ಬೆಂಗಳೂರು: ನಗರದಲ್ಲಿನ ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆಯಲ್ಲಿ ಬಹುದೊಡ್ಡ ಕರ್ಮಕಾಂಡವೇ ಬೆಳಕಿಗೆ ಬಂದಿದೆ. ಆ ಇಂಚಿಂಚೂ ವರದಿಯನ್ನು ಕರ್ನಾಟಕ ಲೋಕಾಯುಕ್ತದಿಂದ ಬಿಡುಗಡೆ ಮಾಡಲಾಗಿದೆ. ಆ ಸಂಪೂರ್ಣ ವರದಿ ಮುಂದಿದೆ ಓದಿ.
ಈ ಕುರಿತಂತೆ ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿನ ವಿವಿಧ ಕಚೇರಿಗಳಲ್ಲಿ ಕೈಗೊಂಡ ಶೋಧನಾ ಕಾರ್ಯಾಚರಣೆಯನ್ನು ಮಾಡಲಾಗಿದೆ ಎಂದಿದೆ. ಈ ಕೆಳಕಂಡಂತಿದೆ ಬಿಬಿಎಂಪಿ ಕಚೇರಿಯಲ್ಲಿನ ಕರ್ಮಕಾಂಡದ ಮಾಹಿತಿ
ಸಾರ್ವಜನಿಕರಿಂದ ಸ್ವೀಕೃತವಾದ ಹಲವು ದೂರುಗಳ ಆಧಾರದ ಮೇಲೆ ಹಾಗೂ ಬಾತ್ಮೀದಾರರಿಂದ ಬಂದ ಮಾಹಿತಿಗಳ ಮೇರೆಗೆ ಬಿ.ಬಿ.ಎಂ.ಪಿ ಗೆ ಸೇರಿದ ಕಾರ್ಯಪಾಲಕ ಅಭಿಯಂತರರ ಕಛೇರಿ, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಸಹಾಯಕ ಕಂದಾಯಾಧಿಕರಿಗಳ ಕಛೇರಿ ಮತ್ತು ಇತರೆ ಕಛೇರಿಗಳಲ್ಲಿ ಕೈಗೊಂಡ ಶೋಧನೆಯಿಂದ ಈ ಕೆಳಕಂಡ ನ್ಯನ್ಯತೆಗಳು ಕಂಡುಬಂದಿರುತ್ತವೆ.
- ಅಧಿಕಾರಿಗಳು ಕಛೇರಿಗೆ ಕರ್ತವ್ಯಕ್ಕೆ ಹಾಜರಾದಾಗ ಪ್ರತಿ ನಿತ್ಯ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಬೇಕಾಗಿದ್ದು, ಸಹಿಯನ್ನು ಮಾಡದೇ ಹಾಜರಾತಿ ಪುಸ್ತಕವನ್ನು ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
- ಕಛೇರಿಯಿಂದ ಕರ್ತವ್ಯದ ಮೇಲೆ ಹೋರಹೋದಲ್ಲಿ, ಇತರೆ ಸರ್ಕಾರಿ ಕೆಲಸದ ಮೇಲೆ ಬೇರೆ ಕಛೇರಿಗಳಿಗೆ ತೆರಳಿದ್ದಲ್ಲಿ ಅಂತಹ ಮಾಹಿತಿಯ ವಿವರಗಳನ್ನು ಚಲನ-ವಲನ ಪುಸ್ತಕದಲ್ಲಿ ನಮೂದು ಮಾಡಬೇಕಾಗಿದ್ದು, ಸರಿಯಾಗಿ ನಮೂದು ಮಾಡದೇ ಇರುವುದು ಮತ್ತು ಕೆಲವು ಕಛೇರಿಗಳಲ್ಲಿ ವಹಿಯನ್ನು ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
- ಹೊರಗುತ್ತಿಗೆ ಆಧಾದರ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಹಾಜರಾತಿ ಪುಸ್ತಕವನ್ನೂ ಸಹ ನಿರ್ವಹಣೆ ಮಾಡಬೇಕಾಗಿದ್ದು, ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
- ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರಾದ ಸಮಯದಲ್ಲಿ ತಮ್ಮ ಬಳಿ ಇರುವ ನಗದು ಬಗ್ಗೆ ನಗದು ಘೋಷಣಾ ಪುಸ್ತಕದಲ್ಲಿ ನಮೂದು ಮಾಡಬೇಕಾಗಿದ್ದು, ನಮೂದು ಮಾಡದೇ ಇರುವುದು ಹಾಗೂ ನಗದು ಘೋಷಣಾ ವಹಿಯನ್ನು ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
- ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು/ಅರ್ಜಿಗಳನ್ನು ಸಕಾಲ ಯೋಜನೆಯಡಿಯಲ್ಲಿ ನಿಗಧಿತ ಕಲಾವಧಿಯಲ್ಲಿ ವಿಲೇವಾರಿ ಮಾಡಬೇಕಾಗಿದ್ದು, ಸಕಾಲ ಅವಧಿ ಮುಗಿದರೂ ಸಹ ದೂರು/ಅರ್ಜಿಗಳನ್ನು ವಿಲೇ ಮಾಡದೇ ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿರುತ್ತದೆ.
