ಬೆಂಗಳೂರು: ನಗರದ ಸಬ್ ರಿಜಿಸ್ಟಾರ್ ಕಚೇರಿಯ ಮೇಲೆ ಲೋಕಾಯುತ್ತ ಹಾಗೂ ಉಪ ಲೋಕಾಯುಕ್ತ ಅಧಿಕಾರಿಗಳು ಖುದ್ದಾಗಿ ದಾಳಿ ನಡೆಸಿದ್ದಾರೆ. ನಗರದು ಹಣ ಪತ್ತೆಯಾಗಿದ್ದರೇ, ಹಲವು ಸಬ್ ರಿಜಿಸ್ಟಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಂತು ಪೋನ್ ಪೇ, ಜೀ ಪೇ ಮೂಲಕ ಲಕ್ಷ ಲಕ್ಷ ಲಂಚವನ್ನು ಪಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಲೋಕಾಯುಕ್ತದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಈ ದಿನ ಅಂದರೆ ವಿನಾಂಕ: 06.03.2025ರಂದು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ 25 ಉಪ ನೋಂದಣಾಧಿಕಾರಿಗಳ ಕಛೇರಿಗಳಿಗೆ ಏಕ ಕಾಲಕ್ಕೆ ಅನಿರೀಕ್ಷಿತ ತಪಾಸಣೆಯನ್ನು ನಡೆಸಲಾಯಿತು. ಈ ದಿನ ತಪಾಸಣೆ ನಡೆಸಲಾದ ಉಪನೋಂದಣಾಧಿಕಾರಿಗಳ ಕಛೇಲಿಗಳ ಪೈಕಿ ಅನೇಕ ಉಪ ನೋಂದಣಾಧಿಕಾರಿಗಳ ಕಛೇರಿಗಳಿಗೆ 2022ನೇ ಸಾಅನಲ್ಲಿಯೂ ಸಹಾ ತಪಾಸಣೆ ನಡೆಸಲಾಗಿತ್ತು ಎಂದಿದೆ.
ಅನಿರೀಕ್ಷಿತ ತಪಾಸಣೆ ನಡೆಸಿದ ಪೊಲೀಸ್ ಹಾಗೂ ನ್ಯಾಯಾಂಗ ಅಧಿಕಾರಿಗಳ ತಂಡವು ಅನೇಕ ನ್ಯೂನ್ಯತೆಗಳನ್ನು ದಿನಾಂಕ: 19.07.2022ರ ಆದೇಶದ ರೀತ್ಯಾ ಪತ್ತೆ ಹಚ್ಚಿದ್ದರು. ಈ ನ್ಯೂನ್ಯತೆಗಳನ್ನು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನೋಂದಣಿ ಇಲಾಖೆಯ ಮಹಾ ಪರಿವೀಕ್ಷಕರು, ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಉಪ ನೋಂದಣಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅವರುಗಳು ಅನುಸರಣಾ ವರದಿಗಳನ್ನು ಸಲ್ಲಿಸಿದ್ದರು ಎಂದಿದೆ.
ಆದರೆ, ಈ ದಿನದ ತಪಾಸಣಾ ಸಮಯದಲ್ಲಿ ಈ ಹಿಂದೆ ಗಮನಿಸಿದ್ದ ನ್ಯೂನ್ಯತೆಗಳು ಮತ್ತೆ ಮರುಕಳಿಸಿರುತ್ತದೆ. ಉದಾಹರಣೆಗೆ ಹೇಳುವುದಾದರೆ, ಹಾಜರಾತಿ ವಹಿ, ಚಲನ-ವಲನ ವಹಿ, ತಪಾಸಣಾ ವಹಿ, ನಗದು ಘೋಷಣಾ ವಹಿಗಳನ್ನು ನಿರ್ವಹಣೆ ಮಾಡಿರುವುದಿಲ್ಲ, ಮಾಡಿದ್ದರೂ ಸಹಾ ಸರಿಯಾಗಿ ನಿರ್ವಹಿಸಿರುವುದಿಲ್ಲ ಎಂದು ಹೇಳಿದೆ.
