ಬೆಂಗಳೂರು: ಇಂದು ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ 2ನೇ ಹಂತದ ಮತದಾನ 14 ಜಿಲ್ಲೆಗಳಲ್ಲಿ ನಡೆಯಲಿದೆ. ನಾಳೆ ನಡೆಯಲಿರುವಂತ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನಕ್ಕೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿ ಆದೇಶಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಅದರಲ್ಲಿ ಭಾರತ ಚುನಾವಣಾ ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆ 2024ನ್ನು ಘೋಷಿಸಿದ್ದು, ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ದಿನಾಂಕ:26.04.2024ರ ಶುಕ್ರವಾರದಂದು ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತ ಹಾಗೂ ಶೋರಾಪುರ-36 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ದಿನಾಂಕ:07.05.2024ರ ಮಂಗಳವಾರದಂದು ನಡೆಸುತ್ತಿದೆ ಎಂದಿದ್ದಾರೆ.
ಸದರಿ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ದಿನಾಂಕ:26.04.2024 ಮತ್ತು ದಿನಾಂಕ:07.05.2024ರಂದು ನಡೆಯುವ ಚುನಾವಣೆಗೆ ಕೆಳಗಿನ ಅಂಕಣದಲ್ಲಿ ನಮೂದಿಸಿರುವ ಆಯಾ ಚುನಾವಣಾ ಕ್ಷೇತ್ರಗಳಿಗೆ ಸೀಮಿತಗೊಳಿಸಿ ಸಾರ್ವತ್ರಿಕ ರಜೆಯನ್ನು ಘೋಷಿಸಿದ್ದಾರೆ.
ಲೋಕಸಭಾ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪುಜಾಪತಿನಿಧಿ ಕಾಯ್ದೆ 1951 ಕಲಂ 135 ಬಿ ಅಡಿಯಲ್ಲಿನ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನ ಸಹಿತ ರಜೆ ನೀಡಲು ಈ ಮೂಲಕ ಆದೇಶಿಸಿದ್ದಾರೆ.
ದಿನಾಂಕ:26.04.2024 ಮತ್ತು 07.05.2024ರಂದು ಸಾರ್ವತ್ರಿಕ ರಜೆಯನ್ನು Negotiable Instrument Act 1881ರ ಪ್ರಕಾರವು ಸಹ ಘೋಷಿಸಿದೆ. ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುಂತೆ ವ್ಯವಸ್ಥೆ ಮಾಡತಕ್ಕದ್ದು ಎಂದು ಹೇಳಿದ್ದಾರೆ.
ದಿನಾಂಕ 07.05.2024ರಂದು ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ವಿವರಗಳನ್ನು ಕೆಳಗಿನ ಅಂಕಣದಲ್ಲಿ ನೀಡಲಾಗಿದೆ.
ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಣೆ
- ಚಿಕ್ಕೋಡಿ
- ಬೆಳಗಾವಿ
- ಬಾಗಲಕೋಟೆ
- ವಿಜಯಪುರ
- ಕಲಬುರಗಿ
- ರಾಯಚೂರು
- ಬೀದರ್
- ಕೊಪ್ಪಳ
- ಬಳ್ಳಾರಿ
- ಹಾವೇರಿ
- ಧಾರವಾಡ
- ಉತ್ತರ ಕನ್ನಡ
- ದಾವಣಗೆರೆ
- ಶಿವಮೊಗ್ಗ
ದಿನಾಂಕ:07.05.2024ರಂದು ಚುನಾವಣಾ ಕ್ಷೇತ್ರದ ಹೆಸರು ನಡೆಯಲಿರುವ ವಿಧಾನಸಭಾ ಉಪ ಚುನಾವಣೆ -36-ಸುರಪುರ, ಯಾದಗಿರಿ ಜಿಲ್ಲೆಯಲ್ಲಿಯೂ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ.