಿದ್ದಾರೆ.
ಹೌದು.. ಕಲಬುರ್ಗಿಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆ ಮುಖ್ಯ ಯೋಜನಾಧಿಕಾರಿ ಜಗನ್ನಾಥ್ ಹಲಿಂಗೆ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎನ್ ಜಿ ಒ ಕಾಲೋನಿಯಲ್ಲಿನ ಮನೆ ಸೇರಿದಂತೆ 6 ಕಡೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಬೆಂಗಳೂರನಲ್ಲಿನ ಮನೆ, ಬೀದರ್ ಮನೆ ಹಾಗೂ ದನ್ನುರ್ ಕೆ ಫಾರ್ಮ್ ಹೌಸ್ ಸೇರಿದಂತೆ 6 ಕಡೆಯಲ್ಲಿ ಲೋಕಾಯುಕ್ತ ಎಸ್ ಪಿ ಉಮೇಶ್, ಡಿವೈಎಸ್ಪಿ ಗೀತಾ ಬೆನಾಳ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ.
ಈ ದಾಳಿಯ ಸಂದರ್ಭದಲ್ಲಿ ಎರಡು ಕೆಜಿಗೂ ಅಧಿಕ ಬೆಳ್ಳಿ ಪತ್ತೆಯಾಗಿದ್ದರೇ, ಕೀ ಇಲ್ಲದ ಹಿನ್ನಲೆಯಲ್ಲಿ ಲಾಕರ್ ಒಡೆದು ನೋಡಿದಾಗ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಜೊತೆಗೆ ಅಳಂದದಲ್ಲಿ 30 ಎಕರೆ ಜಮೀನು, ಕಲಬುರ್ಗಿ ಹೊರವಲಯದ ತಾವರಗೆರೆಯಲ್ಲಿ ಜಮೀನು, ಬೀದರ್, ಬಸವಕಲ್ಯಾಣದಲ್ಲಿ ಆಸ್ತಿಯ ದಾಖಲೆ ಪತ್ರಗಳು ಪತ್ತೆಯಾಗಿದ್ದಾವೆ.
ಇನ್ನೂ ಪತ್ತೆಯಾದಂತ ದಾಖಲೆಗಳಂತೆ ಎಲ್ಲಾ ಆಸ್ತಿ ಸ್ವಯಾರ್ಜಿತವಾಗಿದ್ದೇ ಹೊರತು, ಪಿತ್ರಾರ್ಜಿತ ಆಸ್ತಿ ಅಲ್ಲ ಎಂಬುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ.
ಲಾಕರ್ ನಲ್ಲಿ ಚಿನ್ನಾಭರಣ, ಗೋಲ್ಡ್ ಕಾಯಿನ್, ಡೈಮಂಡ್ ರಿಂಗ್ ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದ್ದು, ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರೆಸಿದ್ದಾರೆ.
ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ‘ಎ, ಬಿ-ಖಾತಾ’ ಅಂದ್ರೆ ಏನು? ಪಡೆಯೋದು ಹೇಗೆ.?
ಜಾರ್ಖಂಡ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಬಾಬುಲಾಲ್ ಮರಾಂಡಿ ನೇಮಕ | Babulal Marandi
GOOD NEWS : ಇನ್ಮುಂದೆ ಹರಟೆ ಹೊಡೆಯಲು ಶಾಸಕರಿಗೂ ‘ಕ್ಲಬ್’ ವ್ಯವಸ್ಥೆ : ಸ್ಪೀಕರ್ ಯುಟಿ ಖಾದರ್ ಹೇಳಿಕೆ