- ಕಟ್ಟಡ ನಿರ್ಮಾಣದ ನಿಯಮಗಳ/ಅನುಮೋದಿತ ಯೋಜನೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ನಿರ್ಮಾಣದ ವಿರುದ್ಧ ಕ್ರಮ ಕೈಗೊಂಡು ಡೆಮಾಲಿಶ್ ಮಾಡುವ ಬಗ್ಗೆಯಾಗಲೀ ಅಥವಾ ಸ್ಥಳ ಪರಿಶೀಲನೆ ಮಾಡುವ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕಂಡುಬಂದಿರುತ್ತದೆ.
- ಕಛೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಸೇವೆಗಳ ಬಗ್ಗೆಯಾಗಲೀ ಕಛೇರಿಯ ಆವಣದಲ್ಲಿ ಕಛೇರಿಗೆ ಸಂಬಂಧಿಸಿದ ಯಾವುದೇ ನಾಮ ಫಲಕವನ್ನು ಅಳವಡಿಸದೇ ಇರುವುದು ಕಂಡುಬಂದಿರುತ್ತದೆ.
- ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ಮಾಹಿತಿ ಇರುವ ನಾಮ ಫಕಲಕವನ್ನು ಅಳವಡಿಸದೇ ಇರುವುದು ಕಂಡುಬಂದಿರುತ್ತದೆ.
- ಕಛೇರಿಗಳಲ್ಲಿ ಹಾಜರಿದ್ದ ಅಧಿಕಾರಿ/ಸಿಬ್ಬಂದಿಯವರ ಬಳಿ ನಗದು ಘೋಷಣಾ ಪುಸ್ತಕದಲ್ಲಿ ನಮೂದು ಮಾಡಿರುವುದಕ್ಕಿಂತ ಹೆಚ್ಚುವರಿ ಹಣ ದೊರೆತಿರುವುದು ಕಂಡುಬಂದಿರುತ್ತದೆ.
- ಸಾರ್ವಜನಿಕರಿಂದ ಸ್ವೀಕೃತವಾಗುವ ದೂರುಗಳಿಗೆ ಸಂಬಂಧಿಸಿದಂತೆ ವಹಿಯನ್ನು ನಿರ್ವಹಣೆ ಮಾಡಬೇಕಾಗಿದ್ದು, ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
- ಖಾಸಗೀ ವ್ಯಕ್ತಿಗಳನ್ನು ಅನಧಿಕೃತವಾಗಿ ಕಛೇರಿ ಕರ್ತವ್ಯಕ್ಕೆ ನೇಮಿಸಿಕೊಂಡು, ಅಧಿಕಾರಿಗಳೇ ಮಾಹೆಯಾನ ಸಂಭಾವನೆಯನ್ನು ನೀಡುತ್ತಿರುವುದು ಕಂಡುಬಂದಿರುತ್ತದೆ.
- ಕೆಲವು ಕಛೇರಿಗಳಲ್ಲಿ ಹೊರಗುತ್ತಿಗೆ ನೌಕರರನ್ನು ಹೊರತುಪಡಿಸಿ ಕಛೇರಿಯ ಖಾಯಂ ಅಧಿಕಾರಿ/ಸಿಬ್ಬಂದಿಗಳು ಹಾಜರಾಗದೇ ಇರುವುದು ಕಂಡುಬಂದಿರುತ್ತದೆ.
- ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳಿಗೆ ಕರ್ತವ್ಯ ಹಂಚಿಕೆ ಮಾಡದೇ ಇರುವುದು ಕಂಡುಬಂದಿರುತ್ತದೆ.
- ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಅರ್ಜಿಗಳಲ್ಲಿ ತಿರಸ್ಕೃತ ಮಾಡಿದ ಅರ್ಜಿಗಳಿಗೆ ಅರ್ಜಿದಾರರಿಗೆ ಯಾವುದೇ ಮಾಹಿತಿಯನ್ನು ನೀಡದೇ ಇರುವುದು ಕಂಡುಬಂದಿರುತ್ತದೆ.
- ಟೆಂಡರ್ ಅಧಿಸೂನೆಯನ್ನು ಹೊರಡಿಸಿ, ಕಾಮಗಾರಿಗಳನ್ನು ಪೂರ್ಣಗೊಂಡ ಬಗ್ಗೆ ಮತ್ತು ಕಾಮಗಾರಿಗಳ ಪ್ರಕ್ರಿಯೆಯ ಕುರಿತು ಪರಿಶೀಲನೆ ಮಾಡದೇ ಇರುವುದು ಕಂಡುಬಂದಿರುತ್ತದೆ.
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಜಿಯೋ 5ಜಿ ಸೇವೆ ಆರಂಭ
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮುಚ್ಚಿಹಾಕುವ ಯತ್ನ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