- ದಾಸನಪುರ ಸಬ್ ಲಿಜಿಸ್ಟಾರ್ ಕಛೇರಿಗೆ ಬೇಟಿ ನೀಡಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ರೂ.20,000/- ಹಣವನ್ನು ರಜ್ಜನ ಡಸ್ಟ್ ಇನ್‌ನಲ್ಲಿ ಕರ್ಚೀಫ್‌ನಲ್ಲಿ ಸುತ್ತಿ ಹಾಕಿರುವುದು ಕಂಡು ಬಂದಿರುತ್ತದೆ.
- ದಾಸನಪುರ ಸಬ್ ರಿಜಿಸ್ಟಾರ್ ಕಛೇರಿಯಲ್ಲಿಯ ಎರಡನೇ ದರ್ಜೆ ಗುಮಾಸ್ತನ ಫೋನ್ ಅಕೌಂಟ್ ಪರಿಶೀಲಿಸಲಾಗಿ, ಅವರ ಫೋನ್‌ಪೇಗೆ ಪ್ರತಿ ದಿನ ಸುಮಾರು ಹಣ ಬಂದಿರುವುದು ಕಂಡು ಬಂದಿರುತ್ತದೆ. ವಿಚಾಲಿಸಲಾಗಿ, ಪಡೆಯುವವರು ಪೇ ಫೋನ್ ಗೆ ಹಣ ಹಾಕುತ್ತಿರುತ್ತಾರೆಂದು ತಿಳಿಸಿರುತ್ತಾರೆ.
- ದೇವನಹಳ್ಳಿ ಸಬ್ ಲಿಸ್ಟಾರ್ ಕಛೇರಿಯ ಎರಡನೇ ದರ್ಜೆ ಸಹಾಯಕ ಬಳಿ ರೂ.20,000/- ದೊರೆತಿದ್ದು, ಸದಲಿ ಮೊತ್ತವನ್ನು ನಗದು ಘೋಷಣಾ ವಹಿಯಲ್ಲಿ ನಮೂದಿಸಿರುವುದಿಲ್ಲ.
- ದೇವನಹಳ್ಳಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಓರ್ವ ವ್ಯಕ್ತಿ ತನ್ನಲ್ಲಿದ್ದ ಬ್ಯಾಗ್‌ನ್ನು ಬಿಟ್ಟು ಓಡಿ ಹೋಗಿದ್ದು, ಬ್ಯಾಗ್‌ನ್ನು ಪರಿಶೀಲಿಸಲಾಗಿ, ಡೈಲಿ ದೊರೆತಿದ್ದು, ಸದಲಿ ಡೈಲಿಯಲ್ಲಿ ಹಳ್ಳಿಗಳ ಹೆಸರು ಹಾಗೂ ಹಣ ಸಂದಾಯದ ವಿವರಗಳು ಲಭಿಸಿದ್ದು, ಆ ವ್ಯಕ್ತಿಯನ್ನು ಪತ್ತೆ ಮಾಡಿ, ತನಿಖೆಗೊಳಪಡಿಸಿ, ಮುಂದಿನ ಕ್ರಮ ಜರುಗಿಸಲಾಗುವುದು.
- ವಿಜಯನಗರ ಸಬ್ ರಿಜಿಸ್ಟಾರ್ ಕಛೇಲಿಯ ಓರ್ವ ದ್ವಿತೀಯ ದರ್ಜೆ ಸಹಾಯಕರು ಇ.ಸಿ. ನೀಡಲು ಹಣವನ್ನು ತನ್ನ ಪತಿಯ ಫೋನ್‌ಪೇ ಅಕೌಂಟ್‌ಗೆ ಹಾಕುತ್ತಿದ್ದುದನ್ನು ಪತ್ತೆ ಹಚ್ಚಲಾಗಿರುತ್ತದೆ. ಆಕೆಯ ಕಡೆಯಿಂದ ಪತಿಗೆ ದೂರವಾಣಿ ಮೂಲಕ ಸಂಪರ್ಕಿಸಲಾಗಿ, ಆತನು ಈ ದಿನ ರೂ.950/- ಫೋನ್ ಮೂಲಕ ಬಂದಿರುವುದಾಗಿ ತಿಳಿಸಿರುತ್ತಾನೆ.
