ಮಂಡ್ಯ : ಕಾಮಗಾರಿ ಮಾಡಿರುವ ಬಿಲ್ ಬಿಡುಗಡೆ ಮಾಡಲು ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಮಂಡ್ಯ ನಗರದ ಲೋಕೋಪಯೋಗಿ ಇಲಾಖೆ ಕಚೇರಿಗೆ ಸೋಮವಾರ ದಾಳಿ ನಡೆಸಿ ಸತತ ನಾಲ್ಕೂವರೆ ಗಂಟೆಗಳ ಕಾಲ ಕಡತಗಳ ಪರಿಶೀಲನೆ ನಡೆಸಿದ್ದಾರೆ.
2021ರಲ್ಲಿ ಮಾಡಿರುವ ಕಾಮಗಾರಿಗೆ ಬಿಲ್ ಬಿಡುಗಡೆ ಮಾಡಿಲ್ಲ. ಬದಲಿಗೆ 2024ರಲ್ಲಿ ಮಾಡಿರುವ ಕಾಮಗಾರಿಯ ಹಣವನ್ನು ಬಿಡುಗಡೆ ಮಾಡುವ ಸೀನಿಯಾರಿಟಿ ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಹಲವು ಗುತ್ತಿಗೆದಾರರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 3.30ರಿಂದ ರಾತ್ರಿ 8 ಗಂಟೆವರೆಗೂ ಪರಿಶೀಲನೆ ನಡೆಸಿ ಕೆಲವೊಂದು ಮುಖ್ಯವಾದ ಕಡತಗಳನ್ನು ತೆಗೆದುಕೊಳ್ಳಲಾಗಿದೆ. ಮಾತ್ರವಲ್ಲದೆ ಕಚೇರಿಗೆ ಬೀಗ ಹಾಕಿಸಿ, ಮಂಗಳವಾರವೂ ಪರಿಶೀಲನೆ ಮುಂದುವರಿಯಲಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಸುನೀಲ್ ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಬ್ಯಾಟರಾಯಗೌಡ, ಜಯರತ್ನಾ, ಸಿಬ್ಬಂದಿ ಶಂಕರ್, ಶರತ್, ಮಹದೇವ, ಮಹದೇವಸ್ವಾಮಿ, ನವೀನ, ಮನು, ರಾಮಲಿಂಗ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮಾವು, ಬಾಳೆ ಬೆಳೆಗಾರ ರೈತರ ಗಮನಕ್ಕೆ: ಸೂಕ್ಷ್ಮ ನೀರಾವರಿ ತಾಂತ್ರಿಕತೆ ಅಳವಡಿಕೆ, ನಿರ್ವಹಣೆ ತರಬೇತಿಗೆ ಅರ್ಜಿ ಆಹ್ವಾನ