- ವಿಜಯನಗರ ಸಬ್ ರಿಜಿಸ್ಟಾರ್ ಕಛೇಲಿಯ ಮತ್ತೋರ್ವ ದ್ವಿತೀಯ ದರ್ಜೆ ಸಹಾಯಕನ ಫೋನ್ ಪರಿಶೀಲಿಸಲಾಗಿ, ಪ್ರತಿ ತಿಂಗಳು ಲಕ್ಷಾಂತರ ಹಣದ ವ್ಯವಹಾರವನ್ನು ಮಾಡಿರುವುದು ಪತ್ತೆ ಮಾಡಲಾಗಿರುತ್ತದೆ. ಬಿಜಯನಗರ ಸಬ್ ಅಜಿಸ್ಟಾರ್ ಕಛೇಲಿಯಲ್ಲಿ ನೋಂದಣಿ ದಾಖಲಾತಿಗಳನ್ನು ಪರಿಶೀಲಿಸಲಾಗಿ, ಪ್ಯಾನ್ ಕಾರ್ಡ್ ನಮೂದಿಸದೇ ಹೆಚ್ಚು ಮೊತ್ತದ ನೋಂದಣಿ ದಾಖಲೆಯನ್ನು ನೋಂದಾಯಿಸಿರುವುದು ಕಂಡು ಬಂದಿರುತ್ತದೆ.
- ನೋಂದಣಿ ನಿಯಮದ ಜೆ-ಸ್ಲಿಪ್‌ನ್ನು ಕಡ್ಡಾಯವಾಗಿ ಖಾತಾ ವಿತರಣೆ ಸಲುವಾಗಿ ಕಂದಾಯ ಇಲಾಖೆಗೆ ಕಳುಹಿಸಬೇಕಾಗಿದ್ದರೂ ಸಹಾ ಬಿಜಯ ನಗರ ಸಬ್ ಲಜಿಸ್ಟಾರ್ ಕಛೇಲಿಯಲ್ಲಿ ಜೆ-ಸ್ಲಿಪ್ ಕಳುಹಿಸದೇ ಇರುವುದು ಕಂಡು ಬಂದಿರುತ್ತದೆ.
- ಜೆ.ಪಿ. ನಗರ ಸಬ್ ಲಜಿಸ್ಟಾರ್ ಕಛೇರಿಯ ಓರ್ವ ಸಿಬ್ಬಂದಿಯ ಬಳ ದೊರೆತಿದ್ದು, ನಗದು ಘೋಷಣಾ ವಹಿಯಲ್ಲಿ ರೂ.1.900/-ನಮೂದಿಸಿರುವುದಿಲ್ಲ.
- ಜೆ.ಪಿ. ನಗರ ಸಬ್ ಜಿಸ್ಟಾರ್‌ಗೆ ಸಂಬಂಧಿಸಿದ ಕಾಲಿನಲ್ಲಿ ಮೈಕೆಲ್ ಕೋಲಿಸ್ ವಾಚ್ ದೊರೆತಿರುತ್ತದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹಾಗೂ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ಬಿ.ಬೀರಪ್ಪ ಅವರುಗಳು ಖುದ್ದಾಗಿ ಸಬ್ ಲಿಜಿಸ್ಟಾರ್ ಕಛೇರಿಗಳಿಗೆ ಬೇಟಿ ನೀಡಿ ತಪಾಸಣೆ ಕೈಗೊಂಡಿರುತ್ತಾರೆ ಎಂದು ತಿಳಿಸಿದೆ.
ನೋಂದಣಿ ಹಾಗೂ ಇತರೆ ಸೇವೆಗಳಗಾಗಿ ಆನ್ ಲೈನ್ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಿದ್ದರೂ ಸಹಾ, ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲದೇ, ಅನೇಕ ಗೊಂದಲಗಳು ಹಾಗೆಯೇ ಮುಂದುವರೆದಿರುತ್ತದೆ. ತಪಾಸಣಾ ಸಮಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲಾಯಿತು. ತಪಾಸಣಾ ತಂಡದಿಂದ ತನಿಖಾ ವರದಿಗಳನ್ನು ಪಡೆದು, ಅವುಗಳನ್ನು ಕ್ರೋಢೀಕಲಿಸಿ, ಸಂಬಂಧಪಟ್ಟ ಅಧಿಕಾಲಿ/ಸಾರ್ವಜನಿಕರುಗಳನ್ನು ವಿಚಾರಣೆಗೊಳಪಡಿಸಿ, ಆದೇಶ/ಶಿಫಾರಸ್ಸುಗಳನ್ನು ಹೊರಡಿಸಲಾಗುವುದು ಹಾಗೂ ಅಧಿಕಾಲಿ/ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದಾಗಿ ತಿಳಿಸಿದೆ.